ಕೇರಳದ ಬಯೋ ವೇಸ್ಟ್ ಮಂಗಳೂರಿನ ಚರಂಡಿಗಳಲ್ಲಿ..ಕಾದಿದೆ ಅಪಾಯ!

ಮಂಗಳೂರು ನಗರ ಹೊರವಲಯದಲ್ಲಿರುವ ತಲಪಾಡಿ ಕೇರಳದ ಗಡಿಪ್ರದೇಶವಾಗಿದೆ. ಕೇರಳದ ಮಂಜೇಶ್ವರ, ಕಾಸರಗೋಡು ಸಹಿತ ಅಕ್ಕಪಕ್ಕದ ಜಿಲ್ಲೆಗಳ ಜನರು ಉದ್ಯೋಗ, ವ್ಯವಹಾರ, ಶಿಕ್ಷಣ, ವೈದ್ಯಕೀಯ ಸಹಿತ ವಿವಿಧ ಕಾರಣಗಳಿಗಾಗಿ ಮಂಗಳೂರನ್ನು ಆಶ್ರಯಿಸಿದ್ದಾರೆ. ನಿತ್ಯ ಸಾವಿರಾರು ಜನ ಉಭಯ ರಾಜ್ಯಗಳಿಗೆ ಹೋಗಿ ಬರುತ್ತಾರೆ. ಇದಿಷ್ಟೇ ಆಗಿದ್ದರೆ ಅದರಲ್ಲಿ ಅಂತಹ ತೊಂದರೆ ಏನೂ ಇರಲಿಲ್ಲ. ಆದರೆ ಕೇರಳ ನಮ್ಮ ಮಂಗಳೂರನ್ನು ಎಷ್ಟರಮಟ್ಟಿಗೆ ಗ್ರಾಟೆಂಡ್ ಆಗಿ ತೆಗೆದುಕೊಂಡಿದೆ ಎಂದರೆ ಅವರು ಶುದ್ಧ ಪರಿಸರದಲ್ಲಿ ಜೀವಿಸಿದರೆ ಸಾಕು, ಮಂಗಳೂರಿನವರು ಹಾಳಾಗಿ ಹೋಗಲಿ ಎಂದು ಧೃಡವಾಗಿ ನಿಶ್ಚಯಿಸಿದ್ದಾರೆ. ಇಲ್ಲಿಯ ತನಕ ಅಲ್ಲಿನ ತ್ಯಾಜ್ಯವನ್ನು ತಂದು ಸೈಲೆಂಟಾಗಿ ಮಂಗಳೂರಿನ ಚರಂಡಿಗಳಲ್ಲಿ ಹಾಕಿ ಹೋಗುತ್ತಿದ್ದವರು ಈಗ ಅಲ್ಲಿನ ಬಯೋ ತ್ಯಾಜ್ಯವಾಗಿರುವ ಆಸ್ಪತ್ರೆಗಳ ಗಲೀಜನ್ನು ಕೂಡ ಇಲ್ಲಿ ತಂದು ಸುರಿಯುತ್ತಿದ್ದಾರೆ. ಇದನ್ನು ಅವರು ಎಷ್ಟು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ ಎಂದರೆ ಮಂಗಳೂರು ಮಹಾನಗರ ಪಾಲಿಕೆಗೆ ಸೇರಿದ ಎರಡು ಟ್ಯಾಂಕರ್ ಗಳ ಮೂಲಕ ತಂದು ಅದನ್ನು ಇಲ್ಲಿ ಸುರಿದು ಹೋಗುತ್ತಿದ್ದಾರೆ.
ಕೇರಳದವರಿಗೆ ಮಂಗಳೂರು ಮಹಾನಗರ ಪಾಲಿಕೆಯ ಗಾಡಿ ಹೇಗೆ ಸಿಗುತ್ತದೆ? ಇದರ ಅರ್ಥ ಮಂಗಳೂರು ಪಾಲಿಕೆಯ ಕೆಲವು ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಅವರ ಸಹಕಾರವಿಲ್ಲದಿದ್ದರೆ ಏಕಾಏಕಿ ತ್ಯಾಜ್ಯ ಮಂಗಳೂರಿನ ಒಳಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಇನ್ನು ಕೇರಳಿಗರು ತಮ್ಮ ರಾಜ್ಯದ ವಾಹನಗಳಲ್ಲಿ ತಂದು ಇಲ್ಲಿ ಸುರಿಯಲು ಹೋದರೆ ಸಿಕ್ಕಿಬೀಳುತ್ತೇವೆ ಎಂದು ಗೊತ್ತಿರುವುದರಿಂದ ಇಲ್ಲಿನವರನ್ನೇ ಸೆಟ್ ಮಾಡಿಕೊಂಡು ತಮ್ಮ ಕೆಲಸಗಳನ್ನು ಮುಗಿಸುತ್ತಿದ್ದಾರೆ.
ಕೇರಳದವರು ಬಯೋ ಮೆಡಿಕಲ್ ವೇಸ್ಟ್ ತಂದು ಮಂಗಳೂರಿನ ಸಿಕ್ಕ ಸಿಕ್ಕ ಹಳ್ಳಕ್ಕೆ ಬಿಸಾಕಿ ಹೋಗುವುದರಿಂದ ಆ ತ್ಯಾಜ್ಯ ಇಲ್ಲಿನ ಪರಿಸರದಲ್ಲಿ ರೋಗ ರುಜಿನಗಳ ಉಗಮಕ್ಕೆ ಕಾರಣವಾಗುತ್ತದೆ. ಅದರೊಂದಿಗೆ ಜಲಚರಗಳಿಗೆ ಮತ್ತು ಜೀವರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ಸದ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಪಾಲಿಕೆಯ ಸಭೆ ನಡೆಸಿ, ತಡೆಗಟ್ಟಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸದ್ಯ ಕೆಲವು ದಿನಗಳ ತನಕ ಕೇರಳದಿಂದ ತ್ಯಾಜ್ಯವಾಗಲೀ, ಬಯೋ ವೇಸ್ಟ್ ಆಗಲಿ ಬರುವುದು ನಿಂತುಹೋಗಬಹುದು. ಆದರೆ ವಿಷಯ ಒಮ್ಮೆ ತಣ್ಣಗಾದ ಮೇಲೆ ಇದು ಮತ್ತೆ ಆರಂಭವಾಗುತ್ತದೆ. ಹಾಗಾದರೆ ಕೇರಳದವರ ಈ ಅಕ್ರಮ ಕಾರ್ಯಗಳಿಗೆ ಶಾಶ್ವತ ತಡೆ ಇಲ್ವಾ? ಮಂಗಳೂರಿನವರು ಏನಾದರೂ ಆಗಿ ಹಾಳಾಗಿ ಹೋಗಲಿ, ನಾವು ಚೆನ್ನಾಗಿರಬೇಕು ಎನ್ನುವ ಕೇರಳದವರ ಧೋರಣೆಗೆ ಅಂಕುಶ ಹಾಕುವುದು ಯಾರು? ಹೇಗೆ?
Leave A Reply