7 ಸೆಕೆಂಡ್ ಗಳಲ್ಲಿ ಎಐ ಮೂಲಕ ಹೃದ್ರೋಗ ಪತ್ತೆ!

ಇತ್ತೀಚಿನ ವರ್ಷಗಳಲ್ಲಿ ಯುವಜನಾಂಗ ಹೃದ್ರೋಗದಿಂದ ಸಾವನ್ನಪ್ಪುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ. ಚಿಕ್ಕ ವಯಸ್ಸಿನ, ಮಧ್ಯ ಪ್ರಾಯದ ಯುವಕ, ಯುವತಿಯರು ಅಚಾನಕ್ ಆಗಿ ನಿಧನವಾಗುತ್ತಿರುವುದು ನಿಜಕ್ಕೂ ಚಿಂತಿಸಬೇಕಾದ ಸಂಗತಿ. ಯಾಕೆಂದರೆ ಇದು ದೇಶದ ಅಭಿವೃದ್ಧಿಯ ವಿಷಯದಲ್ಲಿ ಗಮನಾರ್ಹವಾದ ವಿಷಯ. ನಾಗರಿಕರಲ್ಲಿ ಹೃದಯ ಸಂಬಂಧಿ ಕಾಯಿಲೆಯನ್ನು ಮೊದಲೇ ಪತ್ತೆ ಹಚ್ಚಿದರೆ ಇಂತಹ ಸಾವು ನೋವುಗಳನ್ನು ತಡೆಯಬಹುದು ಎನ್ನುವುದು ಎಲ್ಲರ ಅಭಿಪ್ರಾಯ. ಆದರೆ ಹೇಗೆ?
ಇದಕ್ಕಾಗಿ ಒಂದು ಹೊಸ ತಂತ್ರಜ್ಞಾನವನ್ನು ಬಳಸಿ ಹೃದಯ ಸಂಬಂಧಿ ಕಾಯಿಲೆ ಪತ್ತೆಹಚ್ಚಬಹುದು ಎಂದು ಭಾರತೀಯ ಅಮೆರಿಕನ್ ವಿದ್ಯಾರ್ಥಿ ತೋರಿಸಿಕೊಟ್ಟಿದ್ದಾನೆ. ಅವನ ಪ್ರಾಯ ನೋಡಿ ನಿಮಗೂ ಆಶ್ಚರ್ಯವಾಗಬಹುದು. ಆಟ ಆಡುವ ವಿಷಯದಲ್ಲಿ ಎಐ ತಂತ್ರಜ್ಞಾನ ಬಳಸಿ ವಿಶ್ವವನ್ನೇ ಕಾಡುತ್ತಿರುವ ಸವಾಲಿಗೆ ಆತ ಉತ್ತರ ಕಂಡುಹಿಡಿದಿದ್ದಾನೆ. ಇದಕ್ಕೆ ಈಗ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಆ ಹುಡುಗನ ಹೆಸರು ಸಿದ್ಧಾರ್ಥ್ ನಂದ್ಯಾಲ. ಎನ್ ಆರ್ ಐ ವಿದ್ಯಾರ್ಥಿ. ಆಂಧ್ರಪ್ರದೇಶದ ಅನಂತಪುರ ಮೂಲದ ಸಿದ್ಧಾರ್ಥ್ ಸದ್ಯ ಅಮೇರಿಕಾದ ಡಲ್ಲಾಸ್ ನಗರದಲ್ಲಿ ವಾಸಿಸುತ್ತಿದ್ದಾನೆ. ಈತ ಸಿರ್ಕಾರ್ಡಿಯಾ – ವಿ ಎಐ ಆಧಾರಿತ ಯಾಪ್ ಸಿದ್ಧಪಡಿಸಿದ್ದಾನೆ. ಇದು ಕೇವಲ 7 ಸೆಕೆಂಡುಗಳಲ್ಲಿ ನಿಮ್ಮಲ್ಲಿರುವ ಹೃದಯ ಸಂಬಂಧಿ ಕಾಯಿಲೆಯನ್ನು ಪತ್ತೆಹಚ್ಚುತ್ತದೆ.
14 ರ ಹುಡುಗ ಕಂಡು ಹಿಡಿದ ಈ ಯಾಪ್ ನಿಂದ ಸ್ಮಾರ್ಟ್ ಫೋನ್ ಸಹಾಯದಿಂದ ಹೃದಯ ನಾಳಗಳ ರಕ್ತಪರಿಚಲನೆಯನ್ನು ಬಹುಬೇಗ ಪತ್ತೆ ಹಚ್ಚುತ್ತದೆ. ಹೃದಯ ಬಡಿತವನ್ನು ಗ್ರಹಿಸುತ್ತದೆ. 96 ಶೇಕಡಾಗಿಂತ ಹೆಚ್ಚು ನಿಖರತೆಯನ್ನು ಸೂಚಿಸುತ್ತದೆ. ಈಗಾಗಲೇ ಅಮೇರಿಕಾ ದೇಶದ ಹಲವು ಆಸ್ಪತ್ರೆಗಳಲ್ಲಿ 1500 ಕ್ಕೂ ಹೆಚ್ಚು ರೋಗಿಗಳು ಮತ್ತು ಭಾರತದಲ್ಲಿ 700 ರೋಗಿಗಳಿಗೆ ಇದನ್ನು ಪರೀಕ್ಷಿಸಲಾಗಿದೆ.
ಸಿದ್ಧಾರ್ಥ್ ಅವರ ಸಾಧನೆ ತಿಳಿದು ತಮ್ಮ ರಾಜ್ಯದವನೆಂಬ ಅಭಿಮಾನದಿಂದ ಆತನನ್ನು ಕರೆಸಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಡಿಸಿಎಂ ಪವನ್ ಕಲ್ಯಾಣ್ ಅಭಿನಂದಿಸಿದ್ದಾರೆ.
Leave A Reply