ಪಾಕ್ ಸೇನಾ ಮುಖ್ಯಸ್ಥ ನಾಪತ್ತೆ! 5000 ಸೈನಿಕರಿಂದ ರಾಜೀನಾಮೆ…

ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಭೀಕರ ಉಗ್ರದಾಳಿಯ ಹಿಂದೆ ಪಾಕಿಸ್ತಾನ ಪ್ರಾಯೋಜಿತ ಉಗ್ರರ ಕೈವಾಡವಿರುವುದು ಖಚಿತವಾಗುತ್ತಿದ್ದಂತೆ ಇದಕ್ಕೆ ಭಾರತ ಸೂಕ್ತ ರೀತಿಯಲ್ಲಿ ಉತ್ತರ ನೀಡಲಿದೆ ಎಂದು ಗ್ಯಾರಂಟಿಯಾಗುತ್ತಿದ್ದಂತೆ ಪಾಕ್ ಸೇನಾ ಮುಖ್ಯಸ್ಥ ಅಸೀಂ ಮುನೀರ್ ಕಾಣೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಒಂದು ಕಡೆ ಪಹಲ್ಗಾಮ್ ದಾಳಿಯ ಬಳಿಕ ಭಾರತ ಯುದ್ಧಕ್ಕೆ ಸನ್ನದ್ಧವಾಗುತ್ತಿದ್ದರೆ ಅತ್ತ ಪಾಕಿಸ್ತಾನದಲ್ಲಿ ತಮ್ಮ ಸೇನಾ ಮುಖ್ಯಸ್ಥನ ವಿರುದ್ಧ ಅಲ್ಲಿನ ಜನ ಆಕ್ರೋಶಿತಗೊಂಡಿದ್ದಾರೆ. ರಾಜೀನಾಮೆ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಏತನ್ಯಧ್ಯೆ ಅಸೀಂ ಮುನೀರ್ ತನ್ನ ಕುಟುಂಬದವರನ್ನು ಬೇರೆ ರಾಷ್ಟ್ರಕ್ಕೆ ಕಳುಹಿಸಿಕೊಟ್ಟಿದ್ದು, ತಾನು ರಾವಲ್ಪಿಂಡಿಯ ಬಂಕರ್ ನಲ್ಲಿ ಅಡಗಿಕುಳಿತುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಮುನೀರ್ ನ ಭಾಷಣದಿಂದ ಉಗ್ರರು ಪ್ರೇರೆಪಿತರಾಗಿದ್ದರು ಎನ್ನುವ ಮಾತುಗಳು ಕೇಳಿಬರುತ್ತಿದೆ. ಭಾಷಣದಲ್ಲಿ ಮುನೀರ್ ” ಕಾಶ್ಮೀರ ನಮ್ಮ ಕಂಠನಾಳವಿದ್ದಂತೆ. ಅದನ್ನು ನಾವು ಮರೆಯುವುದಿಲ್ಲ. ನಾವು ಹಿಂದೂಗಳಿಗಿಂತ ಎಲ್ಲಾ ವಿಧದಲ್ಲಿಯೂ ಭಿನ್ನರು. ಆದ್ದರಿಂದಲೇ ದೇಶ ವಿಭಜನೆಯಾಗಿದ್ದು” ಎಂದು ಹೇಳಿದ್ದ.
