ಗ್ಯಾಸ್ ಸಿಲಿಂಡರ್ ಇನ್ನು 50 ರೂ ತುಟ್ಟಿ!

ಅಡುಗೆ ಅನಿಲದ ಸಿಲೆಂಡರ್ ಬೆಲೆ ಐವತ್ತು ರೂಪಾಯಿ ಏರಿಕೆ ಕಂಡಿದೆ. ಈ ವಿಷಯದ ಕುರಿತು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರದೀಪ್ ಸಿಂಗ್ ಪುರಿ ಮಾಹಿತಿ ನೀಡಿದರು. ಈ ಹೆಚ್ಚಳ ಎಪ್ರಿಲ್ 7ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದರು. ಇದು
ಉಜ್ವಲಾ ಮತ್ತು ಇತರ ಸಾಮಾನ್ಯ ಗ್ಯಾಸ್ ಸಂಪರ್ಕಕ್ಕೂ ಅನ್ವಯಿಸುತ್ತದೆ ಎಂದು ಅವರು ತಿಳಿಸಿದರು.
ಈ ದರ ಪರಿಷ್ಕರಣೆಯ ಬಗ್ಗೆ ತಿಳಿಸಿದ ಅವರು ಎರಡ್ಮೂರು ವಾರಗಳಿಗೊಮ್ಮೆ ನಡೆಯುವ ಪರಿಶೀಲನಾ ಸಭೆಯ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದರು.
14.2 ಕೆಜಿ ಎಲ್ ಪಿಜಿ ಸಿಲೆಂಡರ್ ಬೆಲೆ 803 ರೂಪಾಯಿಯಿಂದ 853 ರೂಪಾಯಿ ಆಗಲಿದೆ. ಇನ್ನು ಉಜ್ವಲ ಸೌಲಭ್ಯದಡಿ ಕನೆಕ್ಷನ್ ಪಡೆದುಕೊಂಡವರಿಗೆ 503 ರಿಂದ 553 ರೂ ಆಗಲಿದೆ. ಈ ನಡುವೆ ಎಪ್ರಿಲ್ 1 ರಿಂದ ಆಯಿಲ್ ಮಾರಾಟ ಕಂಪೆನಿಯವರು ವಾಣಿಜ್ಯ ಗ್ಯಾಸ್ ಸಿಲೆಂಡರ್ ದರವನ್ನು 41 ರೂಪಾಯಿಗಳಿಗೆ ಇಳಿಕೆ ಮಾಡಿದ್ದಾರೆ. ಇದರಿಂದ ದೆಹಲಿಯಲ್ಲಿ ವಾಣಿಜ್ಯ ಗ್ಯಾಸ್ ದರ ಸಿಲೆಂಡರ್ ಗೆ 1762 ಆಗಲಿದೆ. ಭಾರತ 60 ಶೇಕಡಾದಷ್ಟು ಗೃಹಬಳಕೆಯ ಎಲ್ ಪಿಜಿಯನ್ನು ಆಮದು ಮಾಡಿಕೊಳ್ಳುತ್ತಿದ್ದು, ಇದರ ದರ ಅಂತರಾಷ್ಟ್ರೀಯ ಮಟ್ಟದಲ್ಲಿ ಏರಿಳಿತ ಕಾಣುತ್ತಾ ಇರುತ್ತದೆ.
ಇನ್ನು ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ ಎಲ್ ಪಿಜಿ ಸಂಪರ್ಕ ಪಡೆದವರ ಸಂಖ್ಯೆ ಈಗ ಹತ್ತೂವರೆ ಕೋಟಿಯ ಗಡಿ ತಲುಪಿದೆ. ಇದರೊಂದಿಗೆ 32.94 ಗೃಹಬಳಕೆಯ ಎಲ್ ಪಿಜಿ ಸಿಲೆಂಡರ್ ಕನೆಕ್ಷನ್ ಚಾಲನೆಯಲ್ಲಿದೆ.
Leave A Reply