ಸುನೀತಾ ವಿಲಿಯ್ಸಂಗೆ ಇಷ್ಟದ ತಿಂಡಿ ನೀಡಲು ಕುಟುಂಬ ಕಾತರ! ಯಾವ ತಿಂಡಿ ಗೊತ್ತಾ?

ಸುನೀತಾ ವಿಲಿಯ್ಸಂ ಬಾಹ್ಯಾಕಾಶದಿಂದ ಸುರಕ್ಷಿತವಾಗಿ ಧರೆಯ ಮೇಲೆ ಇಳಿದಾಯ್ತು. ಇದು ಎಲ್ಲರಲ್ಲಿಯೂ ಖುಷಿ, ಸಂತಸ ಮೂಡಿದ್ದು, ಅವಳಿಗೆ ಶುಭಾಶಯಗಳ ಸುರಿಮಳೆಯಾಗುತ್ತಿದೆ. ಆದರೆ ಸುನೀತಾ ಅವರ ಭಾರತದಲ್ಲಿರುವ ಕುಟುಂಬದಲ್ಲಿ ಆಕೆಯ ಪ್ರೀತಿಯ ತಿಂಡಿ, ಅಡುಗೆಯನ್ನು ಮಾಡಿ ಬಡಿಸುವ ಕಾತರ ಎದ್ದು ಕಾಣುತ್ತಿದೆ. ಸದ್ಯ ಅಮೇರಿಕಾದಲ್ಲಿರುವ ಹೌಸ್ಟನ್ ನಲ್ಲಿ ಗಂಡ ಮತ್ತು ಮನೆಯವರನ್ನು ಕಾಣಲು ಸುನೀತಾ ನಿರ್ಧರಿಸಿದ್ದು, ಆಕೆ ಈ ಭೂಮಿಯ ತಾಪ, ಪರಿಸರ, ಗಾಳಿ ಎಲ್ಲವನ್ನು ಸಹಜವಾಗಿ ಅನುಭವಿಸಲು 45 ದಿನಗಳ ಅವಧಿ ಬೇಕಾಗಿದ್ದು, ಆಕೆ ಆ ಪ್ರಕ್ರಿಯೆಯನ್ನು ದಾಟಿದ ಬಳಿಕವೇ ಯಾವಾಗ ಭಾರತದಲ್ಲಿರುವ ತನ್ನ ತವರು ಮನೆಗೆ ಬರುತ್ತಾರೆ ಎಂದು ನಿಗದಿಯಾಗುತ್ತದೆ.
ಒಂಭತ್ತು ತಿಂಗಳು ಬಾಹ್ಯಾಕಾಶದಲ್ಲಿದ್ದ ಸುನೀತಾ ಅವರು ಯಾವಾಗಲೂ ಭಾರತದಲ್ಲಿರುವ ತಮ್ಮ ಮೂಲವನ್ನು ಮರೆಯದೇ ಭಗವದ್ಗೀತೆ ಮತ್ತು ಭಗವಂತ ಗಣೇಶನಿಂದಲೇ ತಮಗೆ ಶಕ್ತಿ, ಸ್ಫೂರ್ತಿ ಸಿಗುತ್ತದೆ ಎಂದು ಹೇಳುತ್ತಾ ಬಂದಿದ್ದಾರೆ. ಇನ್ನು ಅವರು ಇಷ್ಟು ದಿನಗಳ ತನಕ ಬಹಳ ಮಿಸ್ ಮಾಡಿಕೊಂಡಿರುವುದು ಅವರ ತಾಯಿ ಬಹಳ ರುಚಿಕಟ್ಟಾಗಿ ತಯಾರಿಸುವ ತಿಂಡಿ ದಾಲ್ ದೋಕ್ಲಿ.
ಸದ್ಯ ಸುನೀತಾ ಅವರ ಕಸಿನ್ಸ್ ಗಳು ಆಕೆಯನ್ನು ಮಾತನಾಡಿಸಲು ಪ್ರಯತ್ನಿಸಿದರೂ ಅದು ಸಫಲತೆ ಕಂಡಿಲ್ಲ. ಸುನೀತಾ ವಿಲಿಯ್ಸಂ ನಿಧಾನವಾಗಿ ಇಲ್ಲಿನ ಜನರೊಂದಿಗೆ ಮತ್ತು ಪರಿಸರದೊಂದಿಗೆ ಕನೆಕ್ಟ್ ಆಗಬೇಕಾಗಿರುವ ಅನಿವಾರ್ಯತೆ ಇರುವುದರಿಂದ ಈಗ ಆಕೆಯ ಕುಟುಂಬದವರು ಅವಳು ವೈದ್ಯಕೀಯವಾಗಿ ಸಹಜ ಸ್ಥಿತಿಗೆ ಮರಳಲು ಕಾಯುತ್ತಿದ್ದಾರೆ. ಇನ್ನು ಅವಳ ಕುಟುಂಬ ವರ್ಗ ಅಮೇರಿಕಾದ ವಿವಿದೆಡೆ ನೆಲೆಸಿರುವುದರಿಂದ ಆಕೆ ವೈದ್ಯಕೀಯ ಆರೈಕೆಯ ಅವಧಿಯ ಬಳಿಕ ಬಹಳ ದೊಡ್ಡ ಕೌಟುಂಬಿಕ ಸಮಾಗಮ ನಡೆಯಲಿದೆ ಎನ್ನುವ ಅಭಿಪ್ರಾಯವನ್ನು ಆಕೆಯ ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ. ಮೊದಲು ವೈಯಕ್ತಿಕ ಭೇಟಿಯ ನಂತರ ಕುಟುಂಬ ಮಿಲನ ಅದ್ದೂರಿಯಾಗಿ ನಡೆಯುವ ಸಾಧ್ಯತೆ ಇದೆ.
