ನಗ್ನ ವಿಡಿಯೋ ಬಗ್ಗೆ ಶ್ರುತಿ ನಾರಾಯಣ್ ಸ್ಪಷ್ಟನೆ, ದಯವಿಟ್ಟು ಶೇರ್ ಮಾಡಬೇಡಿ!

ಕಾಲಿವುಡ್ ನಟಿ, ಸೋಶಿಯಲ್ ಮೀಡಿಯಾ ಪ್ರಭಾವಿ ಶ್ರುತಿ ನಾರಾಯಣ್ ಅವರದ್ದು ಎನ್ನಲಾಗಿದ್ದ 14 ನಿಮಿಷದ ನಗ್ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋ ಬಗ್ಗೆ ತರಹೇವಾರಿ ಸುದ್ದಿಗಳು ಹರಿದಾಡುತ್ತಿದ್ದವು. ಖಾಸಗಿ ಆಡಿಷನ್ ಸಮಯದಲ್ಲಿ ಈ ವಿಡಿಯೋ ಸೋರಿಕೆಯಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಇನ್ನೊಂದೆಡೆ ತಮಿಳು ಚಿತ್ರರಂಗದ ಕಾಸ್ಟಿಂಗ್ ಕೌಚ್ ಬಗ್ಗೆನೂ ಈ ವಿಡಿಯೋ ಅಲ್ಲಿನ ಕರಾಳ ಮುಖವನ್ನು ಬಹಿರಂಗಪಡಿಸುತ್ತದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಆದರೆ ಈ ವಿಡಿಯೋ ಬಗ್ಗೆ ನಟಿ ಶ್ರುತಿ ನಾರಾಯಣ್ ಅವರು ಯಾವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಮತ್ತು ನಾಗರಿಕರಲ್ಲಿ ಇತ್ತು. ಆ ವಿಷಯದಲ್ಲಿ ನಟಿ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ. ನಗ್ನ ವಿಡಿಯೋ ಎಐನಿಂದ ತಯಾರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇಂತಹ ಒಂದು ಅನುಮಾನ ಆರಂಭದಲ್ಲಿ ಇತ್ತು. ಆದರೆ ನಟಿಯೇ ಹೇಳುವ ತನಕ ಯಾರೂ ಆ ಬಗ್ಗೆ ನಿರ್ಧಾರ ತಳೆಯಲು ಸಾಧ್ಯವಿರಲಿಲ್ಲ. ಯಾಕೆಂದರೆ ಅದು ಆಕೆಯ ಜೀವನದ ಪ್ರಶ್ನೆಯೂ ಆಗಿತ್ತು.
ನಟಿ ಶ್ರುತಿ ಈ ಬಗ್ಗೆ ತಮ್ಮ ಇನ್ಟಾಗ್ರಾಂ ಸ್ಟೋರಿ ಮೂಲಕ ಪ್ರತಿಕ್ರಿಯಿಸಿದ್ದಾರೆ. ಆ ನಗ್ನ ವಿಡಿಯೋ ವೈರಲ್ ಆದ ಬೆನ್ನಲ್ಲೇ ಶ್ರುತಿ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನು ಪ್ರೈವೇಟ್ ಮಾಡಿಕೊಂಡಿದ್ದರು. ಇದೀಗ ತಮ್ಮ ಖಾತೆಯನ್ನು ಮತ್ತೆ ಸಾರ್ವಜನಿಕಗೊಳಿಸಿದ್ದು, ವೈರಲ್ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಶೇರ್ ಮಾಡಿರುವ ಮೊದಲ ಇನ್ಟಾ ಸ್ಟೋರಿಯಲ್ಲಿ ವೈರಲ್ ಆಗುತ್ತಿರುವ ವಿಡಿಯೋವನ್ನು ಎಐ ಕ್ಲೋನಿಂಗ್ ಮೂಲಕ ಮಾಡಲಾಗಿದೆ ಎಂದಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಒಂದು ವಿಡಿಯೋವನ್ನು ಅವರು ಅಟ್ಯಾಚ್ ಮಾಡಿದ್ದಾರೆ.
ಎರಡನೇ ಸ್ಟೋರಿಯಲ್ಲಿ ಯಾರೂ ಕೂಡ ಆ ವಿಡಿಯೋವನ್ನು ಕಾಡ್ಗಿಚ್ಚಿನಂತೆ ಹರಡಬಾರದು ಎಂದು ಶ್ರುತಿ ನಾರಾಯಣನ್ ಮನವಿ ಮಾಡಿಕೊಂಡಿದ್ದಾರೆ. ನಿಮಗೆ ಇಂತಹ ವಿಡಿಯೋ ಗಳು ಖುಷಿ ನೀಡಬಹುದು. ಆದರೆ ನನಗೆ ಮತ್ತು ನನ್ನ ಹತ್ತಿರದವರಿಗೆ ಮನಸ್ಸಿಗೆ ನೋವನ್ನು ತಂದೊಡ್ಡುತ್ತದೆ. ಅಲ್ಲದೇ ಒಂದು ವೇಳೆ ನೀವು ನೋಡುವುದಾದರೆ ನಿಮ್ಮ ತಾಯಿ, ಸಹೋದರಿ ಅಥವಾ ಗೆಳತಿಯ ವಿಡಿಯೋಗಳನ್ನು ನೋಡಿ. ಏಕೆಂದರೆ ಅವರು ಕೂಡ ಮಹಿಳೆಯರು. ಅವರಿಗೂ ನನ್ನಂತೆಯೇ ದೇಹವಿದೆ. ಆದ್ದರಿಂದ ನಮ್ಮ ತೇಜೋವಧೆ ಮಾಡಲು ಎಐ ವಿಡಿಯೋ ನೋಡುವುದಕ್ಕಿಂದ ಹೋಗಿ ನಿಮ್ಮವರ ವಿಡಿಯೋ ನೋಡಿ ಎಂದು ನೋವು ತೋಡಿಕೊಂಡಿದ್ದಾರೆ.
Leave A Reply