ಕಲ್ಯಾಣ ಮಂಟಪದಲ್ಲಿ ಗೋವಿಗೆ ಸೀಮಂತ!

ಗೋಮಾತೆಯ ಮೇಲೆ ಕೆಲವರಿಗೆ ಇರುವ ಪ್ರೀತಿಯನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಗೋವನ್ನು ಕಟುಕರಿಂದ ರಕ್ಷಿಸುವುದು ಒಂದು ರೀತಿಯ ಹೋರಾಟವಾದರೆ, ಮನೆಯಲ್ಲಿ ಸಾಕುವ ಗೋವನ್ನು ಮನೆಯ ಸದಸ್ಯನಂತೆ ನೋಡಿಕೊಳ್ಳುವುದು ಇನ್ನೊಂದು ರೀತಿಯ ಪ್ರೀತಿ. ಹಳ್ಳಿಗಳಲ್ಲಿ ಗೋವುಗಳನ್ನು ವಿಶೇಷ ಅಕ್ಕರೆಯಿಂದ ನೋಡಿಕೊಳ್ಳುವ ಸಂಪ್ರದಾಯ ಇದೆ. ಗರ್ಭೀಣಿ ಆದ ಹಸುವಿಗೆ ಸೀಮಂತ ಶಾಸ್ತ್ರ ಮಾಡುವ ಮೂಲಕ ಹಾಸನದಲ್ಲಿ ರೈತನೊಬ್ಬ ಈ ರೀತಿಯಲ್ಲಿ ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ. ಇನ್ನು ಇವನಿಗೆ ಸೀಮಂತ ಶಾಸ್ತ್ರ ಕಡಿಮೆ ಖರ್ಚಿನಲ್ಲಿ ಆಗಿಲ್ಲ. ಅದಕ್ಕಾಗಿ ಆತ ಚೌಲ್ಟಿಯನ್ನೇ ಬುಕ್ ಮಾಡಿದ್ದ. ಅಲ್ಲಿ ನೂರಾರು ಜನರನ್ನು ಕಾರ್ಯಕ್ರಮಕ್ಕೆ ಕರೆಸಿದ್ದ.
ಹಾಸನದ ಚನ್ನಪಟ್ಟಣದದಲ್ಲಿ ಇಷ್ಟೆಲ್ಲಾ ಮಾಡಿದ್ದ ರೈತನ ಪ್ರೀತಿ ಕಂಡು ಜನ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ದಿನೇಶ್ ಸಾಕಿದ ಹಳ್ಳಿಕಾರ್ ತಳಿಯ ಹಸುವಿಗೆ 9 ತಿಂಗಳು ತುಂಬಿದ ಹಿನ್ನಲೆಯಲ್ಲಿ ಸೀಮಂತ ಶಾಸ್ತ್ರವನ್ನು ಪಕ್ಕಾ ಮನುಷ್ಯರಿಗೆ ಮಾಡಿದ ಹಾಗೆ ಮಾಡಲಾಗಿತ್ತು. ಸೀರೆ, ಅರಿಶಿಣ ಕುಂಕುಮ, ಬಳೆ, ಡ್ರೈಫ್ರೂಟ್ಸ್ ಸೇರಿ 12 ತಟ್ಟೆಗಳಲ್ಲಿ ಹಣ್ಣು ತುಂಬಿದ ರೈತ ಕುಟುಂಬ ಮುತ್ತೈದೆಯರ ಕೈಯಲ್ಲಿ ಹಸುವಿಗೆ ಸೀಮಂತ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ನೆರವೇರಿಸಿದ್ದಾರೆ. ಭರ್ಜಜಿಯಾಗಿ ಆಹಾರ ಸೇವಿಸಿದ ಜನರು ಆ ಇಡೀ ಕುಟುಂಬವನ್ನು ಹರಸಿದ್ದಾರೆ.
ಸನಾತನ ಧರ್ಮದ ಸೌಂದರ್ಯವೇ ಹಾಗೆ. ಇಲ್ಲಿನ ಆಚರಣೆಗಳು, ಸಂಪ್ರದಾಯಗಳು ಗೋವಿನಲ್ಲಿಯೂ ದೇವರನ್ನು ಕಾಣುವುದು. ಅದರಂತೆ ಆ ರೈತ ನಡೆದುಕೊಂಡಿದ್ದಾನೆ.
Leave A Reply