ಇಸ್ಕಾನ್ ಸಂತ ಚಿನ್ಮಯ್ ಕೃಷ್ಣದಾಸ್ ಜೈಲಿನಲ್ಲಿ ಗಂಭೀರ ಅಸ್ವಸ್ಥ: ಸೂಕ್ತ ಚಿಕಿತ್ಸೆ ನೀಡಲು ಸರಕಾರ ನಕಾರ…
ಮೂಲಭೂತವಾದಿಗಳ ಕಪಿಮುಷ್ಟಿಯಲ್ಲಿರುವ ಬಾಂಗ್ಲಾದೇಶದಲ್ಲಿ ಬಂಧಿಸಲ್ಪಟ್ಟಿರುವ ಇಸ್ಕಾನ್ ಸಂತ ಚಿನ್ಮಯ್ ಕೃಷ್ಣದಾಸ್ ಅವರ ಆರೋಗ್ಯ ಗಂಭೀರವಾಗಿ ಹದಗೆಟ್ಟಿದೆ. ಬಾಂಗ್ಲಾ ದೇಶದಲ್ಲಿರುವ ಹಿಂದೂಗಳು ಈಗ ಜಗತ್ತಿಗೆ ವಿನಂತಿಸುತ್ತಾ, ಸಂತ ಚಿನ್ಮಯ್ ದಾಸ್ ಅವರ ಆರೋಗ್ಯಕ್ಕಾಗಿ ಎಲ್ಲರೂ ಪ್ರಾರ್ಥಿಸಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಬಾಂಗ್ಲಾ ದೇಶದ ಸರಕಾರ ಚಿನ್ಮಯ್ ದಾಸರ ಅನಾರೋಗ್ಯದ ಚಿಕಿತ್ಸೆಗಾಗಿ ಏನೂ ಮಾಡದೇ ಇರುವುದರಿಂದ ಇಸ್ಕಾನ್ ಬೆಂಬಲಿಗರು ಚಿಂತೆಗೆ ಒಳಗಾಗಿದ್ದಾರೆ.
ಈ ಬಗ್ಗೆ ಪ್ರಕಟನೆಯನ್ನು ಹೊರಡಿಸಿರುವ ಬಾಂಗ್ಲಾದೇಶದ ಬಂಗಾಳಿ ಹಿಂದೂ ಹಕ್ಕುಗಳ ಪಂಗಡದವರು ” ಚಿನ್ಮಯ್ ಕೃಷ್ಣದಾಸ್ ಅವರು ಗಂಭೀರವಾಗಿ ಅನಾರೋಗ್ಯ ಪೀಡಿತರಾಗಿದ್ದರೂ ಅವರ ಬಗ್ಗೆ ಸ್ಥಳೀಯ ಸರಕಾರ ತೀವ್ರ ಅಸಡ್ಡೆಯನ್ನು ತೋರುತ್ತಿದೆ. ಅವರು ಎರಡು ಬಾರಿ ಆಸ್ಪತ್ರೆಗೆ ದಾಖಲಾಗುವಂತಾಗಿದೆ. ಬಾಂಗ್ಲಾದೇಶದ ಎಲ್ಲಾ ದೇವಾಲಯಗಳಲ್ಲಿ ಜನವರಿ 1 ರಂದು ವಿಶೇಷ ಪ್ರಾರ್ಥನೆ, ಪೂಜೆಗೆ ಸಂಕಲ್ಪಿಸಲಾಗಿದೆ. ಎಲ್ಲರೂ ಸಹಕರಿಸಬೇಕು” ಎಂದು ಮನವಿ ಮಾಡಿದ್ದಾರೆ.
ಚಿನ್ಮಯ ಕೃಷ್ಣದಾಸ್ ಯಾನೆ ಚಿನ್ಮಯ ಕೃಷ್ಣದಾಸ್ ಬ್ರಹ್ಮಚಾರಿ ಅವರು ಬಾಂಗ್ಲಾದೇಶ ಶೋಮಿಲಿಟೋ ಸನಾತನ ಜಾಗರಣ ಜೊಟೆ ( ಬಿಎಸ್ ಎಸ್ ಜೆಜೆ) ಇದರ ವಕ್ತಾರರಾಗಿದ್ದು, ಬಾಂಗ್ಲಾ ದೇಶದ ಸರಕಾರದ ವಿರುದ್ಧ ಹಿಂದೂಗಳ ರಕ್ಷಣೆಗಾಗಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದ ಕಾರಣ ದೇಶದ್ರೋಹದ ಅಡಿಯಲ್ಲಿ ಬಂಧಿಸಿ ಜೈಲಿಗಟ್ಟಲಾಗಿತ್ತು.
ಶೇಖ್ ಹಸೀನಾ ವಿರುದ್ಧ ಸ್ಥಳೀಯರು ಬಂಡಾಯ ಎದ್ದು ನಂತರ ಮೊಹಮ್ಮದ್ ಯೂನಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅಲ್ಲಿನ ಮತಾಂಧರು ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ, ಹತ್ಯೆಗಳು ಮತ್ತು ಮಹಿಳೆಯರ ಮೇಲೆ ಅತ್ಯಾಚಾರ, ಹೆಣ್ಣುಮಕ್ಕಳ ಕಣ್ಮರೆ, ಹಿಂದೂ ಮನೆಗಳಿಗೆ ಬೆಂಕಿ ಹೀಗೆ ನಿರಂತರ ದಬ್ಬಾಳಿಕೆಗಳು ನಡೆಯುತ್ತಿವೆ.
Leave A Reply