ಕಣ್ಣೇದುರೇ ಶೂಟೌಟ್, ಜಿಪ್ ಲೈನ್ ಆಪರೇಟರ್ “ಅಲ್ಲಾಹು ಅಕ್ಬರ್”! ತನಿಖೆ ಶುರು..

ಪೆಹಲ್ಗಾಂನಲ್ಲಿ ಉಗ್ರಗಾಮಿಗಳು ಅಮಾಯಕ ಹಿಂದೂ ಪ್ರವಾಸಿಗರನ್ನೇ ಗುರಿಯಾಗಿಟ್ಟು ಗುಂಡಿನ ದಾಳಿ ಮಾಡಿದಾಗ ಒಬ್ಬ ಪ್ರವಾಸಿ ಜಿಪ್ ಲೈನ್ ( ರೋಪ್ ವೇ) ನಲ್ಲಿ ನೇತಾಡಲು ಸಜ್ಜಾಗಿದ್ದ. ಅವರ ಹೆಸರು ರಿಶಿ ಭಟ್. ಅವರು ಇನ್ನೇನೂ ಅಲ್ಲಿಂದ ಮೂವ್ ಆಗಬೇಕು ಎನ್ನುವ ಕೆಲವೇ ಸೆಕೆಂಡ್ ಗಳ ಮೊದಲು ಅಲ್ಲಿದ್ದ ಜಿಪ್ ಲೈನ್ ಆಪರೇಟರ್ ಅಲ್ಲಾಹು ಅಕ್ಬರ್ ಎನ್ನುವ ಶಬ್ದಗಳನ್ನು ಉಚ್ಚರಿಸಿದ್ದಾನೆ. ಅವನು ಹಾಗೆ ಹೇಳುವಾಗ ಕೆಳಗೆ ನೋಡುತ್ತಿದ್ದ. ಆಗ ಗುಂಡಿನ ಶಬ್ದಗಳು ಕೇಳಿಸಿವೆ. ಅದನ್ನು ನೋಡಿಯೇ ಅವನು ಹಾಗೆ ಪಠಿಸುತ್ತಾ ಈ ರಿಶಿ ಭಟ್ ಎನ್ನುವ ಪ್ರವಾಸಿಯನ್ನು ಕೆಳಗೆ ಕಳುಹಿಸಲು ಸಜ್ಜಾಗಿದ್ದಾನೆ.
ಇದರ ಅರ್ಥ ಏನು?
ಈ ಪ್ರವಾಸಿ ಕೂಡ ಸಾಯಲಿ ಎನ್ನುವ ಕಾರಣಕ್ಕಾ? ಒಂದು ವೇಳೆ ಅಲ್ಲಿ ಜಿಪ್ ಲೈನ್ ಆಪರೇಟರ್ ಗೆ ಭಯೋತ್ಪಾದಕರು ಕಾಣಿಸದೇ ಇದ್ದಲ್ಲಿ ಆ ವಿಷಯ ಬೇರೆ. ಆದರೆ ಇಲ್ಲಿ ಬಹಳ ಸ್ಪಷ್ಟವಾಗಿ ಮರದ ಮೇಲೆ ನಿಂತಿರುವ ಆಪರೇಟರ್ ಗೂ ಆತನ ಹಿಂದೆ ನಿಂತಿರುವ ಇನ್ನೊಬ್ಬ ವ್ಯಕ್ತಿಗೂ ಎಲ್ಲವೂ ಬಹಳ ನಿಖರವಾಗಿ ಕಾಣಿಸುತ್ತಿತ್ತು. ಅದರ ನಂತರವೇ ಈ ಪ್ರವಾಸಿಗನನ್ನು ಕೆಳಗೆ ಬಿಡಲಾಗಿದೆ. ಇಲ್ಲಿ ಆ ಸ್ಥಳೀಯ ಆಪರೇಟರ್ ಮತ್ತು ಅವನ ಜೊತೆಗಿದ್ದ ವ್ಯಕ್ತಿಗೆ ಈ ಗುಂಡಿನ ಮೊರೆತ ಕೇಳಿಸುತ್ತಿತ್ತು. ಇದರಿಂದ ಆ ಉಗ್ರರಿಗೆ ಇವರೇ ಸುಳಿವು ಕೊಟ್ಟು ರೈಟ್ ಟೈಮ್ ಬಗ್ಗೆ ಹಿಂಟ್ ಕೊಟ್ಟರಾ ಎನ್ನುವ ಬಗ್ಗೆ ಈಗ ತನಿಖೆ ನಡೆಯುತ್ತಿದೆ. ರಾಷ್ಟ್ರೀಯ ತನಿಖಾ ದಳದವರು ಜಿಪ್ ಲೈನ್ ಆಪರೇಟರನನ್ನು ತೀವ್ರವಾಗಿ ವಿಚಾರಿಸುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪಿಡಿಪಿ ವಕ್ತಾರ ಮೊಹಮ್ಮದ್ ಇಕ್ಬಾಲ್ ಟ್ರಬೊ ” ನಮ್ಮ ಆಚಾರ, ವಿಚಾರದ ಬಗ್ಗೆ ಕೆಲವರಿಗೆ ಗೊತ್ತಿಲ್ಲ. ನಾವು ಯಾವಾಗಲೂ ಏನಾದರೂ ದುರ್ಘಟನೆಯನ್ನು ನೋಡಿದರೆ ಆಗ ಕಾಶ್ಮೀರಿಗಳ ಬಾಯಿಯಿಂದ ಅಲ್ಲಾಹು ಅಕ್ಬರ್ ಎನ್ನುವ ಮಾತು ಹೊರಗೆ ಬರುತ್ತದೆ. ಅಂತಹ ಭಯಾನಕ ಘಟನೆಗಳು ಆದಾಗ ನಾವು ಅಲ್ಲಾಹನನ್ನು ಸ್ಮರಿಸುತ್ತೇವೆ. ಈಗ ಅವನನ್ನು ವಿಚಾರಣೆಗೆ ಕರೆದಿರುವುದು ನಮ್ಮ ಪೊಲೀಸ್ ಇಲಾಖೆ ಹಾಗೂ ರಕ್ಷಣಾ ಪಡೆಗಳು ತಮ್ಮ ಲೋಪವನ್ನು ಮುಚ್ಚಿಡಲು ಮಾತ್ರ. ಭಯೋತ್ಪಾದಕ ಕೃತ್ಯಗಳಿಗೂ, ಪಾಕಿಸ್ತಾನದ ಜನಸಾಮಾನ್ಯರಿಗೂ ಯಾವುದೇ ಸಂಬಂಧವಿಲ್ಲ. ಏನೇ ಘಟನೆಗಳಿಗೆ ನಾವು ಅಲ್ಲಾಹು ಅಕ್ಬರ್ ಎಂದು ಹೇಳುವ ಮೂಲಕ ನಮ್ಮ ಪ್ರತಿಕ್ರಿಯೆಯನ್ನು ನೀಡುವುದು ಸರ್ವೇ ಸಾಮಾನ್ಯ” ಎಂದು ಹೇಳಿದ್ದಾರೆ.
ಇಡೀ ಘಟನೆ ಜಿಪ್ ಲೈನ್ ನಲ್ಲಿ ತೂಗುತ್ತಿದ್ದ ರಿಶಿ ಭಟ್ ಮೊಬೈಲಿನಲ್ಲಿ ದಾಖಲಾಗಿದೆ. ರಿಶಿ ಭಟ್ ಅದೃಷ್ಟ ಚೆನ್ನಾಗಿತ್ತು. ಅವನು ಗುಂಡಿನ ದಾಳಿಯಿಂದ ಪಾರಾಗಿದ್ದಾನೆ. ಅವನ ಮಾತಿನ ಪ್ರಕಾರ ಇವನು ಎಲ್ಲಿ ಲ್ಯಾಂಡ್ ಆಗಬೇಕಿತ್ತೋ ಅಲ್ಲಿ ಉಗ್ರರು ಇದ್ದರು. ಅದಕ್ಕಾಗಿ ನಿಗದಿತ ಸ್ಥಳಕ್ಕಿಂತ ಮೊದಲೇ ಇವನು ಕೆಳಗೆ ಹಾರಿದ್ದಾನೆ. ಅಲ್ಲಿ ಹೆಂಡತಿ ಮತ್ತು ಮಗನೊಂದಿಗೆ ಸ್ಥಳದಿಂದ ಪಾರಾಗಿದ್ದಾನೆ.
Leave A Reply