ಓಯೋ ಲಾಡ್ಜಿನಲ್ಲಿ ಇನ್ನು ಅವಿವಾಹಿತ ಜೋಡಿಗಳಿಗೆ ರೂಂ ಕೊಡುವುದಿಲ್ಲ!
Posted On January 6, 2025
ಅವಿವಾಹಿತರಿಗೆ ಓಯೋ ಹೇಳಿ ಮಾಡಿಸಿದ್ದು ಎನ್ನುವ ಅಪಾರ್ಥದ ಟ್ರೋಲ್, ಮಿಮ್ಸ್ ಸಾಕಷ್ಟು ವೈರಲ್ ಆಗುತ್ತಿದ್ದಂತೆ ಓಯೋ ಸಂಸ್ಥೆ ಎಚ್ಚೆತ್ತುಕೊಂಡಿದೆ. ಇನ್ನು ಮುಂದೆ ಓಯೋ ಪಾಲುದಾರಿಕೆಯ ಹೋಟೇಲುಗಳಲ್ಲಿ ಅವಿವಾಹಿತ ಜೋಡಿಗಳಿಗೆ ರೂಂ ಕೊಡಲು ಸಾಧ್ಯವಿಲ್ಲ ಎನ್ನುವ ನಿಯಮಗಳನ್ನು ಜಾರಿಗೊಳಿಸಿದೆ. ಇದರಿಂದ ಇನ್ನು ಮುಂದೆ ಓಯೋ ಹೋಟೇಲುಗಳಲ್ಲಿ ರೂಂ ಮಾಡಿ “ರೆಸ್ಟ್” ತೆಗೆದುಕೊಳ್ಳೋಣ ಎಂದು ಪ್ಲಾನ್ ಮಾಡುತ್ತಿದ್ದ ಅವಿವಾಹಿತ ಜೋಡಿಗಳಿಗೆ ಸಾಕಷ್ಟು ನಿರಾಸೆಯಾಗಬಹುದು. ಓಯೋ ಭಾರತಾದ್ಯಂತ ದೊಡ್ಡ ಹೋಟೇಲುಗಳ ನೆಟ್ ವರ್ಕ್ ಹೊಂದಿದೆ.
ದೇಶದ ಮೂಲೆ ಮೂಲೆಗಳಲ್ಲಿಯೂ ಹೀಗೆ ಹೋಟೇಲುಗಳ ಸರಣಿ ಹೊಂದಿರುವುದರಿಂದ ಎಲ್ಲಿ ಬೇಕಾದರೂ ರೂಂ ವ್ಯವಸ್ಥೆ ಜನರಿಗೆ ಸಿಗುತ್ತಿತ್ತು. ಇದರಿಂದ ಕಾಲೇಜು ಯುವಕ, ಯುವತಿಯರು, ಪ್ರೇಮಿಗಳು ಇಲ್ಲಿ ರೂಂ ಮಾಡಲು ಅನುಕೂಲವಾಗುತ್ತಿತ್ತು. ಇನ್ನು ಹಾಗೆ ಆಗುವುದಿಲ್ಲ.
ಈ ನಿಯಮ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಗೆ ಸೀಮಿತ ಮಾಡಲಾಗಿದ್ದು, ನಂತರ ಭವಿಷ್ಯದಲ್ಲಿ ಬೇರೆ ಕಡೆ ಇದನ್ನು ವಿಸ್ತರಿಸಲು ಯೋಜನೆ ಓಯೋ ಹಾಕಿಕೊಂಡಿದೆ. ಇನ್ನು ಮುಂದೆ ಹೀಗೆ ನಿಯಮ ಎಲ್ಲಾ ಕಡೆ ಜಾರಿಗೆ ಬಂದರೆ ದಂಪತಿ ತಾವು ರೂಂ ಪ್ರವೇಶಿಸುವ ಮುನ್ನ ವಿವಾಹಿತರಾಗಿರುವುದಕ್ಕೆ ದಾಖಲೆಯನ್ನು ತೋರಿಸಬೇಕಾಗುತ್ತದೆ. ಇದು ಆನ್ ಲೈನ್ ನಲ್ಲಿ ರೂಂ ಬುಕ್ ಮಾಡುವಾಗಲೂ ಅನ್ವಯವಾಗುತ್ತದೆ. ಒಂದು ವೇಳೆ ಹೋಟೇಲಿನಲ್ಲಿ ರೂಂ ನೀಡುವಾಗ ಅಲ್ಲಿನ ಮ್ಯಾನೇಜರ್ ಅವರಿಗೆ ಜೋಡಿ ವಿವಾಹಿತರಲ್ಲದ ಬಗ್ಗೆ ಸಂಶಯ ಬಂದರೆ ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸ್ವಾತಂತ್ರ್ಯ ಹೊಂದಿರುವುದಾಗಿ ಓಯೋ ಆಡಳಿತ ಸ್ಪಷ್ಟನೆ ನೀಡಿದೆ. ರೂಂ ನೀಡುವುದು, ನಿರಾಕರಿಸುವುದು ಆಯಾ ಹೋಟೇಲಿನ ಮ್ಯಾನೇಜರ್ ಅವರ ಸ್ವನಿರ್ಧಾರಕ್ಕೆ ಬಿಟ್ಟಿರುವ ಸಂಗತಿಯಾಗಿದೆ.

