ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ!
Posted On January 7, 2025

ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ಮಂಗಳೂರಿನ ಖಾಸಗಿ ಆಸ್ಪತ್ರೆ ಫಾದರ್ ಮುಲ್ಲರ್ ನಲ್ಲಿ ನಡೆದಿದೆ. ನಾಲ್ಕು ಮಕ್ಕಳಲ್ಲಿ ಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳಾಗಿದ್ದು, ಇದು ಸಿಜೇರಿಯನ್ ಮೂಲಕ ನಡೆದ ಹೆರಿಗೆಯಾಗಿದೆ. ಈ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ತಾಯಿಯ ಹೆಸರು ಬಾನೋತ್ ದರ್ಗಾ ಅವರು ಆರೋಗ್ಯವಾಗಿದ್ದಾರೆ. ಮಕ್ಕಳಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಬಗ್ಗೆ ಮಾತನಾಡಿದ ಸ್ತ್ರೀರೋಗ ತಜ್ಞೆ ಡಾ. ಜೋಯ್ಲೀನ್ ಡಿ ಅಲ್ಮೇಡಾ ಅವರು ” ಏಳು ಲಕ್ಷ ಜನರಲ್ಲಿ ಒಬ್ಬರು ಮಾತ್ರ ಈ ರೀತಿ ಅಪರೂಪಕ್ಕೆ ಹೆಚ್ಚು ಮಕ್ಕಳಿಗೆ ಜನ್ಮ ನೀಡುತ್ತಾರೆ” ಎಂದಿದ್ದಾರೆ. ಬಾನೋತ್ ದರ್ಗಾ ಅವರು ಮೂಲತ: ತೆಲಂಗಾಣದವರು.
ಇನ್ನು ಜಗತ್ತಿನಲ್ಲಿ ಒಂದೇ ಹೆರಿಗೆಯಲ್ಲಿ ಅತೀ ಹೆಚ್ಚು ಜನ್ಮ ನೀಡಿದ ದಾಖಲೆ ಮೊರೆಕ್ಕಾದ ಕಾಸಾಬ್ಲಾನ್ಕಾದಲ್ಲಿ ಹಲೀಮಾ ಸಿಸ್ಸೇ ಅವರ ಹೆಸರಿನಲ್ಲಿದೆ. ಈ ಗಿನ್ನೆಸ್ ದಾಖಲೆ 2021 ರಲ್ಲಿ ಜರುಗಿದ್ದು ಸಿಸ್ಸೇ ಏಕಕಾಲದಲ್ಲಿ 9 ಮಕ್ಕಳಿಗೆ ಜನ್ಮ ನೀಡಿದ್ದರು. ಇದಕ್ಕೂ ಹಿಂದೆ 2009 ರಲ್ಲಿ ನಾದ್ಯಾ ಸುಲೇಮನ್ ಅವರು ಎಂಟು ಮಕ್ಕಳಿಗೆ ಜನ್ಮ ನೀಡಿ ದಾಖಲೆ ಬರೆದಿದ್ದರು.
- Advertisement -
Trending Now
ಚೇತನಾ ಶಾಲೆಯಲ್ಲಿ ಯೂತ್ ಆಫ್ ಜಿಎಸ್ ಬಿ ಹೋಳಿ ಸಂಭ್ರಮ!
March 14, 2025
Leave A Reply