ಶಬ್ದ ಮಾಲೀನ್ಯ: 300 ಮಸೀದಿ ಮೇಲಿನ ಸ್ಪೀಕರ್ ತೆಗೆದ ಚೀನಾ
ಬೀಜಿಂಗ್: ಅಕ್ಕಪಕ್ಕದವರಿಗೆ ಮಸೀದಿಯ ಸ್ಪೀಕರ್‌ಗಳಿಂದ ತೊಂದರೆಯಾಗುತ್ತಿದೆ ಎಂದು ದೂರು ಬಂದಿದ್ದರಿಂದ ಚೀನಾ ಸರಕಾರ ಕ್ವಾ0ಗೈ ಪ್ರದೇಶದ 300 ಮಸೀದಿಗಳ ಮೇಲಿನ ಸ್ಪೀಕರ್‌ಗಳನ್ನು ತೆಗೆದುಹಾಕಿದೆ. ಇನ್ನು ಮೂರು ದಿನದಲ್ಲಿ 1000 ಸ್ಪೀಕರ್‌ಗಳನ್ನು ತೆಗೆದುಹಾಕುವ ಗುರಿ ಹೊಂದಲಾಗಿದೆ.
ಈ ಕುರಿತು ವರದಿ ಮಾಡಿರುವ ಗ್ಲೋಬಲ್ ಟೈಮ್ಸ್ ಪತ್ರಿಕೆ ‘ಯಾವುದೇ ಧಾರ್ಮಿಕ ಕಾರಣಗಳಿಗಾಗಿ ಸ್ಪೀಕರ್‌ಗಳನ್ನು ತೆಗೆದಿಲ್ಲ. ಕೇವಲ ಶಬ್ಧ ಮಾಲಿನ್ಯ ಕುರಿತು ಮಸೀದಿ ಅಕ್ಕ ಪಕ್ಕದವರಿಂದ ಬಂದ ದೂರುಗಳಿಂದ ತೆಗೆದು ಹಾಕಲಾಗಿದೆ ಎಂದು ತಿಳಿಸಿದೆ. ಜನರು ಕ್ವಾ0ಗೈ ಪ್ರದೇಶ ಪರಿಸರ ಇಲಾಖೆ ಅಧಿಕಾರಿಗೆ ಶಬ್ಧ ಮಾಲೀನ್ಯದಿಂದ ಉಂಟಾಗುವ ತೊಂದರೆಗಳ ಕುರಿತು ದೂರು ನೀಡಿದ್ದರು. ದೂರು ಆಧರಿಸಿ ಕ್ರಮ ಕೈಗೊಳ್ಳಲಾಗಿದ್ದು, ಇದೇ ಕ್ರಮವನ್ನು ಎಲ್ಲೇಡೆ ಅನುಸರಿಸಬೇಕು ಎಂಬ ಸಲಹೆಗಳನ್ನು ಸಾರ್ವಜನಿಕರು ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಕ್ರಮಕ್ಕೆೆ ಭಾರಿ ಬೆಂಬಲ ವ್ಯಕ್ತವಾಗಿದೆ. ಇನ್ನು ಈ ಪ್ರಾ0ತ್ಯದಲ್ಲಿ ಬುರ್ಕಾ ಮತ್ತು ಗಡ್ಡವನ್ನು ನಿಷೇಧಿಸಲಾಗಿದೆ.
ಮುಸ್ಲಿಮರು ದೇಶದಲ್ಲಿ ತಮ್ಮ ಧರ್ಮವನ್ನು ದೇಶಾದ್ಯಂತ ಆಚರಿಸಲು ಯಾವುದೇ ಅಡೆ ತಡೆಗಳಿಲ್ಲ. ಸ್ವತಂತ್ರ್ಯವಾಗಿ ಆಚರಿಸುವ ಹಕ್ಕು ಇದೆ ಎಂದು ಸರಕಾರ ತಿಳಿಸಿದೆ.
Leave A Reply