ನಿರಂತರ 25 ಗಂಟೆ ಭಾಷಣ ಮಾಡಿದ ಸಂಸದ!

ರಾಜಕಾರಣಿಗಳು ಹದಿನೈದು ನಿಮಿಷ ಭಾಷಣ ಮಾಡಿದರೆ ನಮ್ಮಲ್ಲಿ ಎಷ್ಟೋ ಜನಕ್ಕೆ ಕಿರಿಕಿರಿ ಆಗುತ್ತದೆ. ಒಂದು ಗಂಟೆ ಭಾಷಣ ಮಾಡಿದರೆ ವಾಕರಿಕೆ ಬರುತ್ತದೆ. ಹಾಗಿರುವಾಗ ನಿರಂತರ ಹತ್ತು ಗಂಟೆಯಲ್ಲ, ಇಪ್ಪತ್ತು ಗಂಟೆಯಲ್ಲ, 25 ಗಂಟೆ, 4 ನಿಮಿಷ ಭಾಷಣ ಮಾಡಿದ ಹೇಗಾಗಬೇಡಾ. ಕೇಳುವವರ ಕಥೆ ಬಿಡಿ, ಯಾರೂ ಕೇಳುತ್ತಾರೋ, ಇಲ್ವೋ ಅದು ಬೇರೆ ವಿಷಯ. ಆದರೆ ಭಾಷಣ ಮಾಡುವವ ನೆಟ್ಟಗೆ ನಿಂತು, ಊಟ, ತಿಂಡಿ ಇಲ್ಲದೇ, ಶೌಚಕ್ಕೂ ಹೋಗದೇ ಭಾಷಣ ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ.
ಇದು ನಡೆದದ್ದು ವಾಷಿಂಗ್ಟನ್ ನಲ್ಲಿ. ಕೋರಿ ಬೂಕರ್ ಎನ್ನುವ 55 ವರ್ಷ ಪ್ರಾಯದ ಸಂಸದ ಸಂಸತ್ತಿನ ಮೇಲ್ಮನೆಯಾದ ಸೆನೆಟ್ ನಲ್ಲಿ ಸತತ 25 ಗಂಟೆ 4 ನಿಮಿಷಗಳ ಕಾಲ ಭಾಷಣ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ನ್ಯೂಜೆರ್ಸಿಯ ಡೆಮಾಕ್ರೆಟಿಕ್ ಪಕ್ಷದ ಸಂಸದರಾಗಿರುವ ಕೋರಿ ಬೂಕರ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಈ ಭಾಷಣ ಮಾಡಿದ್ದಾರೆ. ತಮ್ಮ 55 ನೇ ವಯಸ್ಸಿನಲ್ಲಿ 25 ಗಂಟೆ ಕಾಲ ಕೂರದೆ, ವಿಶ್ರಾಂತಿ ಪಡೆಯದೆ ಭಾಷಣ ಮಾಡಿದ ಬೂಕರ್ ದೈಹಿಕ ಕ್ಷಮತೆ ಪ್ರಶಂಸೆ ಬಂದಿದೆ. ಒಂದು ಕಡೆ ದೈಹಿಕ ಒತ್ತಡ ಮತ್ತೊಂದೆಡೆ ಮಾನಸಿಕ ತಯಾರಿ ಎರಡನ್ನೂ ನೋಡಿದರೆ ಇದು ಸಾಧ್ಯಾನಾ ಎಂದು ಅನಿಸುತ್ತದೆ.
ಈ ಮೊದಲು 1957 ರಲ್ಲಿ 24 ಗಂಟೆ 18 ನಿಮಿಷ ಭಾಷಣ ಮಾಡಿದ್ದ ರಿಪಬ್ಲಿಕನ್ ಸಂಸದ ಸ್ಟ್ರೋಮ್ ಥರ್ಮಂಡ್ ರ ದಾಖಲೆ ಮುರಿದಿದ್ದಾರೆ.
Leave A Reply