ಪ್ರಧಾನಿಯಾದ ಬಳಿಕ ಮೋದಿ ನೋಡಿದ ಮೊದಲ ಸಿನೆಮಾ ಇದು!
ಖ್ಯಾತ ನಟ ಜಿತೇಂದ್ರ ಅವರು ಪಾರ್ಲಿಮೆಂಟಿನಲ್ಲಿ “ಸಾಬರಮತಿ ರಿಪೋರ್ಟ್” ಸಿನೆಮಾದ ಪ್ರದರ್ಶನವನ್ನು ವೀಕ್ಷಿಸಿ ಹೊರಗೆ ಬಂದ ಬಳಿಕ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮಾತನಾಡಿದ ಜಿತೇಂದ್ರ ” ನನ್ನ 50 ವರ್ಷಗಳ ಚಿತ್ರ ಬದುಕಿನಲ್ಲಿ ಪ್ರಧಾನ ಮಂತ್ರಿಯವರೊಂದಿಗೆ ಕುಳಿತು ಸಿನೆಮಾ ವೀಕ್ಷಿಸುವ ಅವಕಾಶ ಸಿಕ್ಕಿರಲಿಲ್ಲ. ನನ್ನ ಮಗಳ ಕಾರಣದಿಂದ ಇದು ಸಾಧ್ಯವಾಯಿತು ಎಂದು ಪ್ರಧಾನಿಯವರಿಗೆ ಹೇಳಿದೆ. ಅದಕ್ಕೆ ಅವರು ನಾನು ಕೂಡ ಪ್ರಧಾನ ಮಂತ್ರಿಯಾದ ಬಳಿಕ ನೋಡುತ್ತಿರುವ ಮೊದಲ ಸಿನೆಮಾ ಇದು ಎಂದು ಹೇಳಿದರು” ಎಂದು ಹರ್ಷಚಿತ್ತರಾಗಿ ಪ್ರತಿಕ್ರಿಯಿಸಿದರು.
ನರೇಂದ್ರ ಮೋದಿಯವರು ಪ್ರಧಾನಿಯಾಗುವ ಮೊದಲು ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅವರ ರಾಜಕೀಯ ಜೀವನದಲ್ಲಿ ಸಾಬರಮತಿ ಎಕ್ಸಪ್ರೆಸ್ ದುರಂತದ ಕರಾಳತೆ ಯಾವತ್ತೂ ಮರೆಯಲಾಗುವುದಿಲ್ಲ. ಸಾಬರಮತಿ ರೈಲಿಗೆ ಮತಾಂಧರು ಬೆಂಕಿ ಹಚ್ಚಿದ್ದು, ಅದರ ನಂತರ ನಡೆದ ಕೋಮು ಗಲಭೆಗಳು, ಅದರ ಬಳಿಕ ಗುಜರಾತ್ ಪೊಲೀಸರು ಮುಸಲಿಯರ ಗುಂಪೊಂದು ಬೆಂಕಿ ಹಚ್ಚಿದ್ದು ಎಂದು ಆರೋಪಿಸಿದ್ದು, ಚಾರ್ಜ್ ಶೀಟ್ ನಲ್ಲಿ ಹಾಗೆ ಉಲ್ಲೇಖಿಸಲ್ಪಟ್ಟಿದ್ದು, ನಂತರ ಆ ಬಗ್ಗೆ ಆಯೋಗದ ನೇಮಕ, ಆಗ ಲಾಲು ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದದ್ದು, ಆಗ ಅದು ಅಪಘಾತ ಎಂದು ಬಿಂಬಿತವಾದದ್ದು, ಗುಜರಾತ್ ಹೈಕೋರ್ಟ್ ಆ ಆಯೋಗವೇ ಅಸಂವಿಧಾನಿಕ ಎಂದು ಘೋಷಿಸಿದ್ದು ಹೀಗೆ ಅನೇಕ ಘಟನೆಗಳ ಸುತ್ತ ಈ ಸಿನೆಮಾ ಸುತ್ತುತ್ತದೆ.
ಈ ಸಿನೆಮಾವನ್ನು ಜಿತೇಂದ್ರ ಅವರ ಮಗಳು ಏಕ್ತಾ ಕಪೂರ್ ಹಾಗೂ ಪತ್ನಿ ಶೋಭಾ ಕಪೂರ್ ಅವರು ಬಾಲಾಜಿ ಮೋಶನ್ ಫಿಚ್ಚರ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಅವರೊಂದಿಗೆ ವಿಪಿನ್ ಅಗ್ನಿಹೋತ್ರಿ ಫಿಲಂ ಹಾಗೂ ವಿಖಿರ್ ಫಿಲಂ ಪ್ರೋಡಕ್ಷನ್ ಅವರು ಜೊತೆಯಾಗಿದ್ದಾರೆ. ಆರಂಭದಲ್ಲಿ ರಂಜನ್ ಚಂಡೆಲ್ ಅವರು ನಿರ್ದೇಶನದ ಹೊಣೆಯನ್ನು ಹೊತ್ತಿದ್ದು ನಂತರ ವಿವಿಧ ಕಾರಣಗಳಿಂದಾಗಿ ಸಿನೆಮಾದಿಂದ ಹೊರಬಂದಿದ್ದರು. ಆ ಬಳಿಕ ದೀರಜ್ ಸರ್ಣಾ ಅವರು ಈ ಸಿನೆಮಾದ ನಿರ್ದೇಶಕರಾದರು. 12 ಥ್ ಫೇಲ್ ಸಿನೆಮಾದಿಂದ ಖ್ಯಾತರಾಗಿದ್ದ ವಿಕ್ರಾಂತ್ ಮೆಸ್ಸಿ ಇದರ ನಾಯಕನಟರಾಗಿದ್ದರೆ, ರಾಶಿ ಖನ್ನಾ ಇದರ ನಾಯಕಿನಟಿಯಾಗಿದ್ದಾರೆ.
Leave A Reply