ಮಾಲ್ ಗಳಲ್ಲಿ ಪಾರ್ಕಿಂಗ್ ಫೀಸ್ ತೆಗೆದುಕೊಳ್ಳುವಂತಿಲ್ಲ!
ನೀವು ಮಂಗಳೂರಿನ ಸಿಟಿ ಸೆಂಟರ್ ಗೆ ಮುಂದಿನ ಬಾರಿ ಹೋದಾಗ ನಿಮ್ಮ ವಾಹನ ಮಾಲ್ ಒಳಗೆ ಪಾರ್ಕ್ ಮಾಡಲು ಹೋಗುವಾಗ ಯಾವುದೇ ಹಣ ಕೊಡುವ ಅಗತ್ಯ ಇಲ್ಲ. ಕಾರಣ ಹಾಗೆ ಪಾರ್ಕಿಂಗ್ ಫೀಸ್ ತೆಗೆದುಕೊಳ್ಳುವುದು ಕಾನೂನು ಪ್ರಕಾರ ತಪ್ಪು ಎಂದು ಹೈದ್ರಾಬಾದ್ ನಲ್ಲಿರುವ ಆಂದ್ರಪ್ರದೇಶ ಉಚ್ಚ ನ್ಯಾಯಾಲಯ 2003, ಮೇ 2 ರಂದು ಮದನ್ ಮೋಹನ್ ಮತ್ತು ಇತರರು ವಿರುದ್ಧ ಹೈದ್ರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಕೇಸಿನಲ್ಲಿ ಹೇಳಿದೆ.
ತನ್ನಿಂದ ಹೈದ್ರಾಬಾದ್ ನ ಮಾಲ್ ಒಂದರಲ್ಲಿ ಪಾರ್ಕಿಂಗ್ ಫೀಸ್ ತೆಗೆದುಕೊಳ್ಳಲಾಗಿದೆ ಎಂದು ವಿಜಯ್ ಗೋಪಾಲ ಎನ್ನುವವರು ಪೊಲೀಸ್ ಸ್ಟೇಶನ್ ನಲ್ಲಿ ದೂರು ನೀಡಿದ್ದರು. ಅವರ ದೂರಿನ ಮೇಲೆ ಪ್ರಥಮ ಮಾಹಿತಿ ವರದಿಯಲ್ಲಿ ಪೊಲೀಸರು ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ ಅಡಿಯಲ್ಲಿ ಸೆಕ್ಷನ್ 188, 418, 420 ಬಳಸಿ ಮಾಲ್ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಯಾವುದೇ ವಸತಿ ಸಮುಚ್ಚಯ ಅಥವಾ ವಾಣಿಜ್ಯ ಸಂಕೀರ್ಣ ನಿರ್ಮಿಸುವಾಗ ಅದರಲ್ಲಿ ಹೊರಗಿನಿಂದ ಅಲ್ಲಿ ಭೇಟಿ ಕೊಡುವ ವ್ಯಕ್ತಿಗಳ ವಾಹನ ನಿಲ್ಲಿಸಲು ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಇರಬೇಕು ಎಂದು ನಿಯಮ ಇದೆ. ಹಾಗೆ ಮಾಲ್ ಗಳಿಗೆ ಭೇಟಿ ಕೊಡುವ ಗ್ರಾಹಕರಿಗಾಗಿ ಇರುವ ಪಾರ್ಕಿಂಗ್ ವ್ಯವಸ್ಥೆ ಕಡ್ಡಾಯವಾಗಿದ್ದು ಅಲ್ಲಿ ಯಾವುದೇ ರೀತಿಯ ಶುಲ್ಕವನ್ನು ಸ್ವೀಕರಿಸಬಾರದು ಎನ್ನುವ ನಿಯಮ ಇದೆ. ಆ ನಿಯಮ ಮೀರಿ ಆ ಮಾಲ್ ನ ಆಡಳಿತ ಮಂಡಳಿ ಶುಲ್ಕ ಸ್ವೀಕರಿಸುತ್ತಿದ್ದರೆ ಅವರ ವಿರುದ್ಧ ದೂರು ದಾಖಲಿಸಬಹುದು.
ಇಲ್ಲಿಯ ತನಕ ಈ ನಿಯಮ ಯಾರಿಗೂ ಗೊತ್ತಿರಲಿಲ್ಲ. ಆಂಧ್ರ ಪ್ರದೇಶ ಹೈಕೋರ್ಟ್ ಆದೇಶ ನೀಡಿದ ನಂತರ ಇದರ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿದೆ. ಕೆಲವು ರಾಜ್ಯಗಳಲ್ಲಿ ಹೆಚ್ಚೆಂದರೆ 5 ರೂಪಾಯಿ ಪಾರ್ಕಿಂಗ್ ಫೀಸ್ ಪಡೆಯುವ ಅವಕಾಶ ಇರುವುದು ಹೌದು. ಒಟ್ಟಿನಲ್ಲಿ ಕರಾವಳಿಯ ಯಾವುದೇ ಮಾಲ್ ಗಳಲ್ಲಿ ನೀವು ಇನ್ನು ಮುಂದೆ ವಾಹನ ಪಾರ್ಕ್ ಮಾಡಿ ಆರಾಮಾಗಿ ಮಾಲ್ ಸುತ್ತಾಡಿ ಬರಬಹುದು. ಅಲ್ಲಿ ಹಣ ಕೇಳಿದರೆ ಕೊಡಲ್ಲ ಎನ್ನಿ, ಕಾನೂನು ಗ್ರಾಹಕರ ಪರವಾಗಿ ಇದೆ
Leave A Reply