• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕಾಶಿಯಲ್ಲಿ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರಿಂದ ಗಂಗಾಸ್ನಾನ

Tulunadu News Posted On March 15, 2025
0


0
Shares
  • Share On Facebook
  • Tweet It

ಉತ್ತರಪ್ರದೇಶದ ವಾರಣಾಸಿಯಲ್ಲಿರುವ ಕಾಶಿಮಠದ ಮೂಲಮಠದಲ್ಲಿ ಮೊಕ್ಕಾಂನಲ್ಲಿರುವ ಕಾಶೀಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಮಠದ ಆರಾಧ್ಯ ದೇವರಾಗಿರುವ ಶ್ರೀ ವೇದವ್ಯಾಸ ದೇವರ ಮೂರ್ತಿಯನ್ನು ಹೊತ್ತು ಗಂಗಾಸ್ನಾನವನ್ನು ಮಾಡಿದರು.

ವಾರಣಾಸಿಯಲ್ಲಿರುವ ಮೂಲಮಠದಲ್ಲಿ ವೃಂದಾವನಸ್ಥರಾಗಿರುವ ಕಾಶೀಮಠದ ಗುರುಪರಂಪರೆಯ ಮೂರನೇ ಯತಿ ಶ್ರೀಮದ್ ಉಪೇಂದ್ರ ತೀರ್ಥ ಸ್ವಾಮೀಜಿಯವರ 350 ಪುಣ್ಯತಿಥಿ ಹಾಗೂ ಐದನೇ ಯತಿ ಶ್ರೀಮದ್ ರಾಘವೇಂದ್ರ ತೀರ್ಥ ಸ್ವಾಮೀಜಿಯವರ 300 ನೇ ಪುಣ್ಯತಿಥಿ ಆಚರಣೆಯ ಅಂಗವಾಗಿ ಮೂಲಮಠಕ್ಕೆ ಚಿತ್ತೈಸಿರುವ ಶ್ರೀಗಳು ಮಠದ ದೇವರಿಗೆ ಪೂಜೆಯನ್ನು ಸಲ್ಲಿಸಿ ಭಾರತದ ವಿವಿಧ ರಾಜ್ಯಗಳಿಂದ ಆಗಮಿಸಿರುವ ಭಕ್ತರನ್ನು ಅನುಗ್ರಹಿಸಿದರು.

ಕಾಶಿಯ ಬ್ರಹ್ಮಘಾಟ್ ನಲ್ಲಿ ಕಾಶಿಮಠದ ಮೂಲಮಠ ಗಂಗಾನದಿಯ ದಡದಲ್ಲಿದ್ದು, ಇಲ್ಲಿ ಮೊಕ್ಕಾ ಮಾಡುವ ಕಾಶೀಮಠಾಧೀಶರು ಮಠದ ದೇವರ ಸಹಿತ ಗಂಗಾಸ್ನಾನ ಮಾಡುವ ಸಂಪ್ರದಾಯ ಅನಾದಿಕಾಲದಿಂದ ಜಾರಿಯಲ್ಲಿದೆ.

ಇಂತಹ ಪುಣ್ಯ ಸಂದರ್ಭದಲ್ಲಿ ಶ್ರೀಗಳೊಂದಿಗೆ ಗುಜರಾತ್ ಐಎಎಸ್ ಅಧಿಕಾರಿ ಡಾ. ವಿನೋದ್ ರಾವ್, ಮುಂಬೈ ಜಿಎಸ್ ಬಿ ಸೇವಾ ಮಂಡಲದ ಪ್ರಮುಖರಾದ ದೀಪಕ್ ಭಾಸ್ಕರ್ ಶೆಣೈ, ಮಂಗಳೂರು ವೆಂಕಟರಮಣ ದೇವಸ್ಥಾನದ ಟ್ರಸ್ಟಿ ಸಿಎ ಜಗನ್ನಾಥ್ ಕಾಮತ್, ಮುಖಂಡರಾದ ನಿತಿನ್ ಪ್ರಭು, ಜಯಂತ ಪ್ರಭು, ರಾಜೀವ್ ವಾದ್ಯಾರ್, ಮನೋಹರ್ ನಾಯಕ್, ಚೆಂಪಿ ಉಮೇಶ್ ಭಟ್, ವೈದಿಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.

0
Shares
  • Share On Facebook
  • Tweet It




Trending Now
ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
Tulunadu News June 29, 2026
ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
Tulunadu News June 26, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
  • Popular Posts

    • 1
      ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • 2
      ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!

  • Privacy Policy
  • Contact
© Tulunadu Infomedia.

Press enter/return to begin your search