ಈ ನಡುವೆ ಪಾಕಿಸ್ತಾನದ ಐದು ಸಾವಿರ ಸೈನಿಕರು ಎರಡು ದಿನಗಳ ಅಂತರದಲ್ಲಿ ರಾಜೀನಾಮೆ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ. ಇದು ಪಾಕಿಸ್ತಾನ ಸೇನೆಗೆ ತಲೆನೋವಿನ ಸಂಗತಿಯಾಗಿದೆ. ಸಡನ್ನಾಗಿ ಈ ಪ್ರಮಾಣದಲ್ಲಿ ರಾಜೀನಾಮೆ ಪರ್ವಕ್ಕೆ ಕಾರಣ ಪೆಹಲ್ಗಾಮ್ ನಲ್ಲಿ ಪಾಕ್ ಉಗ್ರರು ಮಾಡಿದ ದಾಳಿಯೇ ಕಾರಣ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನದ ಮೇಲೆ ಭಾರತ ಯಾವುದೇ ರೀತಿಯ ದಾಳಿಯನ್ನು ಮಾಡುವ ಸಾಧ್ಯತೆ ನಿಚ್ಚಳವಾಗಿರುವುದರಿಂದ ಪಾಕ್ ಸೈನಿಕರ ಕುಟುಂಬದವರು ಸೇನೆಯಲ್ಲಿರುವ ತಮ್ಮ ಕುಟುಂಬದ ಸದಸ್ಯರಿಗೆ ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಮನೆಯವರ ಒತ್ತಾಯಕ್ಕೆ ಕಟ್ಟು ಬಿದ್ದು, ಪತ್ನಿಯರ ಪ್ರೀತಿಗೆ ಮನವಿಗೆ ಓಗೊಟ್ಟು ಪಾಕ್ ಸೈನಿಕರು ರಾಜೀನಾಮೆ ನೀಡುವ ಪರಿಸ್ಥಿತಿ ತಂದುಕೊಂಡಿದ್ದಾರೆ. ವರದಿಗಳ ಪ್ರಕಾರ ಪಾಕ್ ಸೈನಿಕರಲ್ಲಿ ಅನೇಕರು ಯುದ್ಧಭೂಮಿಯಲ್ಲಿ ಸೇವೆ ಸಲ್ಲಿಸುವುದರಿಂದ ವಿನಾಯಿತಿ ಕೋರುತ್ತಿದ್ದಾರೆ. ಇನ್ನು ಕೆಲವರು ಈಗಾಗಲೇ ಸೈನಿಕ ಕ್ಯಾಂಪಿನಿಂದ ತಮ್ಮ ಮನೆಗಳಿಗೆ ಹಿಂತಿರುಗುತ್ತಿದ್ದಾರೆ.
ಪಾಕಿಸ್ತಾನ ಸೈನಿಕ ಪಡೆಯ ಉನ್ನತ ಸ್ಥಾನದಲ್ಲಿ ಇರುವವರು ಲೆಫ್ಟಿನೆಂಟ್ ಜನರಲ್ ಉಮರ್ ಬುಖಾರಿ ಸಹಿತ ಕಮಾಂಡರ್ ಗಳು ರಾಜೀನಾಮೆ ನೀಡಿದ್ದರಿಂದ ಕೆಳಮಟ್ಟದ ಸೈನಿಕರ ಜಂಘಾಬಲ ಹುದುಗಿದ್ದು, ಒಂದು ವೇಳೆ ಯುದ್ಧ ನಡೆದರೆ ಪಾಕಿಸ್ತಾನ ಸಮರ್ಥ ಉತ್ತರ ಕೊಡಲು ಅಸಾಧ್ಯ ಎನ್ನುವ ಅಭಿಪ್ರಾಯ ಮೂಡಿದೆ. ಮಾಹಿತಿಯ ಪ್ರಕಾರ ಪಾಕಿಸ್ತಾನದ ಪಶ್ಚಿಮ ಗಡಿ ಭಾಗದ 12 ನೇ ತುಕಡಿಯಲ್ಲಿ 200 ಅಧಿಕಾರಿಗಳು ಹಾಗೂ 600 ಸೈನಿಕರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಉತ್ತರ ಸೇನಾ ಘಟಕದಲ್ಲಿ 100 ಅಧಿಕಾರಿಗಳು ಹಾಗೂ 500 ಸೈನಿಕರು ಕೇಂದ್ರ ಸ್ಥಾನ ಬಿಟ್ಟು ತೆರಳಿದ್ದಾರೆ ಎನ್ನಲಾಗುತ್ತಿದೆ. ಇನ್ನು ಗಡಿ ನಿಯಂತ್ರಣ ರೇಖೆಯಲ್ಲಿರುವ ಮಂಗಲ್ ಪಡೆಯ 75 ಅಧಿಕಾರಿಗಳು ಮತ್ತು 500 ಸೈನಿಕರು ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ.
Leave A Reply