ಇಫ್ತಾರ್ ಕೂಟದಲ್ಲಿ ಆಹಾರ ಸವಿದು ಖುಷಿ ವ್ಯಕ್ತಪಡಿಸಿದ ಸುಧಾ ಮೂರ್ತಿ!

ಈಗ ರಮ್ಜಾನ್ ತಿಂಗಳು. ಮುಸಲ್ಮಾನರ ಪವಿತ್ರ ಮಾಸ. ಅವರ ಪದ್ಧತಿಯಂತೆ ಎಲ್ಲೆಡೆ ಇಫ್ತಾರ್ ಕೂಟಗಳನ್ನು ಆಯೋಜಿಸಲಾಗುತ್ತದೆ. ಭಾರತದ ರಾಜಧಾನಿ ದೆಹಲಿಯಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಸಂಘಟನೆಯಿಂದ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಕಾಂಗ್ರೆಸ್ ಪಕ್ಷದ ಉನ್ನತ ಮಟ್ಟದ ನಾಯಕರು, ಸಮಾಜವಾದಿ ಪಕ್ಷದ ಪ್ರಮುಖರ ಸಹಿತ ಅನೇಕ ರಾಜಕೀಯ ಪಕ್ಷ, ಕ್ರೀಡಾ ಕ್ಷೇತ್ರ, ಸಿನೆಮಾ ಕ್ಷೇತ್ರದ, ಉದ್ಯಮಿಗಳನ್ನು ಸೇರಿಸಿಕೊಂಡು ಅನೇಕ ಘಟಾನುಘಟಿಗಳು ಭಾಗವಹಿಸಿದ್ದರು. ಈ ಇಫ್ತಾರ್ ಕೂಟದಲ್ಲಿ ಭಾರತೀಯ ಜನತಾ ಪಾರ್ಟಿಯ ರಾಜ್ಯಸಭಾ ಸಂಸದೆ ಶ್ರೀಮತಿ ಸುಧಾ ಮೂರ್ತಿ ಭಾಗವಹಿಸಿ ಆಹಾರವನ್ನು ಸವಿದಿದ್ದಾರೆ. ಈ ಸಂದರ್ಭದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ ” ಎಲ್ಲರಿಗೂ ಶಾಂತಿ, ಸಾಮರಸ್ಯದ ರಂಜಾನ್ ಶುಭಾಶಯಗಳು. ಎಲ್ಲರೂ ಎಲ್ಲಾ ಹಬ್ಬಗಳನ್ನು ಎಂಜಾಯ್ ಮಾಡಬೇಕು. ನನಗೆ ಇಲ್ಲಿ ಪ್ರೀತಿಯಿಂದ ಕರೆದಿದ್ದಾರೆ. ಅದಕ್ಕೆ ಖುಷಿಯಾಗಿದೆ. ಹಾಗೆ ಕರೆದಿದ್ದಕ್ಕೆ ಬಂದಿದ್ದೇನೆ. ನಾಳೆ ನೀವು ಕರೆದ್ರೂ ಬರುತ್ತೇನೆ” ಎಂದು ಹೇಳಿದ್ದಾರೆ.
ಸುಧಾಮೂರ್ತಿಯವರು ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದು ಅವರ ಸ್ವನಿರ್ಧಾರವೋ ಅಥವಾ ಬಿಜೆಪಿ ಹೈಕಮಾಂಡ್ ಅನುಮತಿಯನ್ನು ಪಡೆದಿದ್ದಾರೋ ಎನ್ನುವುದು ಖಚಿತವಾಗಿಲ್ಲ. ನಾನು ಪ್ರೀತಿಯಿಂದ ಯಾರು ಕರೆದರೂ ಹೋಗುತ್ತೇನೆ ಎಂದು ಮಾಧ್ಯಮದವರ ಮುಂದೆ ಹೇಳುವ ಮೂಲಕ ಅವರು ಜಾತ್ಯಾತೀತ ನಿಲುವನ್ನು ತಳೆದಿರಬಹುದು. ಆದರೆ ಬಿಜೆಪಿ ಮುಖಂಡರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು.
ಸುಧಾ ಮೂರ್ತಿಯವರ ಪತಿ ನಾರಾಯಣ ಮೂರ್ತಿ ಇನ್ಫೋಸಿಸ್ ಸಂಸ್ಥೆಯ ಸ್ಥಾಪಕರಲ್ಲಿ ಪ್ರಮುಖರಾಗಿ ಇತ್ತೀಚೆಗೆ ಯುವಕರು ವಾರಕ್ಕೆ 70 ಗಂಟೆ ದುಡಿದು ದೇಶವನ್ನು ಅಭಿವೃದ್ಧಿ ಪಥದಲ್ಲಿ ನಡೆಸಬೇಕು ಎಂದು ಹೇಳಿ ಚರ್ಚೆಗೆ ನಾಂದಿ ಹಾಡಿದ್ದರು. ಕಳೆದ ವರ್ಷ ಮಹಿಳಾ ದಿನದಂದು ಸುಧಾಮೂರ್ತಿ ಅವರನ್ನು ರಾಜ್ಯಸಭಾ ಸದಸ್ಯರಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.
Leave A Reply