ಪಿ.ವಿ.ಸಿಂಧೂ ಮದುವೆಯಾಗುತ್ತಿರುವ ಗಂಡು ಯಾರು?
ಒಲಿಂಪಿಕ್ಸ್ ವಿಜೇತೆ ಪಿ.ವಿ.ಸಿಂಧೂ ಶೀಘ್ರದಲ್ಲಿ ಹಸೆಮಣೆ ಏರಲಿದ್ದಾರೆ. ಅವರು ರಾಜಾಸ್ಥಾನದ ಉದಯಪುರದಲ್ಲಿ ಮದುವೆಯಾಗಲಿದ್ದಾರೆ. ಮದುವೆಯ ದಿನಾಂಕ ಕೂಡ ಘೋಷಣೆಯಾಗಿದ್ದು ಡಿಸೆಂಬರ್ 22 ರಂದು ಮದುವೆ ನಡೆಯಲಿದೆ. ಅದರ ನಂತರ ಹೈದ್ರಾಬಾದಿನಲ್ಲಿ ಡಿಸೆಂಬರ್ 24 ರಂದು ಗ್ರ್ಯಾಂಡ್ ರಿಸೆಪ್ಷನ್ ಕೂಡ ನಡೆಯಲಿದೆ. ಹಾಗಾದ್ರೆ ಎಲ್ಲರಲ್ಲಿಯೂ ಇದ್ದ ಪ್ರಶ್ನೆ ಏನೆಂದರೆ ಸಿಂಧೂ ಮದುವೆಯಾಗುತ್ತಿರುವ ಗಂಡು ಕ್ರೀಡಾ ಕ್ಷೇತ್ರದವರಾ? ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಮದುವೆ ಗಂಡಿನ ಹೆಸರು ವೆಂಕಟ ದತ್ತ ಸಾಯಿ. ಮದುಮಗ ಐಟಿ ಕ್ಷೇತ್ರದಲ್ಲಿದ್ದಾರೆ.
29 ವರ್ಷ ವಯಸ್ಸಿನ ಸಿಂಧೂ ಮದುವೆಯನ್ನು ಅವರ ತಂದೆ ಪಿ.ವಿ.ರಮಣ್ ಅವರೇ ಬಹಿರಂಗಪಡಿಸಿದ್ದಾರೆ. ಎರಡೂ ಕುಟುಂಬಗಳು ಕೆಲವು ವರ್ಷಗಳಿಂದ ಪರಿಚಯಸ್ಥರಾಗಿದ್ದು, ತಿಂಗಳ ಹಿಂದೆಯಷ್ಟೇ ಮದುವೆ ನಿಶ್ಚಿತವಾಗಿದೆ. ಇನ್ನು 2025 ಜನವರಿಯಿಂದ ಸಿಂಧೂ ಬಿಡುವಿಲ್ಲದ ಸ್ಪರ್ಧಾಕೂಟದಲ್ಲಿ ಭಾಗವಹಿಸಬೇಕಾಗಿರುವುದರಿಂದ ಡಿಸೆಂಬರ್ ನಲ್ಲಿಯೇ ಮದುವೆ ನಡೆಸಲು ಎರಡೂ ಕುಟುಂಬದವರು ನಿರ್ಧರಿಸಿದ್ದಾರೆ.
ವೆಂಕಟ ದತ್ತ ಸಾಯಿ ಪೊಸಿಡೆಕ್ಸ್ ಟೆಕ್ನಾಲಜಿಯಲ್ಲಿ ಕಾರ್ಯಕಾರಿ ನಿರ್ದೇಶಕರಾಗಿ ಉದ್ಯೋಗದಲ್ಲಿದ್ದಾರೆ. ವೆಂಕಟ ದತ್ತ ಸಾಯಿ ಅವರ ತಂದೆ ಭಾರತೀಯ ಕಂದಾಯ ಇಲಾಖೆಯಲ್ಲಿ ಸೇವೆಯಲ್ಲಿದ್ದು ಪ್ರಸ್ತುತ ನಿವೃತ್ತರಾಗಿದ್ದಾರೆ. ಅವರು ಮಗನ ಕಂಪೆನಿಯಲ್ಲಿಯೇ ಆಡಳಿತ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನೂತನ ವಧು ವರರಿಗೆ ಶುಭ ಹಾರೈಸೋಣ ಅಲ್ಲವೇ?
Leave A Reply