ಕರ್ನಾಟಕದ ಹೆಗಡೆ ಸೇರಿ ನವ ಸಂಸದರಿಗೆ ಸಚಿವ ಸ್ಥಾನ
ದೆಹಲಿ: ನಿರೀಕ್ಷೆಯಂತೆ ಪ್ರಧಾನಿ ನರೇಂದ್ರ ಮೋದಿ ಅಧಿಕ ಸಂಖ್ಯೆಯ ಸಂಸದರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದು, ಭಾನುವಾರ ಒಂಬತ್ತು ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿಸದ್ದಾರೆ. ಕರ್ನಾಟಕದ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಸಹ ಸಂಪುಟ ಸೇರಿದ್ದಾರೆ. ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ನಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸಚಿವ ಸಂಪುಟ ಪುನರ್ ರಚನೆ ಬೆನ್ನಲ್ಲೇ ಪ್ರಧಾನಿ ಮೋದಿ ಬ್ರಿಿಕ್‌ಸ್ ಶೃಂಗಸಭೆ ಹಿನ್ನೆಲೆಯಲ್ಲಿ ಚೀನಾಕ್ಕೆ ತೆರಳಿದ್ದಾರೆ.
ನೂತನ ಸಚಿವರ ಪಟ್ಟಿ
ಅನಂತ್‌ಕುಮಾರ್ ಹೆಗಡೆ (ಉತ್ತರ ಕನ್ನಡದ ಸಂಸದ)
ಹರದೀಪ್ ಸಿಂಗ್ ಪುರಿ (ನಿವೃತ್ತ ಐಎಫ್‌ಎಸ್ ಅಧಿಕಾರಿ)
ಶಿವ್ ಪ್ರತಾಪ್ ಶುಕ್ಲಾ (ಉತ್ತರ ಪ್ರದೇಶದ ರಾಜ್ಯಸಭಾ ಸದಸ್ಯ)
ರಾಜ್ ಕುಮಾರ್ ಸಿಂಗ್ (ಬಿಹಾರದ ಅಹಾರ್ ಕ್ಷೇತ್ರದ ಸಂಸದ)
ಸತ್ಯಪಾಲ್ ಸಿಂಗ್ (ಭಾಗಪತ್ ಕ್ಷೇತ್ರದ ಸಂಸದ)
ಅಲ್ಫೋಸ್ ಕನ್ನಂಥಾನಮ್ (ನಿವೃತ್ತ ಐಎಎಸ್ ಅಧಿಕಾರಿ)
ಅಶ್ವಿನ್ ಕುಮಾರ್ ಚೌಬೆ (ಬಕ್ಸಾರ್‌ನ ಸಂಸದ)
ಗಜೇಂದ್ರ ಸಿಂಗ್ ಶೆಖಾವತ್ (ಜೋಧಪುರದ ಸಂಸದ)
ಡಾ.ವಿರೇಂದ್ರ ಕುಮಾರ್ (ಮಧ್ಯಪ್ರದೇಶದ ಸಂಸದ)
Leave A Reply