ಭಾರತೀಯ ಮುಸ್ಲಿಮರಿಗೆ ಹಜ್ ಯಾತ್ರೆಗೆ ವೀಸಾ ನಿರಾಕರಿಸಿದ ಸೌದಿ ಅರೇಬಿಯಾ!

ಇಂತಹ ಒಂದು ಶಾಕ್ ಸೌದಿ ಅರೇಬಿಯಾ ನೀಡುತ್ತದೆ ಎಂದು ಭಾರತೀಯ ಮುಸ್ಲಿಮರು ಅಂದುಕೊಂಡಿರಲಿಕ್ಕಿಲ್ಲ. ಆದರೂ ಎಲ್ಲರ ನಿರೀಕ್ಷೆಗೂ ಮೀರಿ ಇಂತಹ ಒಂದು ಘಟನೆ ನಡೆದಿದೆ. ಭಾರತೀಯ ಮುಸ್ಲಿಮರು ಸದ್ಯ ಹಜ್ ಯಾತ್ರೆ ಕೈಗೊಳ್ಳಲು ಆಗುವುದಿಲ್ಲ. ಕಾರಣ ಸೌದಿ ಅರೇಬಿಯಾ ಇದೀಗ ಭಾರತೀಯರಿಗೆ ವೀಸಾ ಬ್ಯಾನ್ ಮಾಡಿದೆ. ಕೇವಲ ಉಮ್ರಾ ವೀಸಾ ಮಾತ್ರವಲ್ಲ, ಬ್ಯುಸಿನೆಸ್ ಹಾಗೂ ಫ್ಯಾಮಿಲಿ ವಿಸಿಟ್ ವೀಸಾ ನಿಷೇಧಿಸಿದೆ.
ಜೂನ್ ವರೆಗೆ ವೀಸಾ ಇಲ್ಲ.
ಹಜ್ ಯಾತ್ರೆ ಇರುವುದೇ ಜೂನ್ ತಿಂಗಳ ತನಕ ಮಾತ್ರ. ಜಗತ್ತಿನ ಮೂಲೆ ಮೂಲೆಗಳಿಂದ ಮುಸ್ಲಿಮರು ಮೆಕ್ಕಾ ತಲಪುತ್ತಾರೆ. ಆದರೆ ಈಗ ಜೂನ್ ತಿಂಗಳವರೆಗೆ ವೀಸಾ ನಿರಾಕರಣೆ ಮಾಡಲಾಗಿದೆ. ಇದರಿಂದ ಹಜ್ ಯಾತ್ರೆಗೆ ತೆರಳುವ ಮುಂದಾಗಿರುವ ಮುಸ್ಲಿಮರಿಗೆ ನಿರಾಶೆಯಾಗಿದೆ.
ವೀಸಾ ನಿರಾಕರಣೆಗೆ ಕಾರಣ!
ಉಮ್ರಾ ಯಾತ್ರೆಗೆ ಬರುವವರು ಸರಿಯಾದ ನೋಂದಣೆ ಮಾಡದೇ ಆಗಮಿಸುತ್ತಿದ್ದಾರೆ. ಅಂತವರಿಗೆ ಸೂಕ್ತ ಮಾರ್ಗದರ್ಶನ ಕೂಡ ಇರುವುದಿಲ್ಲ. ಇದರಿಂದ ಸಮಸ್ಯೆ ಎದುರಾಗುತ್ತಿದೆ. ಉಮ್ರಾ ವೀಸಾ ಮೂಲಕ ಸೌದಿ ಅರೇಬಿಯಾಗೆ ಆಗಮಿಸುವ ಹಲವರು ಬಳಿಕ ಇಲ್ಲೇ ವ್ಯವಹಾರ, ವ್ಯಾಪಾರಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅಕ್ರಮವಾಗಿ ಉಳಿದುಕೊಂಡು ಅಕ್ರಮ ವ್ಯಾಪಾರ, ವಹಿವಾಟುಗಳನ್ನು ನಡೆಸುತ್ತಾರೆ. ಇದು ದೇಶದ ವೀಸಾ ನಿಯಮ ಮಾತ್ರವಲ್ಲ, ಕಾರ್ಮಿಕ ನಿಯಮವನ್ನು ಕೂಡ ಉಲ್ಲಂಘಿಸುತ್ತಿದೆ. ಹೀಗಾಗಿ ಈ ಬಾರಿ ಸಂಪೂರ್ಣ ನಿಗಾ ವಹಿಸಲು ಹಾಗೂ ನಿಯಂತ್ರಣ ಹೇರಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸೌದಿ ಅರೇಬಿಯಾ ಸ್ಪಷ್ಟಪಡಿಸಿದೆ.
