ಸಲ್ಮಾನ್-ರಶ್ಮಿಕಾ 31 ವಯಸ್ಸಿನ ಅಂತರ! ಇದಕ್ಕೆ ಸಲ್ಲು ಉತ್ತರ ಏನು?

ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಈಗ ತಮ್ಮ ಹೊಸ ಸಿನೆಮಾದ ಬಿಡುಗಡೆಯ ಸಂತಸದಲ್ಲಿದ್ದಾರೆ. 60 ನೇ ವಯಸ್ಸಿಗೆ ಕಾಲಿಟ್ಟಿರುವ ಸಲ್ಮಾನ್ ಈಗಲೂ ಬಾಲಿವುಡ್ ಬೇಡಿಕೆಯ ನಟ. ಅವರ ಹೊಸ ಸಿನೆಮಾ ಸಿಕಂದರ್ ಬೆಳ್ಳಿತೆರೆಗೆ ಬರಲು ದಿನಗಣನೆ ಆರಂಭವಾಗಿದೆ. ಇದರ ಪ್ರಚಾರಕ್ಕಾಗಿ ಅವರು ಸಿನೆಮಾದ ನಾಯಕಿ, ಕೊಡಗಿನ ಮೂಲದ ರಶ್ಮಿಕಾ ಮಂದಣ್ಣ ಜೊತೆ ಬೇರೆ ಬೇರೆ ರಾಜ್ಯಗಳ ಪ್ರಮುಖ ನಗರಗಳಲ್ಲಿ ಪ್ರಚಾರ ಅಭಿಯಾನ ಆರಂಭಿಸಿದ್ದಾರೆ. ಅಲ್ಲಿ ಮಾಧ್ಯಮದವರ ಜೊತೆ ಸಿನೆಮಾದ ಬಗ್ಗೆ ಮುಕ್ತವಾಗಿ ಮಾತನಾಡುತ್ತಾ, ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ಮುಂಬೈಯಲ್ಲಿ ಸಿನೆಮಾ ಪ್ರಚಾರದಲ್ಲಿ ಭಾಗವಹಿಸಿದರು. ಅಲ್ಲಿ ಅವರಿಗೆ ಮಾಧ್ಯಮದವರ ಒಂದು ಪ್ರಶ್ನೆ ಎದುರಾಯಿತು. ಅದೇನೆಂದರೆ ವಯಸ್ಸಿನ ಅಂತರ ಮತ್ತು ರೋಮಾನ್ಸ್.
ಸಲ್ಲುವಿಗೆ ಈಗ 60 ರ ಹರೆಯ. ರಶ್ಮಿಕಾ ಇನ್ನೂ 28 ರ ಹೊಸ್ತಿಲಲ್ಲಿ ಇದ್ದಾರೆ. ಏನೇ ಅಳೆದು ತೂಗಿ ಹಾಕಿದರೂ 31 ವರ್ಷದ ಗ್ಯಾಪ್ ಇದೆ. ಇದು ಒಂದು ತಂದೆ, ಮಗಳ ವಯಸ್ಸಿನ ಅಂತರದಷ್ಟೇ ಇದೆ. ಹೀಗಿರುವಾಗ ತೆರೆಯ ಮೇಲೆ ಜೋಡಿಯಾಗಿ ನಟಿಸುವಾಗ ರೋಮಾನ್ಸ್ ಇದ್ದರೆ ಅದನ್ನು ಹೇಗೆ ನಿರ್ವಹಿಸುವಿರಿ ಎಂದು ಮಾಧ್ಯಮದವರು ಕೇಳಿದ್ದಾರೆ. ಇಂತಹ ಪ್ರಶ್ನೆ ಬಂದಾಗ ತಮ್ಮ ನೇರ ಉತ್ತರಕ್ಕೆ ಹೆಸರಾಗಿರುವ ಸಲ್ಲು ” ರೋಮಾನ್ಸ್ ಬಗ್ಗೆ ರಶ್ಮಿಕಾರಿಗೆ ತೊಂದರೆ ಇಲ್ಲ. ಇನ್ನು ನಿಮಗ್ಯಾಕೆ ಸಮಸ್ಯೆ?” ಎಂದು ಮರುಪ್ರಶ್ನೆ ಹಾಕಿದ್ದಾರೆ. ಸಲ್ಮಾನ್ ಖಾನ್ ಈ ಉತ್ತರದಿಂದ ಅಲ್ಲಿಯೇ ಇದ್ದ ರಶ್ಮಿಕಾ ನಾಚಿ ನೀರಾಗಿದ್ದಾರೆ. ರಶ್ಮಿಕಾ ಪ್ರತಿಕ್ರಿಯೆ ಕಂಡು ಇನ್ನಷ್ಟು ಉತ್ಸಾಹಭರಿತವಾಗಿ ಮಾತನಾಡುವುದನ್ನು ಮುಂದುವರೆಸಿದ ಸಲ್ಮಾನ್ ” ಮುಂದೆ ರಶ್ಮಿಕಾಗೆ ಮದುವೆಯಾಗಿ ಅವಳಿಗೆ ಹೆಣ್ಣುಮಕ್ಕಳಾದರೆ, ಆ ಮಕ್ಕಳು ದೊಡ್ಡವರಾದ ಬಳಿಕ ರಶ್ಮಿಕಾ ಸಮ್ಮತಿ ಪಡೆದು ಅಕೆಯ ಪುತ್ರಿ ಜೊತೆಗೂ ಅಭಿನಯಿಸುವೆ” ಎಂದು ಹೇಳಿದ್ದಾರೆ. ಇದರಿಂದ ರಶ್ಮಿಕಾ ಅವರು ಇನ್ನಷ್ಟು ನಾಚಿದ್ದು, ಅಲ್ಲಿ ಚಿತ್ರತಂಡದಲ್ಲಿ ಖುಷಿಯ ಅಲೆ ಎಬ್ಬಿಸಿತ್ತು.
ಸಲ್ಮಾನ್ ಈಗಾಗಲೇ ತಮಗಿಂತ ಎಷ್ಟೋ ಚಿಕ್ಕವರಾದ ನಟಿಯೊಂದಿಗೆ ನಾಯಕನಾಗಿ ಅಭಿನಯಿಸಿದ್ದಾರೆ. ಅದಕ್ಕೆ ಅವರು ಇಟ್ಟುಕೊಂಡಿರುವ ವರ್ಚಸ್ಸು, ದೇಹಧಾಡ್ಯತೆ ಮತ್ತು ಜನಪ್ರಿಯತೆಯೇ ಕಾರಣ. ಇದರಿಂದ ಅವರೊಂದಿಗೆ ನಟಿಸಲು ಎಷ್ಟೇ ಚಿಕ್ಕ ವಯಸ್ಸಿನ ನಟಿಯರಾದರೂ ಒಪ್ಪಿಕೊಳ್ಳುತ್ತಾರೆ. ಅದರೊಂದಿಗೆ ಸಂಭಾವನೆ, ಪರದೆಯ ಮೇಲೆ ಪ್ರಭಾವಿ ಪಾತ್ರ ಹಾಗೂ ಚಿತ್ರರಂಗದಲ್ಲಿ ಹೆಚ್ಚಿನ ಸಾಧನೆಗೆ ಸಿಗುವ ಅವಕಾಶ ಎಲ್ಲವೂ ಗಣನೆಗೆ ಬರುವುದರಿಂದ ನಟಿಯರೂ ಇಲ್ಲಿ ವಯಸ್ಸಿನ ಅಂತರ ನೋಡುವುದಿಲ್ಲ. ಅದರೆ ಕೆಲವೊಮ್ಮೆ ಪ್ರೇಕ್ಷಕ ಮಾತ್ರ ತೆರೆಯ ಮೇಲೆ ಜೋಡಿ ಚೆನ್ನಾಗಿ ಕಾಣಿಸಿ ಕೆಮೆಸ್ಟ್ರಿ ವರ್ಕ್ ಔಟ್ ಆದರೆ ಓಕೆ ಎನ್ನುತ್ತಾನೆ, ಇಲ್ಲದಿದ್ದರೆ ರಿಜೆಕ್ಟ್ ಮಾಡುತ್ತಾನೆ. ಒಟ್ಟಿನಲ್ಲಿ ಸಿಕಂದರ್ ತೆರೆಗೆ ಬಂದ ನಂತರ ರಶ್ಮಿಕಾ ಜೊತೆ ಸಲ್ಲು ರೋಮಾನ್ಸ್ ಅನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸಿದ್ದಾರೆ ಎನ್ನುವುದು ಗೊತ್ತಾಗುತ್ತದೆ.
Leave A Reply