ಗರ್ಭಿಣಿ ಹೊತ್ತು ಸಾಗಿಸಿದ ಯೋಧರು
Posted On September 4, 2017

ದಂತೇವಾಡ್: ನಕ್ಸಲ್ ಪೀಡಿತ ಪ್ರದೇಶ ಛತ್ತೀಸ್‌ಗಢದ ದಂತೇವಾಡದಲ್ಲಿ ಜ್ವರದಿಂದ ಬಳಲುತ್ತಿದ್ದ ಮಹಿಳೆಯನ್ನು ಯೋಧರು ಏಳು ಕಿ.ಮೀ ಹೊತ್ತು ಸಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ದಂತೇವಾಡ್ ಬಳಿಯ ಪುಟ್ಟ ಗ್ರಾಾಮದಲ್ಲಿ ಮಹಿಳೆ ತೀವ್ರ ಜ್ವರದಿಂದ ಬಳಲುತ್ತಿದ್ದಳು. ಕುಟುಂಬಸ್ಥರು ಆಂಬ್ಯುಲೆನ್ಸ್‌ಗೆ ಸಹಾಯ ಕೋರಿದ್ದಾರೆ. ಆದರೆ ರಸ್ತೆೆ ಮಾರ್ಗ ಇಲ್ಲದ ಕಾರಣ ಆಂಬ್ಯುಲೆನ್ಸ್‌ಗೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ, ಕುಟುಂಬಸ್ಥರು ಯೋಧರ ಸಹಾಯ ಕೋರಿದ್ದಾರೆ. ಮಹಿಳೆಯನ್ನು ಸ್ಟ್ರೆಚರ್ ಮೂಲಕ ಹೊತ್ತು ಕಾಲು ದಾರಿಯಲ್ಲಿ ಸಾಗಿದ್ದಾರೆ. ಮಹಿಳೆಯನ್ನು ಹೊತ್ತು ಬೆಟ್ಟ-ಗುಡ್ಡ ಏರಿ ಮತ್ತು ನದಿಯನ್ನು ದಾಟಿ ಯೋಧರು ಸುರಕ್ಷಿತವಾಗಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
- Advertisement -
Leave A Reply