ಕಾನೂನಿನ ಕುಣಿಕೆಯಿಂದ ಸುಲಭವಾಗಿ ಪಾರಾದ ಕಾಗೆ ಬಿರಿಯಾನಿ ದಂಪತಿ!
Posted On December 24, 2024

ತಮಿಳುನಾಡಿನಲ್ಲಿ ತಿರುವಳ್ಳೂರು ಎನ್ನುವ ಪ್ರದೇಶದಲ್ಲಿ ಹೆದ್ದಾರಿ ಬದಿಯಲ್ಲಿದ್ದ ಹೋಟೇಲೊಂದರಲ್ಲಿ ಬಿರಿಯಾನಿ ತಯಾರಿಸಲು ಕಾಗೆಗಳ ಮಾಂಸ ಬಳಸಲಾಗುತ್ತಿತ್ತು ಎಂಬ ಸಂಶಯ ಬಂದ ಕಾರಣ ಅರಣ್ಯಾಧಿಕಾರಿಗಳು ಹೋಟೇಲಿನ ಮೇಲೆ ದಾಳಿ ಮಾಡಿದ್ದಾರೆ. ಆಗ ಅಲ್ಲಿ ಬಿರಿಯಾನಿ ತಯಾರಾಗುತ್ತಿತ್ತು. ಬಿರಿಯಾನಿಗೆ ಏನು ಹಾಕುತ್ತಿದ್ದೀರಿ ಎಂದು ಅಧಿಕಾರಿಗಳು ಕೇಳಿದ್ದಾರೆ. ಅಲ್ಲಿ ಒಳಗೆ ನೋಡಿದರೆ ಅರಣ್ಯಾಧಿಕಾರಿಗಳಿಗೆ ಆಶ್ಚರ್ಯವಾಗಿದೆ. ಏಕೆಂದರೆ ಅಲ್ಲಿ ಕೋಳಿಗಳು ಇರಬೇಕಾದ ಜಾಗದಲ್ಲಿ ಕಾಗೆಗಳು ಇದ್ದವು. ತಕ್ಷಣ ಅಧಿಕಾರಿಗಳು ಇವರನ್ನು ಬಂಧಿಸಿದ್ದಾರೆ.
ಆದರೆ ಕಾನೂನಿನಲ್ಲಿ ಕಾಗೆಗಳನ್ನು ಕೊಂದರೆ ಶಿಕ್ಷೆ ಏನು?
ಏಕೆಂದರೆ 1972 ರ ಅರಣ್ಯ ಇಲಾಖೆ ಸಂರಕ್ಷಣಾ ಕಾಯ್ದೆಯಡಿ ಕಾಗೆಗಳನ್ನು ಕೀಟಗಳೆಂದು ವರ್ಗೀಕರಿಸಲಾಗಿದೆ. ಕೀಟಗಳನ್ನು ಕೊಂದರೆ ಶಿಕ್ಷೆ ಏನು ಎಂದು ಹೇಳಲಾಗಿಲ್ಲ. ಪರಿಣಾಮವಾಗಿ ರಮೇಶ್ ಮತ್ತು ಭೂಚಮ್ಮ ಅವರನ್ನು ಬಂಧಿಸದೇ ದಂಡ ವಿಧಿಸಿ ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿದೆ.
ಕಾಗೆ ಮಾಂಸ ಸೇವಿಸುವುದರಿಂದ ತಿನ್ನುವವರಿಗೆ ಏನಾದರೂ ಅಪಾಯ ಆಗುತ್ತದೆಯೋ ಇಲ್ವೋ ಬೇರೆ ವಿಷಯ. ಆದರೆ ಇದರಿಂದ ಪರಿಸರದ ಮೇಲೆ ಪ್ರಭಾವ ಬೀಳುವುದಂತೂ ಖಂಡಿತ. ಯಾಕೆಂದರೆ ಪ್ರಕೃತಿಯಲ್ಲಿ ಕಾಗೆಗಳ ಸಂತತಿ ಕಡಿಮೆಯಾಗುತ್ತಾ ಇದೆ. ಹೀಗೆ ಒಂದೊಂದೇ ಪಕ್ಷಿಗಳು ಅಳಿವಿನಂಚಿನತ್ತ ಸಾಗಿದರೆ ಆಗ ಪ್ರಾಕೃತಿಕ ಅಸಮತೋಲನ ಉಂಟಾಗುತ್ತದೆ. ಮಾನವನ ಅವಶ್ಯಕತೆಗಳು ಮತ್ತು ಪರಿಸರ ಸಂರಕ್ಷಣೆಯ ನಡುವಿನ ಸೂಕ್ಷ್ಮತೆಯ ಪ್ರಶ್ನೆಯಾಗಿರುವ ಈ ಪಕ್ಷಿಗಳ ಉಳಿವಿಗಾಗಿ ಅವುಗಳನ್ನು ಕೊಲ್ಲುವುದು ಸರಿಯಲ್ಲ.
ಸದ್ಯ ಆರೋಪಿಗಳ ವಶದಲ್ಲಿದ್ದ 11 ಕಾಗೆಗಳನ್ನು ಬಿಡುಗಡೆ ಮಾಡಲಾಗಿದೆ. ಇಲ್ಲಿಯ ತನಕ ದನ, ನಾಯಿ ಬಿರಿಯಾನಿಗಳ ನಡುವೆ ಕಾಗೆ ಬಿರಿಯಾನಿಯೂ ಸೇರಿಕೊಂಡು ಆ ಹೋಟೇಲಿನಲ್ಲಿ ಬಿರಿಯಾನಿ ತಿಂದವರ ಪಾಡು ಹೇಗಿದೆಯೋ ದೇವರಿಗೆ ಗೊತ್ತು.
- Advertisement -
Trending Now
ಕಲ್ಯಾಣ ಮಂಟಪದಲ್ಲಿ ಗೋವಿಗೆ ಸೀಮಂತ!
April 5, 2025
ನಿರಂತರ 25 ಗಂಟೆ ಭಾಷಣ ಮಾಡಿದ ಸಂಸದ!
April 5, 2025
Leave A Reply