ಕಲಿಮಾ ಪಠಿಸಿ ಉಗ್ರರಿಂದ ಪಾರಾದ ಹಿಂದೂ ಪ್ರೋಫೆಸರ್ ದೇಬಶೀಶ್ ಭಟ್ಟಾಚಾರ್ಯ!

ಕಲಿಮಾ ಪಠಿಸುವಂತೆ ನಟಿಸುವ ಮೂಲಕ ಅಸ್ಸಾಂ ವಿಶ್ವವಿದ್ಯಾನಿಲಯದ ಅಸೋಸಿಯೇಟ್ ಪ್ರೋಫೆಸರ್ ದೇಬಶೀಶ್ ಭಟ್ಟಾಚಾರ್ಯ ಅವರು ಉಗ್ರರಿಂದ ತಮ್ಮ ಜೀವ ಉಳಿಸಿ ಪಾರಾಗಿದ್ದಾರೆ.
ಮಾಧ್ಯಮದ ಜೊತೆ ತಮ್ಮ ಅನುಭವ ಹಂಚಿಕೊಂಡಿರುವ ಅವರು ” ನಾನು ನನ್ನ ಕುಟುಂಬದೊಂದಿಗೆ ಮಲಗಿದ್ದಾಗ ಇದ್ದಕ್ಕಿದ್ದಂತೆ ನನ್ನ ಸುತ್ತಲೂ ಕೆಲವರು ಏನೋ ಪಠಿಸುತ್ತಿದ್ದರು. ಜನರು ಏನೋ ಪಠಿಸುತ್ತಿರುವುದನ್ನು ನೋಡಿ ನಾನು ಕೂಡ ಪಠಿಸಲು ಆರಂಭಿಸಿದೆ. ಈ ವೇಳೆ ನಮ್ಮ ಕಡೆಗೆ ನಡೆದುಕೊಂಡು ಬಂದ ಉಗ್ರ ನನ್ನ ಪಕ್ಕದಲ್ಲಿ ಮಲಗಿದ್ದ ವ್ಯಕ್ತಿಗೆ ಕಲಿಮಾ ಪಠಿಸಲು ಹೇಳಿದ. ಅವನು ಗೊತ್ತಿಲ್ಲ ಎಂದದ್ದಕ್ಕೆ ಅವನ ತಲೆಗೆ ಗುಂಡು ಹೊಡೆದ. ಉಗ್ರ ಹಾರಿಸಿದ ಬಳಿಕ ಉಗ್ರ ನನ್ನತ್ತ ತಿರುಗಿ ” ಕ್ಯಾ ಕರ್ ರಹೇ ಹೋ?” ಎಂದ. ನಾನು ಜೋರಾಗಿ ಕಲಿಮಾವನ್ನು ಪಠಿಸುತ್ತಾ ಹೋದೆ. ಏನೋ ಕಾರಣಕ್ಕೆ ನನ್ನನ್ನು ನೋಡಿ ಆತ ದೂರ ನಡೆದುಕೊಂಡು ಹೋದ.
ಉಗ್ರ ಬೇರೆ ಕಡೆ ಹೋಗುತ್ತಿದ್ದಂತೆ ನಾನು ನನ್ನ ಪತ್ನಿ ಮಗನೊಂದಿಗೆ ವಿರುದ್ಧ ದಿಕ್ಕಿಗೆ ಓಡಿ ಹೋದೆವು. ಬೆಟ್ಟ ಹತ್ತಿ ಬೇಲಿ ದಾಟಿ ಓಡುತ್ತಾ ಹೋದೆವು. ಕುದುರೆಗಳ ಗೊರಸುಗಳ ಆಧಾರದಲ್ಲಿ ದಾರಿ ಹುಡುಕುತ್ತಾ ಸುಮಾರು ಎರಡು ಗಂಟೆ ಓಡಿದ ನಂತರ ಕುದುರೆಯೊಂದಿಗೆ ಸವಾರನೊಬ್ಬನನ್ನು ನೋಡಿದೆವು. ಆತನ ಸಹಕಾರದಿಂದ ಕೊನೆಗೂ ನಮ್ಮ ಹೋಟೇಲ್ ತಲುಪಿಕೊಂಡೆವು. ಪ್ರಾಣ ಉಳಿದಿದೆ ಎನ್ನುವುದನ್ನು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ. ನಾವು ಮುಸ್ಲಿಂ ಬಾಹುಲ್ಯದ ಪ್ರದೇಶದಲ್ಲಿ ಬಾಲ್ಯದಿಂದಲೂ ಬೆಳೆದು ಬಂದಿದ್ದ ಕಾರಣ ನಮಗೆ ಕಲಿಮಾದ ಜ್ಞಾನ ಇತ್ತು ಎಂದು ಪ್ರೊಫೆಸರ್ ಹೇಳಿದ್ದಾರೆ.
ಅದೇ ಪ್ರದೇಶದಲ್ಲಿ ಗುಂಡಿನ ದಾಳಿ ಆದಾಗ ಪ್ರಾಣ ಉಳಿಸಿಕೊಳ್ಳಲು ಒಂದು ಕುಟುಂಬ ಟೆಂಟ್ ಒಳಗೆ ಅಡಗಿ ಕುಳಿತಿತ್ತು. ಅಲ್ಲಿಗೆ ಬಂದ ಉಗ್ರ ಟೆಂಟ್ ಒಳಗಿನಿಂದ ಗಂಡಸರು ಹೊರಗೆ ಬನ್ನಿ ಅಂದಿದ್ದಾನೆ. ಹೊರಗೆ ಬಂದ ಗಂಡಸಿಗೆ ಕಲಿಮಾ ಹೇಳುವಂತೆ ಸೂಚಿಸಿದ್ದಾನೆ. ಅವನು ಗೊತ್ತಿಲ್ಲ ಎಂದಿದ್ದಕ್ಕೆ ಕೂಡಲೇ ಕಿವಿ, ತಲೆ, ಬೆನ್ನಿಗೆ ಮೂರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.
ಕಲಿಮಾ ಅಂದರೆ ಅದು ಇಸ್ಲಾಮಿಕ್ ಘೋಷಣೆ. ಇಸ್ಲಾಂ ನಂಬಿಕೆಯ ಐದು ಸ್ತಂಭಗಳಲ್ಲಿ ಒಂದೆಂದು ನಂಬುತ್ತಾರೆ. ಇದನ್ನು ಪ್ರಾಮಾಣಿಕವಾಗಿ ಪಠಿಸಿದವರು ಮುಸ್ಲಿಂ ಅನುಯಾಯಿಗಳಾಗುತ್ತಾರೆ. ಅವರು ಇಸ್ಲಾಂ ಮತದ ಮಡಿಲಿಗೆ ಬರುತ್ತಾರೆ ಎನ್ನುವುದು ನಂಬಿಕೆ. ಆದ್ದರಿಂದಲೇ ಪ್ರವಾಸಿಗರಿಗೆ ಗುಂಡು ಹಾರಿಸುವುದಕ್ಕೂ ಮುನ್ನ ಕಲಿಮಾ ಪಠಿಸುವಂತೆ ಉಗ್ರರು ಒತ್ತಾಯಿಸಿದ್ದಾರೆ.
Leave A Reply