• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

3 ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರಕಾರ ನೀಡುವ 2500 ರೂ ಸಿಗಲ್ಲ!

Tulunadu News Posted On April 16, 2025
0


0
Shares
  • Share On Facebook
  • Tweet It

ಚುನಾವಣೆಯ ಮೊದಲು ಘೋಷಣೆಯಾಗಿದ್ದ ಯೋಜನೆಗೆ ದೆಹಲಿಯ ರಾಜ್ಯ ಸರಕಾರ ಈಗ ಸ್ಪಷ್ಟವಾದ ನಿಯಮಗಳನ್ನು ರೂಪಿಸಿದೆ. ಮಹಿಳಾ ಸಮೃದ್ಧಿ ಯೋಜನೆ ಈಗ ದೆಹಲಿಯಲ್ಲಿ ಕಳೆದ ಐದು ವರ್ಷಗಳಿಂದ ವಾಸಿಸುತ್ತಿರುವ ಮಹಿಳೆಗೆ ಮಾತ್ರ ಅನ್ವಯಿಸಲಿದೆ. ಇನ್ನು ಆ ಮಹಿಳೆಯ ಕುಟುಂಬದ ವಾರ್ಷಿಕ ವರಮಾನ ಮೂರು ಲಕ್ಷ ರೂಪಾಯಿಗಳಿಗಿಂತಲೂ ಕಡಿಮೆ ಇರಬೇಕಿದೆ. ಇನ್ನು ಒಂದು ಕುಟುಂಬದಲ್ಲಿ ಎಷ್ಟೇ ಹೆಂಗಸಿದ್ದರೂ ಅತ್ಯಂತ ಹಿರಿಯ ಹೆಂಗಸಿಗೆ ಮಾತ್ರ ಈ ಯೋಜನೆಯಿಂದ ತಿಂಗಳಿಗೆ 2500 ರೂಪಾಯಿ ಸಿಗಲಿದೆ. ಇನ್ನು ಆ ಕುಟುಂಬ ಬಿಪಿಎಲ್ ಆಗಿರಬೇಕು ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಇನ್ನು ರಾಜ್ಯ ಸರಕಾರದಿಂದ ಒಂದು ವೇಳೆ ಈ 2500 ರೂಪಾಯಿ ಸೌಲಭ್ಯ ಪಡೆಯುವ ಹೆಂಗಸರಿಗೆ ಮೂರಕ್ಕಿಂತ ಹೆಚ್ಚು ಮಕ್ಕಳು ಇದ್ದರೆ ಅಂತವರಿಗೆ ಈ ಹಣ ಸಿಗುವುದಿಲ್ಲ. ಇನ್ನು ಒಂದು ವೇಳೆ ಮೂರು ಮಕ್ಕಳು ಇದ್ದು ಲಸಿಕೆ ತೆಗೆದುಕೊಳ್ಳದೇ ಇದ್ದರೆ ಅವರು ಕೂಡ ಸೌಲಭ್ಯದಿಂದ ವಂಚಿತರಾಗಲಿದ್ದಾರೆ. ಇನ್ನು ವಿಶೇಷವಾಗಿ ಈ ಸೌಲಭ್ಯ ಬಿಪಿಎಲ್ ಕಾರ್ಡ್ ಹೊಂದಿರುವ 21 ರಿಂದ 60 ವರ್ಷದ ಒಳಗಿನ ಮಹಿಳೆಯರಿಗೆ ಆದ್ಯತೆಯಾಗಿ ನೀಡಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ ನೇತೃತ್ವದ ದೆಹಲಿ ಸಚಿವ ಸಂಪುಟದಲ್ಲಿ ತೀರ್ಮಾನವಾಗಿದೆ.

ಇನ್ನು ಒಂದು ಕುಟುಂಬದ ಅತ್ಯಂತ ಹಿರಿಯ ಮಹಿಳೆಗೆ ಈ ಸೌಲಭ್ಯ ನೀಡಲಾಗುವುದು ಎಂದು ಹೇಳಿದರೂ ಆ ಮಹಿಳೆ ಸರಕಾರದ ಬೇರೆ ಸೌಲಭ್ಯಗಳಾದ ವಿಧವಾ ವೇತನ ಅಥವಾ ವೃದ್ಧಾಪ್ಯ ವೇತನವನ್ನು ಪಡೆಯಬಾರದು. ಅಂತಹ ಯೋಜನೆಯ ಫಲಾನುಭವಿ ಆಗಿದ್ದಲ್ಲಿ ಈ ಹಣ ಸಿಗುವುದಿಲ್ಲ.
ಚುನಾವಣಾ ಪೂರ್ವದಲ್ಲಿ ಬಿಜೆಪಿಯಿಂದ ಮಹಿಳಾ ಸಮೃದ್ಧಿ ಯೋಜನೆ ಎನ್ನುವ ತಿಂಗಳಿಗೆ 2500 ರೂಪಾಯಿ ನೀಡುವ ಉಚಿತ ಯೋಜನೆಯನ್ನು ಘೋಷಿಸಲಾಗಿತ್ತು. ಈ ಹಣ ನೇರವಾಗಿ ಮಹಿಳೆಯರ ಖಾತೆಗೆ ಜಮೆ ಆಗುವ ಭರವಸೆ ಕೂಡ ಇತ್ತು. ಈಗ ಈ ಯೋಜನೆಯ ಶರ್ತಗಳನ್ನು ಸರಕಾರ ನೀಡಿದೆ. ಇದಕ್ಕಾಗಿ ದೆಹಲಿ ಸರಕಾರ 5100 ಕೋಟಿ ರೂಪಾಯಿ ಹಣವನ್ನು ಮೀಸಲಿಟ್ಟಿದ್ದು, ಇದು ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಅನುಕೂಲ ಕಲ್ಪಿಸಲಿದೆ ಎಂದು ಹೇಳಲಾಗಿದೆ. ಸರಕಾರದ ಪ್ರಕಾರ ಕನಿಷ್ಟ 20 – 25 ಲಕ್ಷ ಮಹಿಳೆಯರು ಈ ಯೋಜನೆಯ ಪ್ರಯೋಜನವನ್ನು ಪಡೆಯಲಿದ್ದಾರೆ.

