ಛಾವಾ ಚಲನಚಿತ್ರಕ್ಕೆ 100% ತೆರಿಗೆ ವಿನಾಯಿತಿ ಘೋಷಿಸಿದ ಗೋವಾ, ಮಧ್ಯಪ್ರದೇಶ ಸರಕಾರ!

ಮೊಗಲ್ ದೊರೆಗಳ ಅಟ್ಟಹಾಸ ಅಡಗಿಸಿದ್ದ ಛತ್ರಪತಿ ಶಿವಾಜಿ ಮಹಾರಾಜಾರ ಮಗ ಛತ್ರಪತಿ ಸಾಂಬಾಜಿ ಮಹಾರಾಜರ ಜೀವನಚರಿತ್ರೆಯ ಕಥೆಯನ್ನು ಹೊಂದಿರುವ ಛಾವಾ ಹಿಂದಿ ಅವತರಣಿಕೆಯ ಸಿನೆಮಾಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಮ್ಮ ರಾಜ್ಯದಲ್ಲಿ ನೂರು ಶೇಕಡಾ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ದೇಶದ ಚರಿತ್ರೆಯ ಮಹಾಪುರುಷರಾಗಿ ಒಬ್ಬರಾಗಿದ್ದ ಸಾಂಬಾಜಿ ಮಹಾರಾಜರ ಬದುಕೇ ದೇವರು, ದೇಶ ಮತ್ತು ಧರ್ಮಕ್ಕಾಗಿ ಸಮರ್ಪಿತವಾಗಿತ್ತು. ಅದು ತೆರೆಯ ಮೇಲೆ ಅದ್ಭುತವಾಗಿ ಚಿತ್ರಿಕರಿಸಲ್ಪಟ್ಟಿದೆ. ಇತಿಹಾಸದ ಎರಡನೇ ಛತ್ರಪತಿ ಬಿರುದಾಂಕಿತ ಸಾಂಬಾಜಿ ಮಹಾರಾಜರು ಹಿಂದವಿ ಸ್ವರಾಜ್ಯದ ರಕ್ಷಣೆಗಾಗಿ ಮೊಘಲರ, ಪೋರ್ಚುಗೀಸರ ವಿರುದ್ಧ ಕೆಚ್ಚೆದೆಯ ಹೋರಾಟವನ್ನು ಮಾಡಿದ್ದರು. ಅಂತಹ ಮಹಾನ್ ನಾಯಕರ ಜೀವನ ಚರಿತ್ರೆಯನ್ನು ಎಲ್ಲರೂ ನೋಡಬೇಕು ಎನ್ನುವ ಕಾರಣಕ್ಕೆ ಛಾವಾ ಚಿತ್ರಕ್ಕೆ ಏನೂ ತೆರಿಗೆ ಇರಲ್ಲ ಎಂದು ಪ್ರಮೋದ್ ಸಾವಂತ್ ತಮ್ಮ ಏಕ್ಸ್ ಖಾತೆಯಲ್ಲಿ ಘೋಷಿಸಿದ್ದಾರೆ.
ಕೆಲವೇ ದಿನಗಳ ಹಿಂದೆ ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ ಮೋಹನ್ ಯಾದವ್ ಅವರು ಕೂಡ ಇದೇ ನಡೆಯನ್ನು ಆರಂಭಿಸಿ ಭಾರತೀಯ ಜನತಾ ಪಾರ್ಟಿಯ ಆಡಳಿತವಿರುವ ಉಳಿದ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪ್ರೇರಣೆ ನೀಡಿದ್ದರು. ಈ ಸಿನೆಮಾ ಈಗಾಗಲೇ 200 ಕೋಟಿ ರೂ ಸಂಗ್ರಹಿಸಿ ಮುನ್ನಡೆಯುತ್ತಿದೆ. ಈ ಸಿನೆಮಾದ ನಾಯಕ ನಟರಾಗಿ ವಿಕ್ಕಿ ಕೌಶಲ್, ಪ್ರಮುಖ ಪಾತ್ರಗಳಲ್ಲಿ ರಶ್ಮಿಕಾ ಮಂದಣ್ಣ, ಅಕ್ಷಯ್ ಖನ್ನಾ ನಟಿಸಿದ್ದರೆ, ನಿರ್ದೇಶನ ಲಕ್ಷ್ಮಣ್ ಉಟ್ಟೇಕರ್ ಮಾಡಿದ್ದಾರೆ. ಸಿನೆಮಾವನ್ನು ಮಡ್ಡೋಕ್ ಫಿಲಂ ಸಂಸ್ಥೆಯ ದಿನೇಶ್ ವಿಜನ್ ನಿರ್ಮಿಸಿದ್ದಾರೆ.
Leave A Reply