ಕುಡ್ಲದ ಯುವಕನ ಸಿನೆಮಾಗೆ ಯಶ್ ತಾಯಿ ನಿರ್ಮಾಪಕಿ!

ರಾಕಿಂಗ್ ಸ್ಟಾರ್ ಯಶ್ ಕುಟುಂಬದಿಂದ ಇನ್ನೊಬ್ಬರು ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಯಶ್ ಪತ್ನಿ ರಾಧಿಕಾ ಪಂಡಿತ್ ಖ್ಯಾತ ನಟಿ ಎನ್ನುವುದು ಎಲ್ಲರಿಗೂ ಗೊತ್ತು. ಈಗ ಯಶ್ ತಾಯಿ ಸಿನೆಮಾ ರಂಗಕ್ಕೆ ಪ್ರವೇಶಿಸುವ ಮೂಲಕ ಚಿತ್ರರಂಗಕ್ಕೆ ಕೊಡುಗೆಯನ್ನು ನೀಡಲು ಬಯಸಿದ್ದಾರೆ. ಅವರು ಸಿನೆಮಾ ನಿರ್ಮಾಣವನ್ನು ಆರಂಭಿಸಿದ್ದು ತಮ್ಮ ಮೊದಲ ಸಿನೆಮಾಕ್ಕೆ ಕುಡ್ಲ ಅಂದರೆ ಗಡಿನಾಡ ಯುವಕ ಪೃರ್ಥಿ ಅಂಬರ್ ನಾಯಕನಾಗಿದ್ದಾರೆ. ಈ ಮೂಲಕ ಪೃರ್ಥಿ ಅಂಬರ್ ಅವರಂತಹ ಪ್ರತಿಭೆಯನ್ನು ಹೊಸ ನಿರ್ಮಾಪಕರನ್ನು ಗುರುತಿಸಿದಂತೆ ಆಗಿದೆ.
ಈಗಾಗಲೇ ಚಿತ್ರಿಕರಣ ಸಂಪೂರ್ಣ ಮುಗಿದಿದ್ದು ಬಿಡುಗಡೆಗೆ ರೆಡಿ ಇದೆ. ಹಳ್ಳಿಯ ಕಥೆಯಾದರೂ ಈಗಿನ ತಲೆಮಾರಿಗೆ ಸಿನೆಮಾ ಮನಸ್ಸಿಗೆ ಹತ್ತಿರವಾಗುತ್ತದೆ ಎಂದು ಹೇಳಿದ ಪುಷ್ಪಾ ಅರುಣ್ ಕುಮಾರ್ ಪೃರ್ಥಿ ಅಂಬರ್ ತುಂಬಾ ಒಳ್ಳೆಯ ನಟ, ಆ ಹುಡುಗ ಗೆಲ್ಲಬೇಕು ಎಂದು ಶುಭ ಹಾರೈಸಿದ್ದಾರೆ.
ಅಷ್ಟಕ್ಕೂ ಈ ಸಿನೆಮಾದ ಕಥೆಯನ್ನಾಗಲಿ, ತಂಡದ ಕುರಿತಾಗಲಿ ಏನನ್ನು ಪುಷ್ಪಾ ಅವರು ತಮ್ಮ ಮಗ ಯಶ್ ಗೆ ಹೇಳಿಲ್ಲವಂತೆ. ಇದು ನನ್ನ ವೈಯಕ್ತಿಕ ಆಸೆ, ಕನಸಾಗಿರುವುದರಿಂದ ನಾನು ಹಾಗೂ ನನ್ನ ಪತಿ ಅರುಣ್ ಕುಮಾರ್ ಅವರು ಸೇರಿ ಮಾಡಿದ ಯೋಜನೆ ಇದಾಗಿರುವುದರಿಂದ ಹೆಸರು ಕೂಡ ಪಿಎ ಎಂದೇ ಇಟ್ಟಿದ್ದೇವೆ. ಪಿಎ ಅಂದರೆ ಪುಷ್ಪಾ ಅರುಣ್ ಕುಮಾರ್ ಅಂತ. ಡ್ರೈವರ್ ಮಗ ಹೀರೋ ಆಗಿ ಗೆದ್ದಿದ್ದಾನೆ ಎಂದ ಮೇಲೆ ಡ್ರೈವರ್ ಹೆಂಡ್ತಿಯೂ ನಿರ್ಮಾಪಕಿಯಾಗಿ ಗೆಲ್ಲುತ್ತಾರೆಂಬ ನಂಬಿಕೆ ಇದೆ ಎನ್ನುವ ವಿಶ್ವಾಸದಲ್ಲಿ ಇರುವ ಪುಷ್ಪಾ ಅವರು ದುಡ್ಡು ಮಾಡಕ್ಕೆ ಅಂತ ಬಂದಿಲ್ಲ, ಹೀಗಾಗಿ ಕಷ್ಟ, ನಷ್ಟದ ಬಗ್ಗೆ ಯೋಚನೆ ಮಾಡಿಲ್ಲ ಎಂದು ಹೇಳಿದ್ದಾರೆ.
ಸಿನೆಮಾಕ್ಕೆ ಕಾವ್ಯಾ ಶೈವ ನಾಯಕಿ, ಶ್ರೀರಾಜ್ ನಿರ್ದೇಶನವಿದೆ. ಕಾರ್ತಿಕ್ ಛಾಯಾಗ್ರಹಣ ಮಾಡಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗ ನಟಿಸಿದ್ದಾರೆ. ಯಶ್ ನಾಯಕತ್ವದ ಸಿನೆಮಾ ಮಾಡುವ ಯೋಚನೆ ಅವರಿಗೆ ಸದ್ಯ ಇಲ್ಲವಂತೆ. ಯಶ್ ಗಾಗಿ ಸಿನೆಮಾ ಮಾಡುವಷ್ಟು ತುಂಬಾ ದುಡ್ಡಿರೋ ನಿರ್ಮಾಪಕಿ ತಾನು ಅಲ್ಲ ಎಂದು ಪುಷ್ಪಾ ಅರುಣ್ ಕುಮಾರ್ ಹೇಳಿದ್ದಾರೆ.
ದುಡ್ಡಿರೋವಿಗೆ, ಗೆದ್ದಿರೋ ಜನರ ಜೊತೆ ಸಿನೆಮಾ ಮಾಡುವುದಕ್ಕಿಂತ ಹೊಸಬರ ಜೊತೆ ಸಿನೆಮಾ ಮಾಡಿ ಅವರನ್ನು ಬೆಳೆಸಬೇಕು, ಅವರಿಗೆ ವೇದಿಕೆ ಕಲ್ಪಿಸಬೇಕು ಎನ್ನುವುದು ನಮ್ಮ ಸಂಸ್ಥೆಯ ಗುರಿ ಎಂದು ಅವರು ತಿಳಿಸಿದ್ದಾರೆ.
Leave A Reply