ಉಗ್ರರ ನಾಡಾಗಿದ್ದ ಕಾಶ್ಮೀರ, ಎನ್‌ಡಿಎ ಬಂದ ಬಳಿಕ ಅವರ ಸಂಹಾರ
ದೆಹಲಿ: ಶನಿವಾರವಷ್ಟೇ ಲಷ್ಕರೆ ತೊಯ್ಬಾ ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಆ ಮೂಲಕ ಜಮ್ಮು-ಕಾಶ್ಮೀರ ಗಡಿಯಲ್ಲಿ ನಿರಂತರವಾಗಿ ಉಗ್ರರನ್ನು ಛೂ ಬಿಟ್ಟು ಉಪಟಳ ಮೆರೆಯುತ್ತಿದ್ದ ಪಾಕಿಸ್ತಾನ ಹಾಗೂ ಪಾಕಿಸ್ತಾನದ ಎಂಜಲು ಕಾಸಿಗಾಗಿ ದಾಳಿ ಮಾಡುತ್ತಿದ್ದ ಉಗ್ರರಿಗೆ ಭಾರತೀಯ ಸೇನೆ ದಿಟ್ಟ ಪಾಠ ಕಲಿಸಿದ್ದು, ಪ್ರಸಕ್ತ ವರ್ಷದ ಆರು ತಿಂಗಳಲ್ಲಿ ಅಂದರೆ ಜುಲೈ ವೇಳೆಗೆ 100 ಉಗ್ರರನ್ನು ಹೊಡೆದುರುಳಿಸಿದೆ.ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ನೀಡಿದ್ದು, ಭಾರತೀಯ ಸೇನೆ, ಕೇಂದ್ರೀಯ ಪಡೆ, ರಾಜ್ಯ ಸರಕಾರ ಹಾಗೂ ಗುಪ್ತಚರ ಇಲಾಖೆಯ ಸಹಕಾರದೊಂದಿಗೆ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡು ಉಗ್ರರನ್ನು ಸದೆಬಡಿಯಲಾಗಿದೆ ಎಂದು ತಿಳಿಸಿದ್ದಾರೆ.ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲು ಸೇನೆಗೆ ಅಧಿಕ ಸ್ವಾತಂತ್ರ್ಯ ನೀಡಿರುವುದರಿಂದಲೇ ಇಷ್ಟು ಉಗ್ರರನ್ನು ಹತ್ಯೆ ಮಾಡಲು ಸಾಧ್ಯವಾಯಿತು. ಕಳೆದ ವರ್ಷ ಇದೇ ಅವಧಿಯಲ್ಲಿ 79 ಉಗ್ರರನ್ನು ಹೊಡೆದುರುಳಿಸಲಾಗಿತ್ತು ಎಂದು ಹೇಳಿದ್ದಾರೆ. ಉಗ್ರರ ಹತ್ಯೆಯಷ್ಟೇ ಅಲ್ಲ, ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸಯ್ಯದ್ ಸಲಾಹುದ್ದೀನ್‌ನನ್ನು ಜಾಗತಿಕ ಉಗ್ರ ಎಂದು ಅಮೆರಿಕ ಘೋಷಿಸುವಂತೆ ಮಾಡುವಲ್ಲೂ ನಾವು ಸಫಲರಾಗಿದ್ದೇವೆ ಎಂದಿದ್ದಾರೆ.
ವರ್ಷ ಉಗ್ರರ ಹತ್ಯೆ ಸಂಖ್ಯೆ
2012 (ಯಪಿಎ ) 72
2013 (ಯುಪಿಎ) 67
2014 (ಎನ್‌ಡಿಎ ) 110
2015 108
2016 150
2017 (ಜುಲೈ ವರೆಗೆ) 100
* ಒಳನುಸುಳುವಿಕೆ ಪ್ರಮಾಣದಲ್ಲೂ ಕುಸಿತ
2016ರಲ್ಲಿ ಪಾಕ್ ಉಗ್ರರು ಸುಮಾರು 371 ಬಾರಿ ಅಕ್ರಮವಾಗಿ ಒಳನುಸುಳಿದ್ದರು.
2017ಪ್ರಸಕ್ತ ವರ್ಷದ ಜುಲೈವರೆಗೆ 124 ಬಾರಿ ಒಳನುಸುಳಲಾಗಿದೆ.
ಕಲ್ಲು ತೂರಾಟಗಾರರಿಗೂ ಬಿಸಿ
ಕಳೆದ ವರ್ಷ ಹಿಜ್ಬುಲ್ ಉಗ್ರ ಬುರ್ಹಾನ್ ವಾನಿಯ ಹತ್ಯೆ ಬಳಿಕ ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರ ಉಪಟಳ ಜಾಸ್ತಿಯಾಗಿತ್ತು. ಆದರೆ ಈ ಬಾರಿ ಅದನ್ನು ಹತೋಟಿಗೆ ತರಲಾಗಿದ್ದು, ಕಲ್ಲು ತೂರಾಟಗಾರರಿಗೂ ಬಿಸಿ ಮುಟ್ಟಿಸಲಾಗಿದೆ. ಕಳೆದ ವರ್ಷ ಜುಲೈವರೆಗಿನ ಅಂಕಿ-ಅಂಶದ ಪ್ರಕಾರ 820 ಕಲ್ಲು ತೂರಾಟ ಪ್ರಕರಣ ದಾಖಲಾಗಿದ್ದವು. ಆದರೆ ಈ ಬಾರಿ ಆ ಪ್ರಕರಣಗಳು ಕೇವಲ 142ಕ್ಕೆ ಇಳಿದಿದೆ. ಉಗ್ರ ಸಂಬಂಧೀ ಚಟುವಟಿಕೆಗಳನ್ನೂ ತಹಬಂದಿಗೆ ತರಲಾಗಿದ್ದು 2016ರಲ್ಲಿ ಜುಲೈ ವೇಳೆಗೆ 168 ಉಗ್ರ ಸಂಬಂಧಿ ಚಟುವಟಿಕೆ ದಾಖಲಾಗಿದ್ದರೆ, ಪ್ರಸಕ್ತ ವರ್ಷದಲ್ಲಿ ಆ ಸಂಖ್ಯೆೆ 120ಕ್ಕೆ ಕುಸಿಯುತ್ತಿಿದೆ.
460
ಎನ್‌ಡಿಎ ಸರಕಾರಕ್ಕೆೆ ಅಸ್ತಿತ್ವಕ್ಕೆ ಬಂದ ಮೇಲೆ ಹತ್ಯೆೆ ಮಾಡಲಾಗಿರುವ ಉಗ್ರರ ಸಂಖ್ಯೆ.
ಪ್ರಸಕ್ತ ವರ್ಷ ಹತ್ಯೆಯಾದ ಪ್ರಮುಖ ಉಗ್ರರು
– ಸಬ್ಜಾರ್ ಅಹ್ಮದ್ ಭಟ್ (ಹಿಜ್ಬುಲ್ ಉಗ್ರ. ಹತ್ಯೆ- ಮೇ 27)
-ಬಷೀರ್ ಲಷ್ಕರಿ(ಲಷ್ಕರೆ ತಯ್ಯಬಾ ಉಗ್ರ. ಹತ್ಯೆ- ಜೂನ್ 1)
Leave A Reply