ಈ ಹೊಸ ನಿಯಮ ಓಯೋದ ಬ್ರಾಂಡ್ ಇಮೇಜ್ ಹೆಚ್ಚಿಸುವ ಮತ್ತು ಬಾಹ್ಯನೋಟಕ್ಕೆ ಇಂತಹ ಹೋಟೇಲುಗಳ ರೂಂಗಳ ಬಗ್ಗೆ ಗೌರವ ಭಾವನೆ ಬರುವಂತೆ ನೋಡಿಕೊಳ್ಳುವ ಪ್ರಯತ್ನವೂ ಅಡಗಿದೆ. ಹೀಗೆ ಮಾಡುವುದರಿಂದ ಸಭ್ಯ ಕುಟುಂಬದವರು, ಉದ್ಯಮಿಗಳು, ಒಬ್ಬರೇ ಪ್ರವಾಸ ಮಾಡುವ ಪ್ರವಾಸಿಗರು ಇಂತಹ ಹೋಟೇಲುಗಳ ರೂಂಗಳಲ್ಲಿ ತಂಗಲು ಮುಜುಗರಪಡದ ಸನ್ನಿವೇಶ ಇರುತ್ತದೆ. ಇದರಿಂದ ಇಂತಹ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತದೆ ಮತ್ತು ಅವರು ಪ್ರತಿ ಬಾರಿ ಇಂತಹ ಹೋಟೇಲುಗಳನ್ನು ಆಯ್ಕೆ ಮಾಡುವ ಸಾಧ್ಯತೆ ಇರುತ್ತದೆ.
ಇನ್ನು ಇದರಿಂದ ಓಯೋ ಬ್ರಾಂಡ್ ಕೂಡ ಹಾಳಾಗದ ರೀತಿಯಲ್ಲಿ ಅದನ್ನು ಉಳಿಸುವ ಚಿಂತನೆ ಕೂಡ ಓಯೋ ಆಡಳಿತ ಮಂಡಳಿಗೆ ಇದೆ. ಒಂದು ವೇಳೆ ಈ ನಿಯಮಗಳನ್ನು ವಿರೋಧಿಸಿ ಯಾವುದಾದರೂ ಹೋಟೇಲಿನವರು ಮುಂದುವರೆದರೆ ಅಂತಹ ಲಾಡ್ಜ್ ಗಳನ್ನು ಬ್ಲ್ಯಾಕ್ ಲಿಸ್ಟಿಗೆ ಹಾಕುವ ಕೆಲಸ ಕೂಡ ನಡೆಯಲಿದೆ. ಮೀರತ್ ನಲ್ಲಿ ಓಯೋ ಹೋಟೇಲುಗಳ ರೂಂಗಳನ್ನು ಅಶ್ಲೀಲ ಉದ್ದೇಶಗಳಿಗೆ ಬಳಸುವ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ಅಲ್ಲಿ ಈ ನಿಯಮವನ್ನು ಆರಂಭಿಸಲು ಯೋಜಿಸಲಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಓಯೋ ಉತ್ತರ ಭಾರತದ ಪ್ರಾದೇಶಿಕ ಅಧಿಕಾರಿ ಪವಾಸ್ ಶರ್ಮಾ ” ಓಯೋ ಯಾವತ್ತೂ ಗ್ರಾಹಕರ ಸುರಕ್ಷೆ ಮತ್ತು ಆತಿಥ್ಯದ ಜವಾಬ್ದಾರಿಯನ್ನು ಖಾತರಿಗೊಳಿಸುವ ಕ್ರಮಗಳನ್ನು ಕೈಗೊಳ್ಳುತ್ತದೆ. ನಾವು ಪ್ರತಿಯೊಬ್ಬ ಗ್ರಾಹಕನ ವೈಯಕ್ತಿಕ ಹಿತಾಸಕ್ತಿಯ ಜೊತೆಗೆ ದೇಶದ ಕಾನೂನನ್ನು ಕೂಡ ಗೌರವಿಸುವ ಅಗತ್ಯ ಇದೆ. ಸಭ್ಯ ಸಮಾಜದ ನಡುವೆ ನಾವು ವ್ಯವಹಾರ ನಡೆಸುವಾಗ ಎಲ್ಲರಿಗೂ ಒಪ್ಪತಕ್ಕಂತಹ ನಿಯಮಗಳನ್ನು ಪಾಲಿಸಬೇಕು. ಆ ನಿಟ್ಟಿನಲ್ಲಿ ನಾವು ಆಗಾಗ ನಮ್ಮ ಪಾಲಿಸಿಗಳಲ್ಲಿ ಸೂಕ್ತ ಬದಲಾವಣೆಗಳನ್ನು ತರುತ್ತೇವೆ” ಎಂದು ಅವರು ಹೇಳಿದ್ದಾರೆ.
- Advertisement -
Trending Now
ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
January 14, 2025
Leave A Reply