140 ಕಿ.ಮೀ ನಡೆಯುತ್ತಾ ಅನಂತ್ ಅಂಬಾನಿಯಿಂದ ದ್ವಾರಕ ಭೇಟಿಗೆ ಸಂಕಲ್ಪ!

ಶ್ರೀಮಂತರ ಮಕ್ಕಳಿಂದ ಇದೆಲ್ಲಾ ಸಾಧ್ಯವಾ ಎನ್ನುವ ಪ್ರಶ್ನೆಗೆ ಉತ್ತರವಾಗಿ ದೇಶದ ಅತ್ಯಂತ ಶ್ರೀಮಂತ ಉದ್ಯಮಿಯ ಪುತ್ರ ಅನಂತ್ ಅಂಬಾನಿ 140 ಕಿ.ಮೀ ಕ್ರಮಿಸಿ ದ್ವಾರಕೆಯಲ್ಲಿ ದೇವರ ದರ್ಶನ ಮಾಡಲು ಹೊರಟಿದ್ದಾರೆ. ಗುಜರಾತಿನ ಜಾಮ್ ನಗರದ ತಮ್ಮ ಮನೆಯಿಂದ ಹೊರಟು ದ್ವಾರಕಕ್ಕೆ ಬರುವ ದಾರಿಯುದ್ದಕ್ಕೂ ಅವರು ಹನುಮಾನ್ ಚಾಲಿಸಾ ಪಠಣ ಮಾಡುತ್ತಾ ಇದ್ದಾರೆ. ತಮ್ಮ 30ನೇ ವರ್ಷದ ಜನ್ಮದಿನವನ್ನು ಅನಂತ್ ಅಂಬಾನಿ ಈ ರೀತಿಯಲ್ಲಿ ಆಚರಿಸಿಕೊಳ್ಳಲು ತೀರ್ಮಾನಿಸಿದ್ದಾರೆ. ಕೇವಲ ನಡಿಗೆಯ ಮೂಲಕ ಅಷ್ಟು ದೂರ ಕ್ರಮಿಸಲಿರುವ ಅನಂತ್ ಅಂಬಾನಿ ತಮ್ಮ ದೇವರ ಮೇಲಿರುವ ಭಕ್ತಿಯನ್ನು ದೈಹಿಕ ಶ್ರಮದ ಮೂಲಕವೂ ತೋರಿಸಿಕೊಟ್ಟು ಯುವಜನಾಂಗಕ್ಕೆ ಉತ್ತಮ ಸಂದೇಶ ನೀಡುತ್ತಿದ್ದಾರೆ.
ನಮ್ಮ ಸ್ವಅಭಿವೃದ್ಧಿ ಮತ್ತು ಯಶಸ್ಸಿಗೆ ದೇವರ ಆರ್ಶೀವಾದ ಎಷ್ಟು ಅಗತ್ಯ ಎನ್ನುವುದನ್ನು ಅನಂತ್ ಸಾಧಿಸಿ ತೋರಿಸಿದ್ದಾರೆ. ತಮ್ಮ ಪಾದಯಾತ್ರೆಯ ಉದ್ದಕ್ಕೂ ಸನಾತನ ಧರ್ಮದಲ್ಲಿ ವಿಶ್ವಾಸ ಮತ್ತು ಸಮರ್ಪಣಾ ಮನೋಭಾವದಿಂದ ಉನ್ನತ ಸ್ಥಾನಕ್ಕೆ ಏರಲು ದೇವರ ಅನುಗ್ರಹ ಪಡೆಯಬಹುದು ಎಂದು ಕ್ರಿಯೆಯ ಮೂಲಕ ತೋರಿಸಿದ್ದಾರೆ. ಶಿಸ್ತು, ನಂಬಿಕೆ ಮತ್ತು ತಾನು ಏನೂ ಅಲ್ಲ, ಎಲ್ಲವೂ ಭಗವಂತ ಎನ್ನುವ ದೇವರೊಂದಿಗಿನ ಸಂಬಂಧದಿಂದ ಯಾವುದೇ ಸವಾಲನ್ನು ಎದುರಿಸಿ ಗೆದ್ದು ಬರಬಹುದು ಎಂದು ಅಂಬಾನಿ ಪುತ್ರ ತೋರಿಸಿಕೊಟ್ಟಿದ್ದಾರೆ.
ಪಾದಯಾತ್ರೆಯ ಮುಂಚೂಣಿಯಲ್ಲಿ ನಡೆದು ಬರುತ್ತಿರುವ ಅನಂತ ಅಂಬಾನಿ, ಒಂದು ಯಶಸ್ಸನ್ನು ಕನಸು ಕಾಣುವ ಜೊತೆಗೆ ಅದನ್ನು ಪಡೆಯಲು ಶಿಸ್ತು ಮತ್ತು ಅನುಷ್ಠಾನ ಎಷ್ಟು ಮುಖ್ಯ ಎಂದು ಈ ಮೂಲಕ ತೋರಿಸಿಕೊಟ್ಟಿದ್ದಾರೆ. ಅಧ್ಯಾತ್ಮಿಕತೆ ಮತ್ತು ಮಾನಸಿಕ ಶಕ್ತಿಯ ಮೇಲೆ ನಾವು ವಿಶ್ವಾಸ ಇಟ್ಟಾಗ ಯಶಸ್ಸಿನ ದಾರಿಯಲ್ಲಿ ಬರುವ ಎಂತಹ ಸಂಕಷ್ಟಗಳನ್ನು ಕೂಡ ದೂರ ಮಾಡಬಹುದು ಎಂದು ಅನಂತ್ ನಂಬಿದ್ದಾರೆ.
ಅನಂತ್ ಅಂಬಾನಿ ಮಾರ್ಚ್ 28 ರಂದು ಪಾದಯಾತ್ರೆ ಆರಂಭಿಸಿದ್ದು, ಒಟ್ಟು 12 ರಿಂದ 13 ದಿನಗಳ ತನಕ ನಡೆಯಲಿದ್ದಾರೆ. ನಿತ್ಯ ಕನಿಷ್ಟ 12 ಕಿಲೋ ಮೀಟರ್ ನಡೆಯುವ ಪಾದಯಾತ್ರೆ ದ್ವಾರಕಾವನ್ನು ಏಪ್ರಿಲ್ 8 ರಂದು ತಲುಪಲಿದೆ. ಅಲ್ಲಿ ಅವರು ಏಪ್ರಿಲ್ 10 ರಂದು ದ್ವಾರಕಾಧೀಶರಿಗೆ ಪೂಜೆ ಸಲ್ಲಿಸುವ ಮೂಲಕ ಜನ್ಮದಿನವನ್ನು ಆಚರಿಸಲಿದ್ದಾರೆ.
Leave A Reply