ಸುನೀತಾ ತಂದೆ ಸಸ್ಯಹಾರಿಯಾಗಿರುವುದರಿಂದ ಗುಜರಾತಿ ಖಾದ್ಯಗಳೇ ಮನೆಯಲ್ಲಿ ವಿಶೇಷವಾಗಿ ತಯಾರಿಸಲಾಗುವುದು ಮತ್ತು ಸುನೀತಾ ತಾಯಿ ತಯಾರಿಸುವ ದಾಲ್ ದೋಕ್ಲಿ ವಿಶ್ವದಲ್ಲಿಯೇ ಅತ್ಯಂತ ರುಚಿಕರವಾದದ್ದು ಎಂದು ಸುನೀತಾ ಮನೆಯವರು ಹೇಳುತ್ತಾರೆ. ಅದು ಸುನೀತಾ ಭಾರತಕ್ಕೆ ಬರುವಾಗ ಊಟದ ಮೆನುವಿನಲ್ಲಿ ಅಗ್ರಸ್ಥಾನದಲ್ಲಿರುತ್ತದೆ.
ಆಕೆಯ ತಾಯಿಯ ಕೈಯ ಅಡುಗೆಗಿಂತ ಉತ್ತಮವಾಗಿರುವಂತದ್ದು ಸುನೀತಾಗೆ ಬೇರೆ ಏನೂ ಇಲ್ಲ. ಆದ್ದರಿಂದ ಆಕೆ ಬಂದಾಗ ಭಾರತೀಯ ಅಡುಗೆಯೇ ಪ್ರಾಧ್ಯಾನತೆಯನ್ನು ಪಡೆಯಲಿದ್ದು, ಉತ್ತಮ ಭೋಜನವನ್ನು ಎಲ್ಲರೂ ಸೇರಿ ಮಾಡಲಿದ್ದೇವೆ ಎಂದು ಸಂಬಂಧಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿಯವರು ಕೂಡ ಆಕೆಯನ್ನು ಭಾರತಕ್ಕೆ ಆಹ್ವಾನಿಸಿದ್ದು, ಇದೆಲ್ಲವೂ ಆಕೆಯ ಮುಂದಿನ ಒಂದೂವರೆ ತಿಂಗಳ ಬಳಿಕವೇ ನಿಶ್ಚಯವಾಗಲಿದೆ. ಆ ನಂತರ ಪ್ರಧಾನಿಯವರ ಲಭ್ಯತೆ ಹಾಗೂ ಆಕೆಯ ಮುಂದಿನ ಕಾರ್ಯಕ್ರಮಗಳನ್ನು ಆಧರಿಸಿ ನಿರ್ಧಾರವಾಗಲಿದೆ. ಸುನೀತಾ ಬಾಹ್ಯಾಕಾಶದಿಂದಲೇ ಮಹಾಕುಂಭದ ಫೋಟೋ ತೆಗೆದು ಶೇರ್ ಮಾಡಿದ್ದನ್ನು ಆಕೆಯ ಕಸಿನ್ಸ್ ಧೃಡಪಡಿಸಿದ್ದಾರೆ. ಇದು ಭಾರತದ ಮೇಲಿರುವ ಆಕೆಯ ಪ್ರೀತಿಯನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸುನೀತಾ ಅವರ ಬಳಿ ಇರುವ ಅನುಭವದ ಆಧಾರದ ಮೇಲೆ ಅವರು ತಮ್ಮಲ್ಲಿರುವ ವಿಷಯಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಲಿದ್ದಾರೆ. ಆದ್ದರಿಂದ ಮಾನವಕುಲಕ್ಕೆ ಅವರು ಬಹಳ ದೊಡ್ಡ ಆಸ್ತಿಯಾಗಿದ್ದಾರೆ. ಬಾಹ್ಯಕಾಶದಲ್ಲಿ ಇದ್ದಷ್ಟು ದಿನ ನಿತ್ಯವೂ ಸುನೀತಾ ತನ್ನ ತಾಯಿಯೊಂದಿಗೆ ಸಂವಹನ ನಡೆಸಿರುವುದನ್ನು ಆಕೆಯ ಕುಟುಂಬಸ್ಥರು ಖಚಿತಪಡಿಸಿದ್ದಾರೆ. ಇನ್ನು ಆಕೆಯ ಸಂಬಂಧಿ ಹೇಳುವ ಪ್ರಕಾರ ಸುನೀತಾ ತಮ್ಮ ಮುಂದಿನ ಯೋಜನೆಯ ಬಗ್ಗೆ , ಯುವ ಮನಸ್ಸುಗಳನ್ನು ಪ್ರಭಾವಿಸುವ ಬಗ್ಗೆ ಅಥವಾ ತನ್ನ ಪ್ರೀತಿಯ ಖಾದ್ಯ ದಾಲ್ ದೋಕ್ಲಿ ಸವಿಯುತ್ತಾ ಆರಾಮವಾಗಿ ಜೀವನದ ದಿನಗಳನ್ನು ಕಳೆಯುವ ಬಗ್ಗೆ ಅವರೇ ನಿರ್ಧರಿಸಬೇಕು ಎಂದು ಹೇಳಿದ್ದಾರೆ.
Leave A Reply