ಉತ್ತಮ ಕಾರ್ಯಕ್ಷಮತೆ, ಸೀತಾರಾಮನ್‌ಗೆ ರಕ್ಷಣಾ ಖಾತೆ

ದೆಹಲಿ: ದೇಶದ ರಕ್ಷಣಾ ವ್ಯವಸ್ಥೆೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ರಕ್ಷಣಾ ಇಲಾಖೆ ಸಚಿವರಾಗಿ ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರನ್ನು ಆಯ್ಕೆ ಮಾಡುವ ಮೂಲಕ ಮೋದಿ ರಾಷ್ಟ್ರದ ಆಡಳಿತದಲ್ಲೇ ಹೊಸ ಶಕೆ ಆರಂಭಿಸಿದ್ದಾರೆ. ಮಹಿಳೆಯೊಬ್ಬರು ಇದೇ ಪ್ರಥಮ ಬಾರಿಗೆ ಸ್ವತಂತ್ರ್ಯವಾಗಿ ರಕ್ಷಣಾ ಖಾತೆಗೆ ಆಯ್ಕೆಯಾಗಿದ್ದಾರೆ. ದೇಶದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ, 1975 ಮತ್ತು 1980ರಿಂದ 1982ರವರೆಗೆ ಹೆಚ್ಚುವರಿಯಾಗಿ ರಕ್ಷಣಾ ಖಾತೆ ನಿರ್ವಹಿಸಿದ್ದರು.
ಪ್ರಸ್ತುತ ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ ಮೋದಿ ಮತ್ತು ಅಮಿತ್ ಶಾ ಜೋಡಿ ಅಚ್ಚರಿಯ ಘೋಷಣೆ ಮಾಡಿದ್ದು, ನಿರ್ಮಲಾ ಸೀತಾರಾಮ್‌ನ್‌ಗೆ ರಕ್ಷಣಾ ಖಾತೆ ನೀಡಿ, ಹೊಸ ಮನ್ವಂತರಕ್ಕೆೆ ಮುನ್ನುಡಿ ಬರೆದಿದ್ದಾರೆ.
ಕಾರ್ಪೋರೇಟ್ ವ್ಯವಹಾರಗಳ ಖಾತೆ ಮತ್ತು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ರಾಜ್ಯ ಖಾತೆಯನ್ನು ಯಶಸ್ವಿಯಾಗಿ ನಿರ್ವಹಿಸಿರುವ ಸೀತಾರಾಮನ್ ಸಾಮರ್ಥ್ಯವನ್ನು ಪರಿಗಣಿಸಿ ಮೋದಿ ನಿರ್ಧಾರ ತೆಗೆದುಕೊಂಡಿದ್ದಾರೆ.ಇತ್ತೀಚೆಗೆ ರಾಷ್ಟ್ರಕ್ಕೆೆ ಕಂಟಕವಾಗಿ ಪರಿಗಣಿಸಿದ್ದ ಡೋಕ್ಲಾ0ವಿವಾದದ ಕುರಿತು ಬ್ರಿಕ್‌ಸ್ ಸಭೆಗೆ ತೆರಳಿದ್ದ ಸೀತಾರಾಮಾನ್ ಚೀನಾ ಮತ್ತು ಭಾರತದ ಮಧ್ಯೆೆ ಉತ್ತಮ ಸಂಬಂಧ ಏರ್ಪಡಿಸುವಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸಿದ್ದರು. ಜತೆಗೆ ಭವಿಷ್ಯದ ಚುನಾವಣೆಯಲ್ಲಿ ಮಹಿಳೆಯರ ವೋಟುಗಳನ್ನು ಪಡೆಯಲು ಇದು ಸಹಕಾರಿಯಾಗಲಿದೆ. ಅಲ್ಲದೇ ಕಾರ್ಯದಕ್ಷತೆಯುಳ್ಳ ವ್ಯಕ್ತಿಗೆ ತಕ್ಕ ಖಾತೆ ನೀಡಲಾಗಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.
Leave A Reply