ಭಾರತ ಮಾತ್ರವಲ್ಲ! ಈಗಾಗಲೇ ಉಮ್ರಾ ವೀಸಾ ಹೊಂದಿರುವ ಮುಸ್ಲಿಮರು ಹಜ್ ಯಾತ್ರೆ ಕೈಗೊಳ್ಳಬಹುದು…
ಅಷ್ಟಕ್ಕೂ ಈ ಬ್ಯಾನ್ ಭಾರತಕ್ಕೆ ಮಾತ್ರವಲ್ಲ. ಪಾಕಿಸ್ತಾನ, ಬಾಂಗ್ಲಾದೇಶ, ಈಜಿಪ್ಟ್, ಇಂಡೋನೇಶಿಯಾ, ಇರಾಕ್, ಜೋರ್ಡಾನ್, ಅಲ್ಜೀರಿಯಾ, ಸೂಡಾನ್, ಇಥೋಪಿಯಾ, ತುನಿಶಿಯಾ, ಯೆಮನ್ ಹಾಗೂ ಮೊರಕ್ಕೋ ದೇಶಗಳಿಗೆ ಸೌದಿ ಅರೇಬಿಯಾ ವೀಸಾ ಬ್ಯಾನ್ ಮಾಡಿದೆ. ಇದರಿಂದ ಈ 14 ದೇಶಗಳಿಂದ ಯಾರೂ ಉಮ್ರಾಗಾಗಿ ಮೆಕ್ಕಾಗೆ ತೆರಳಲು ಸಾಧ್ಯವಾಗುವುದಿಲ್ಲ.
ಆದರೆ ಈಗಾಗಲೇ ಉಮ್ರಾ ವೀಸಾ ಹೊಂದಿರುವ ಮುಸ್ಲಿಮರು ಹಜ್ ಯಾತ್ರೆ ಕೈಗೊಳ್ಳಬಹುದು. ವೀಸಾ ನಿಷೇಧಿಸಲ್ಪಟ್ಟಿರುವ ಭಾರತ ಸೇರಿದಂತೆ 14 ರಾಷ್ಟ್ರಗಳ ಮುಸ್ಲಿಮರು ಈಗಾಗಲೇ ಉಮ್ರಾ ವೀಸಾ ಹೊಂದಿದ್ದರೆ ಎಪ್ರಿಲ್ 13 ರ ಒಳಗೆ ಹಜ್ ಯಾತ್ರೆ ಕೈಗೊಳ್ಳಬಹುದು ಎಂದು ಸೌದಿ ಅರೇಬಿಯಾ ಹೇಳಿದೆ.
ಹಜ್ ಯಾತ್ರೆಗೆ ಪ್ರತಿ ದೇಶದಿಂದ ಇಂತಿಷ್ಟೇ ಮಂದಿ ಆಗಮಿಸಬೇಕು ಎನ್ನುವ ನಿಯಮ ಇದೆ. ಆಯಾ ದೇಶಗಳೇ ಅದನ್ನು ನೋಡಿಕೊಳ್ಳಬೇಕು. ಅವಕಾಶ ಸಿಗದವರು ಅಕ್ರಮವಾಗಿ ಪ್ರವೇಶಿಸುತ್ತಾರೆ. ಹೀಗೆ ಕೆಲವು ಗಂಭೀರ ಕಾರಣಗಳಿಗಾಗಿ 14 ದೇಶಗಳಿಗೆ ವೀಸಾ ನಿರಾಕರಿಸಲಾಗಿದೆ ಎಂದು ಸೌದಿ ಅರೇಬಿಯಾ ಹೇಳಿದೆ.
Leave A Reply