ಭಯೋತ್ಪಾದನೆ ವಿರುದ್ಧದ ಭಾರತದ ನಿಲುವಿಗೆ ಬ್ರಿಕ್ಸ್‌ನಲ್ಲಿ ರಾಜತಾಂತ್ರಿಕ ಜಯ
ಬೀಜಿಂಗ್: ಭಾರತದ ಭಯೋತ್ಪಾದನೆ ನಿಗ್ರಹ ವಾದಕ್ಕೆೆ ಬ್ರಿಕ್ಸ್ ಶೃಂಗ ಸಭೆಯಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದ್ದು, ಎಲ್ಲ ರಾಷ್ಟ್ರಗಳ ಭಯೋತ್ಪಾದನೆಯನ್ನು ಖಂಡಿಸಿದ್ದು, ಭಯೋತ್ಪಾದನೆಗೆ ಬೆಂಬಲಿಸುವ ವ್ಯಕ್ತಿ ಮತ್ತು ರಾಷ್ಟ್ರಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇದರಿಂದ ಭಾರತಕ್ಕೆೆ ಮತ್ತೊ0ದು ರಾಜತಾಂತ್ರಿಕ ಜಯ ದೊರೆತಿದೆ. ಈ ಮೂಲಕ ಚೀನಾ ಮತ್ತು ಪಾಕಿಸ್ತಾನದ ಎದುರು ಭಾರತದ ತಾಕತ್ತು ಮತ್ತೊಮ್ಮೆ ಪ್ರದರ್ಶಿಸಲ್ಪಟ್ಟಿದೆ.
ವಿಶ್ವಾದ್ಯಂತ ಭಯೋತ್ಪಾದನೆ ದೊಡ್ಡ ತೊಡಕಾಗಿ ಪರಿಣಮಿಸಿದ್ದು, ಬ್ರಿಕ್ಸ್ ರಾಷ್ಟ್ರಗಳಿಗೂ ಭಯೋತ್ಪಾದನೆಯಿಂದ ಭಾರಿ ತೊಂದರೆ ಎದುರಾಗಲಿದೆ. ಅದನ್ನು ಮಟ್ಟ ಹಾಕದಿದ್ದರೇ ವಿಶ್ವಕ್ಕೆ ಮಾರಕವಾಗಲಿದೆ. ಎಲ್ಲ ರಾಷ್ಟ್ರಗಳು ಭಯೋತ್ಪಾನೆಯನ್ನು ಹತ್ತಿಕ್ಕಲು ಶ್ರಮಿಸಬೇಕು ಎಂಬ ರಾಷ್ಟ್ರಗಳು ಭಾರತದ ನಿಲುವಿಗೆ ಎಲ್ಲ ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸಿವೆ.
ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್ ಇ ತಯ್ಯಬಾ, ತಾಲಿಬಾನ್, ಅಲ್ ಕೈದಾ, ಐಎಸ್‌ಐಎಸ್, ಜೈಷ್ ಎ ಮಹಮದ್, ಹಿಜಬ್ ಉತ್ ತೆಹ್ರಿರ್ ವಿರುದ್ಧ ಹೋರಾಡಬೇಕು ಎಂಬ ನಿರ್ಣಯ ಕೈಗೊಳ್ಳಲು ಎಲ್ಲ ರಾಷ್ಟ್ರಗಳು ನಿರ್ಣಯಿಸಿವೆ. ಅಲ್ಲದೇ ಉತ್ತರ ಕೋರಿಯಾ ಕೈಗೊಂಡ ಅಣು ಪರೀಕ್ಷೆೆ ವಿರುದ್ಧವು ಆಕ್ರೋಶ ವ್ಯಕ್ತವಾಗಿದ್ದು, ಉತ್ತರ ಕೋರಿಯಾ ನಿಲುವಿಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದು ಉತ್ತರ ಕೋರಿಯಾಕ್ಕೆೆ ಎಚ್ಚರಿಕೆ ನೀಡುವ ಕುರಿತು ಚರ್ಚಿಸಲಾಗಿದೆ. ಸಹಕಾರ ತತ್ತ್ವದಲ್ಲಿ ಶಾಂತಿ, ಸುವ್ಯವಸ್ಥೆೆ ಕಾಪಾಡಲು ಬ್ರಿಕ್‌ಸ್ ಸಂಸ್ಥೆೆಗಳು ನಿರ್ಧರಿಸಿವೆ.
ಬ್ರಿಕ್‌ಸ್ ಸಭೆಯಲ್ಲಿ ಮೋದಿ ಭಯೋತ್ಪಾದನೆ ಕುರಿತು ಮಾತನಾಡಬಾರದು ಎಂದು ಚೀನಾ ಎಚ್ಚರಿಕೆ ನೀಡಿತ್ತು. ಆದರೆ ಪ್ರಸ್ತುತ ಬ್ರಿಕ್ಸ್‌ನ ಎಲ್ಲ ರಾಷ್ಟ್ರಗಳು ಕೈಗೊಂಡಿರುವ ನಿರ್ಣಯ ಭಾರತದ ಪರವಾಗಿದ್ದು, ಚೀನಾ ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಈ ಮೂಲಕ ಎನ್‌ಡಿಎ ಸರಕಾರಕ್ಕೆ ಮತ್ತೊ0ದು ಐತಿಹಾಸಿಕ ರಾಜತಾಂತ್ರಿಕ ಗೆಲವು ದೊರೆತಂತಾಗಿದೆ.
Leave A Reply