ಇಡೀ ಜಗತ್ತಿನಲ್ಲಿ ವೈರಲ್ ಆಗಿರುವ ಈ ಫೋಟೋ ಯಾರದ್ದೂ ಗೊತ್ತಾ! ಸಂಪೂರ್ಣ ಮಾಹಿತಿ ಇಲ್ಲಿದೆ..

ಈ ಫೋಟೋ ಭಾರತ ಸೇರಿದಂತೆ ಜಗತ್ತಿನ ಎಲ್ಲೆಡೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಈ ಫೋಟೋ ಯಾರದ್ದು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. ಅವರಿಗೆ ಇದೇ ಎಪ್ರಿಲ್ 16 ರಂದು ಮದುವೆಯಾಗಿತ್ತು. ಅದ್ದೂರಿಯಾಗಿ ವಿವಾಹ ಸಂಭ್ರಮ ಆಚರಿಸಲಾಗಿತ್ತು. ಒಟ್ಟು ಹತ್ತು ದಿನಗಳ ಕಾರ್ಯಕ್ರಮದಲ್ಲಿ ಬಂಧು, ಮಿತ್ರರು, ಹಿತೈಷಿಗಳು ಸೇರಿದ್ದರು. ನೌಕಾಧಿಕಾರಿ ವಿನಯ್ ನಾರ್ವಾಲ್ ಪತ್ನಿಯೊಂದಿಗೆ ಸಂತಸದಿಂದ ಸಪ್ತಪದಿ ತುಳಿದಿದ್ದರು. ಮದುವೆಯ ಬಳಿಕ ಮಧುಚಂದ್ರಕ್ಕಾಗಿ ನವಜೋಡಿ ಸ್ವಿಝರ್ ಲ್ಯಾಂಡಿಗೆ ಹೋಗುವ ಯೋಜನೆ ಹಾಕಿಕೊಂಡಿದ್ದರು.
ಆದರೆ ನೌಕಾದಳದಲ್ಲಿ ಲೆಫ್ಟಿನೆಂಟ್ ಆಗಿದ್ದ ಕಾರಣ ವಿನಯ್ ಗೆ ಅನೇಕ ದಿನ ರಜೆ ಮಂಜೂರಾಗಿರಲಿಲ್ಲ. ಆದ್ದರಿಂದ ಕಡಿಮೆ ರಜೆಯಲ್ಲಿ ಕಾಶ್ಮೀರಕ್ಕೆ ಹೋಗಿ ಬರುವ ಪ್ಲಾನ್ ಹಾಕಿಕೊಂಡ ಗಂಡ, ಹೆಂಡ್ತಿ ಕಾಶ್ಮೀರಕ್ಕೆ ಬಂದಿದ್ದರು.
ಆರಂಭದಲ್ಲಿ ವಿನಯ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿ ಪದವಿ ಪಡೆದಿದ್ದರು. ಅವರಿಗೆ ಆರಂಭದಿಂದಲೇ ದೇಶಸೇವೆಯ ಕಿಚ್ಚು ತುಂಬಾ ಇತ್ತು. ಆದ್ದರಿಂದ ಸೇನೆಯಲ್ಲಿ ಸೇವೆ ಸಲ್ಲಿಸಬೇಕು ಎನ್ನುವ ಉತ್ಕಷ್ಟ ಆಸೆ ಹೊಂದಿದ್ದರು. ಅದರಂತೆ ಪ್ರಯತ್ನ ಮಾಡಿ, ಪರೀಕ್ಷೆ ಬರೆದು, ತರಬೇತಿ ಪಡೆದು ನೌಕೆಯಲ್ಲಿ ಲೆಫ್ಟಿನೆಂಟ್ ಸ್ಥಾನಕ್ಕೆ ಏರಿದ್ದರು. ಅದರಂತೆ ನೌಕಾದಳದಲ್ಲಿ ಕ್ಲಾಸ್ ಒನ್ ಆಫೀಸರ್ ಆಗಿ ಹೊರಹೊಮ್ಮಿದ್ದರು.
ಮಧುಚಂದ್ರದ ಖುಷಿಯಲ್ಲಿದ್ದ ಗಂಡ ವಿನಯ್ ಹೆಂಡ್ತಿ ಹೀಮಾಂಶಿ ನಾರ್ವಾಲ್ ಅವರಿಗೆ ಪಹಲ್ಗಾಂನಲ್ಲಿ ತಾವು ಕೊನೆಯ ಸೂರ್ಯೋದಯ ನೋಡುತ್ತವೆ ಎಂದು ಗೊತ್ತೇ ಇರಲಿಲ್ಲ. ವಿನಯ ಅವರಿಗೆ ಈಗಷ್ಟೇ 26 ವರ್ಷ ವಯಸ್ಸು. ಅವರ ಮೂಲ ರಾಜ್ಯ ಹರ್ಯಾಣ. ಎಪ್ರಿಲ್ 16 ಕ್ಕೆ ಮದುವೆಯಾಗಿ ಮೂರು ದಿನ ಬಿಟ್ಟು ರಿಸೆಪ್ಶನ್ ನಡೆದು ಅವರು ಸೋಮವಾರ ಕಾಶ್ಮೀರಕ್ಕೆ ಬಂದಿದ್ದರು.
ಅವರು ಪೆಹಲ್ಗಾಂನ ರಮಣೀಯ ತಾಣದಲ್ಲಿ ತಿರುಗಾಡುತ್ತಾ, ಅಲ್ಲಿಯೇ ವಿನಯ್ ಒಂದು ಬೇಲ್ ಪುರಿ ಖರೀದಿಸಿ ತಿನ್ನುತ್ತಾ ನಿಂತಿದ್ದರು. ಆಗ ಅವರ ತಲೆಗೆ ಗುಂಡು ಹಾರಿಸಿ ಕೊಂದು ಬಿಡಲಾಗಿದೆ. ಆಗ ಅಲ್ಲಿಗೆ ಬಂದ ಸ್ಥಳೀಯರಿಗೆ ವಿಡಿಯೋದಲ್ಲಿ ಈ ಘಟನೆಯನ್ನು ಹೀಮಾಂಶಿ ವಿವರಿಸಿದ್ದು ಕೂಡ ವೈರಲ್ ಆಗಿದೆ.
ಬುಧವಾರ ಲೆಫ್ಟಿನೆಂಟ್ ನಾರ್ವಾಲ್ ಪಾರ್ಥಿವ ಶರೀರ ದೆಹಲಿಗೆ ತಂದಾಗ ಅವರ ಪಾರ್ಥಿವ ದೇಹ ಇಟ್ಟ ಪೆಟ್ಟಿಗೆಯನ್ನು ಅಪ್ಪಿ ” ವಿನಯ್ ಅವರ ಆತ್ಮಕ್ಕೆ ಸದ್ಗತಿ ಕೋರೋಣ. ಅದರೊಂದಿಗೆ ಹೆಮ್ಮೆ ಬರುವಂತಹ ಕೆಲಸ ಮಾಡೋಣ” ಎಂದು ದು:ಖತಪ್ತರಾಗಿ ಹೀಮಾಂಶಿ ಹೇಳುತ್ತಿದ್ದದ್ದು ಎಲ್ಲರ ಕಣ್ಣಾಲಿಗೆ ಒದ್ದೆ ಮಾಡಿದ್ದವು.
Leave A Reply