0
Shares
  • Share On Facebook
  • Tweet It




Trending Now
ಕೆಂಪುಕಲ್ಲು ಓವರ್ ಲೋಡ್ ಸಾಗಾಟ! ಕೇಸ್ ದಾಖಲು
Tulunadu News August 13, 2025
ಮುಂದಿನ ಚುನಾವಣೆಯಲ್ಲಿಯೂ ನನ್ನ ಕೈ ಹಿಡಿಯಿರಿ: ವರುಣಾದಲ್ಲಿ ಸಿಎಂ ಮನವಿ!
Tulunadu News August 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕೆಂಪುಕಲ್ಲು ಓವರ್ ಲೋಡ್ ಸಾಗಾಟ! ಕೇಸ್ ದಾಖಲು
    • ಮುಂದಿನ ಚುನಾವಣೆಯಲ್ಲಿಯೂ ನನ್ನ ಕೈ ಹಿಡಿಯಿರಿ: ವರುಣಾದಲ್ಲಿ ಸಿಎಂ ಮನವಿ!
    • ಮಂಗಳೂರು: ಈಜುತ್ತಿರುವಾಗಲೇ ಹೃದಯಾಘಾತ: ಮೃತಪಟ್ಟ ಕೋಚ್!
    • ಅಗಸ್ಟ್ 16 ರಂದು ಧರ್ಮಸ್ಥಳ ಚಲೋ ಅಭಿಯಾನ - ಶಾಸಕ ವಿಶ್ವನಾಥ!
    • ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ:- ಶಾಸಕ ಕಾಮತ್
    • ಎದೆಹಾಲು ದಾನದಲ್ಲಿ ದಾಖಲೆ ಬರೆದ ತಮಿಳುನಾಡಿನ ಮಹಿಳೆ!
    • ಭಾರತದಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿದ ಕೇಂದ್ರ ಗೃಹ ಸಚಿವರಾಗಿ ಅಮಿತ್ ಶಾ ದಾಖಲೆ!
    • ಮಾಲೆಗಾಂ ಸ್ಫೋಟದಲ್ಲಿ ಯೋಗಿ, ಭಾಗವತ್ ಹೆಸರು ಹೇಳಲು ಒತ್ತಡ ಇತ್ತು ಎಂದ ನಿವೃತ್ತ ಮೇಜರ್!
    • "2 ರೂಪಾಯಿ ಡಾಕ್ಟರ್" ನಿಧನ.. ಜನಸಾಮಾನ್ಯರ ಕಂಬನಿ
    • ಬಂಧೀಖಾನೆ ಮುಖ್ಯಸ್ಥರಾಗಿ ದಯಾನಂದ ಮತ್ತೆ ಸೇವೆಯಲ್ಲಿ!
  • Popular Posts

    • 1
      ಕೆಂಪುಕಲ್ಲು ಓವರ್ ಲೋಡ್ ಸಾಗಾಟ! ಕೇಸ್ ದಾಖಲು
    • 2
      ಮುಂದಿನ ಚುನಾವಣೆಯಲ್ಲಿಯೂ ನನ್ನ ಕೈ ಹಿಡಿಯಿರಿ: ವರುಣಾದಲ್ಲಿ ಸಿಎಂ ಮನವಿ!
    • 3
      ಮಂಗಳೂರು: ಈಜುತ್ತಿರುವಾಗಲೇ ಹೃದಯಾಘಾತ: ಮೃತಪಟ್ಟ ಕೋಚ್!
    • 4
      ಅಗಸ್ಟ್ 16 ರಂದು ಧರ್ಮಸ್ಥಳ ಚಲೋ ಅಭಿಯಾನ - ಶಾಸಕ ವಿಶ್ವನಾಥ!

  • Privacy Policy
  • Contact
© Tulunadu Infomedia.

Press enter/return to begin your search