ವಿಜಯ ಮಲ್ಯ, ನೀರವ್ ಮೋದಿ ಸೇರಿ 22,280 ಕೋಟಿ ರೂ ಬಾಕಿ ವಸೂಲಿ – ನಿರ್ಮಲಾ
ದೇಶದ ವಿವಿಧ ಬ್ಯಾಂಕುಗಳಿಂದ ಸಾಲ ಪಡೆದು ವಂಚಿಸಿದವರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಲೋಕಸಭೆಯಲ್ಲಿ ದೇಶದ ವಿತ್ತ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿದ್ದಾರೆ. ಇಲ್ಲಿಯ ತನಕ ಅಂದಾಜು 22,280 ಕೋಟಿ ರೂಪಾಯಿಗಳನ್ನು ಈಡಿ ವಸೂಲಿ ಮಾಡಿದೆ. ಇದರಲ್ಲಿ ವಿಜಯ ಮಲ್ಯ ಅವರ ಆಸ್ತಿ ಮಾರಿ ಸಂಗ್ರಹಿಸಿದ 14000 ಕೋಟಿ ರೂಪಾಯಿ ಮತ್ತು ನೀರವ್ ಮೋದಿಯ ಜಪ್ತಿ ಆಸ್ತಿ ಮಾರಿ ಸಂಗ್ರಹಿಸಿದ 1,053 ಕೂಡ ಸೇರಿದೆ ಎಂದು ಅವರು ಹೇಳಿದ್ದಾರೆ.
ಲೋಕಸಭೆಯಲ್ಲಿ ಈ ಬಗ್ಗೆ ಒತ್ತಿ ಹೇಳಿದ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಅಪರಾಧಿಗಳಿಂದ ಹಣವನ್ನು ವಸೂಲಿ ಮಾಡುವುದರಲ್ಲಿ ಯಾವುದೇ ರೀತಿಯ ಮುಲಾಜನ್ನು ನಮ್ಮ ಸರಕಾರ ತೋರಿಸುವುದಿಲ್ಲ ಎಂದರು. ಹೀಗೆ ವಸೂಲಿ ಮಾಡಿದ ಹಣವನ್ನು ಅದರ ಮೂಲ ಮಾಲೀಕರಾದ ಸರಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಹಿಂದಿರುಗಿಸಲಾಗುವುದು ಎಂದು ಅವರು ಹೇಳಿದರು.
ಈಡಿ ಮತ್ತು ಬ್ಯಾಂಕುಗಳು ಸೇರಿ ವಿಶೇಷ ನ್ಯಾಯಾಲಯವನ್ನು ರಚಿಸಿದ್ದು, ಮುಂಬೈಯ ಈ ನ್ಯಾಯಾಲಯದಲ್ಲಿ ಮೆಹುಲ್ ಚೋಕ್ಸಿ ಹಾಗೂ ನೀರವ್ ಮೋದಿಯಿಂದ ಸ್ವಾಧೀನಪಡಿಸಿಕೊಂಡ ಆಸ್ತಿಪಾಸ್ತಿಗಳ ಮಾರಾಟದಿಂದ ಸಂಗ್ರಹಿಸಲಾದ ಮೊತ್ತದ ಲೆಕ್ಕಾಚಾರಗಳು ಕೂಡ ನಡೆಯುತ್ತಿವೆ. ಈ ಆರ್ಥಿಕ ಅಪರಾಧಿಗಳು ಪಂಜಾಬ್ ನ್ಯಾಶನಲ್ ಬ್ಯಾಂಕಿಗೆ 13000 ಕೋಟಿ ರೂಪಾಯಿ ಬಾಕಿ ಇರಿಸಿದ್ದಾರೆ.
ಮುಂಬೈಯಲ್ಲಿರುವ ಈ ವಿಶೇಷ ನ್ಯಾಯಾಲಯ ಚೋಕ್ಸಿಯ 2,566 ಕೋಟಿ ರೂ ಮೌಲ್ಯದ ಆಸ್ತಿಯನ್ನು ಏಲಂ ಮಾಡಲು ಈಗಾಗಲೇ ಸಮ್ಮತಿ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ವಶಪಡಿಸಿಕೊಳ್ಳಲಾಗಿರುವ ಹಣಕಾಸಿನ ಲೆಕ್ಕಾಚಾರವನ್ನು ನೀಡಿದ್ದಾರೆ.
ವಿಜಯ ಮಲ್ಯ: 14,131.6 ಕೋಟಿ
ನೀರವ್ ಮೋದಿ: 1,052.58 ಕೋಟಿ
ನ್ಯಾಶನಲ್ ಸ್ಪೋಟ್ ಏಕ್ಸಚೆಂಜ್ ಸ್ಕ್ಯಾಮ್: 17.47 ಕೋಟಿ
ಎಸ್ ಆರ್ ಎಸ್: 20.15 ಕೋಟಿ
ರೋಸ್ ವ್ಯಾಲಿ ಗ್ರೂಪ್: 19.40 ಕೋಟಿ
ಸೂರ್ಯ ಫಾರ್ಮಾಸೆಟಿಕಲ್ : 185.13 ಕೋಟಿ
ಹೀರಾ ಗ್ರೂಪ್ : 226 ಕೋಟಿ
ನಾಯ್ಡು ಅಮೃತೇಶ್ ರೆಡ್ಡಿ ಮತ್ತು ಇತರರು: 12.73 ಕೋಟಿ
ಮೆಹುಲ್ ಚೋಕ್ಸಿ ಮತ್ತು ಇತರರು: 2,565.90 ಕೋಟಿ
ನಫೀಸಾ ಓವರ್ ಸೀಸ್ ಮತ್ತು ಇತರರು: 25.38 ಕೋಟಿ
ಈ ಮೇಲಿನ ವ್ಯಕ್ತಿ ಅಥವಾ ಸಂಸ್ಥೆಗಳಿಂದ ಹಣ ವಸೂಲಿ ಮಾಡಲಾಗುತ್ತಿದ್ದು, ಅದು ಎಲ್ಲಿ ತಲುಪಬೇಕೋ ಅಲ್ಲಿ ತಲುಪುತ್ತದೆ ಎನ್ನುವ ಅರ್ಥದ ಮಾತುಗಳನ್ನು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Leave A Reply