ಭಾರತದಿಂದ ಪಾಕಿಸ್ತಾನಕ್ಕೆ ಮೆಡಿಸಿನ್ ಬಂದ್! ಜೀವನಾವಶ್ಯಕ ಔಷಧಗಳಿಗೆ ಪರದಾಟ!

ಕಾಶ್ಮೀರದ ಪಹಲ್ಗಾಮ್ ನಲ್ಲಿ 26 ನಾಗರಿಕರ ಹತ್ಯೆಯ ಬಳಿಕ ಪಾಕಿಸ್ತಾನಕ್ಕೆ ವಿವಿಧ ರೀತಿಯಲ್ಲಿ ಪಾಠ ಕಲಿಸಲು ಭಾರತ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಅದರ ಭಾಗವಾಗಿ ಮೆಡಿಸಿನ್ ಪೂರೈಕೆ ಬಂದಾಗಿದೆ. ಈಗಾಗಲೇ ಭಾರತ ಪಾಕಿಸ್ತಾನ ಜೊತೆಗಿನ ವಿವಿಧ ವ್ಯವಹಾರಗಳನ್ನು ಸ್ಥಗಿತಗೊಳಿಸಿದ್ದು, ಔಷಧ ಪೂರೈಕೆಯನ್ನು ಬಂದ್ ಮಾಡಿದ ನಂತರ ಪಾಕಿಸ್ತಾನ ಅಕ್ಷರಶ: ಒದ್ದಾಡುವ ಸ್ಥಿತಿಗೆ ಬಂದಿದೆ. ಅದಕ್ಕಾಗಿ ಈಗಾಗಲೇ ಬೇರೆ ಬೇರೆ ದೇಶಗಳಿಗೆ ಮನವಿ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿರುವ ಪಾಕಿಸ್ತಾನ ಹೇಗಾದರೂ ಮಾಡಿ ಔಷಧ ನೀಡುವಂತೆ ದಂಬಾಲು ಬೀಳುತ್ತಿದೆ.
ಆದರೆ ಪ್ರಸ್ತುತ ಔಷಧಗಳ ಕೊರತೆಯಿಂದಾಗಿ ವೈದ್ಯರು ರೋಗಿಗಳ ಮುಂದೆ ಅಸಹಾಯಕ ಸ್ಥಿತಿಗೆ ತಲುಪಿದ್ದಾರೆ. ಆದ್ದರಿಂದ ಅವರು ಸೇವೆ ನೀಡಲಾಗದ ಪರಿಸ್ಥಿತಿಯನ್ನು ತಂದುಕೊಂಡಿದ್ದಾರೆ. ಆದ್ದರಿಂದ ವೈದ್ಯರೇ ರೋಗಿಗಳಿಂದ ತಪ್ಪಿಸಿಕೊಂಡು ತಿರುಗಾಡುತ್ತಿದ್ದಾರೆ.
ಇನ್ನು ಭಾರತದ ಜೆನರಿಕ್ ಮೆಡಿಸಿನ್ ಮೇಲೆ ಪಾಕ್ ಅವಲಂಬಿತವಾಗಿತ್ತು. ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿದ ಬಳಿಕ ಅನೇಕ ಮಾತ್ರೆಗಳನ್ನು ತಯಾರಿಸಲು ಕಚ್ಚಾವಸ್ತುಗಳ ಕೊರತೆ ಎದುರಾಗಿದೆ. ಅಲ್ಲಿನ ಜನ ಹಾವು ಕಡಿತಕ್ಕೆ, ಕ್ಯಾನ್ಸರ್ ಗೆ ಔಷಧವಿಲ್ಲದೇ ಪರದಾಡುತ್ತಿದ್ದಾರೆ. ವಿಟಾಮಿನ್- ಡಿ, ವಿಟಾಮಿನ್ ಬಿ1, ವಿಟಾಮಿನ್ ಬಿ 12, ಮಕ್ಕಳಿಗೆ ಮಾಲ್ ನ್ಯೂಟ್ರೀಷನ್ಸ್ ಎಲ್ಲವೂ ಬಂದ್ ಆಗಿದೆ.
ಬೇಸಿಕ್ ಮೆಡಿಸಿನ್ ಇಲ್ಲದೇ ಪಾಕಿಸ್ತಾನ ಪರದಾಡುವಂತಾಗಿದೆ. ಭಾರತ ಔಷಧ ಕೊಡದಿದ್ದರೆ ಜೀವನಾವಶ್ಯಕ ಔಷಧಗಳೊಂದಿಗೆ ಏಂಟಿ ರ್ಯಾಬೀಸ್ ಔಷಧ, ಹಾವು, ಚೇಳು ಕಚ್ಚಿದರೆ ಔಷಧ, ಕ್ಯಾನರ್ ಚಿಕಿತ್ಸೆಗೆ ಔಷಧ, ಆಂಟಿಬಯೋಟಿಕ್ ಔಷಧ ಕೂಡ ಬೇರೆಡೆಯಿಂದ ತರಿಸಿಕೊಳ್ಳುವುದಾಗಿ ಪಾಕಿಸ್ತಾನ ಚಿಂತಿಸುತ್ತಿದೆ. ಒಂದು ವೇಳೆ ಈ ಔಷಧಗಳು ಸೂಕ್ತ ಸಮಯದಲ್ಲಿ ಸಿಗದಿದ್ದರೆ ಪಾಕಿಸ್ತಾನ ಚಿಂತಾಜನಕ ಸ್ಥಿತಿಗೆ ತಲುಪಲಿದೆ.
ಟರ್ಕಿ, ಯುರೋಪ್, ಅಮೇರಿಕಾ, ಚೀನಾ ಬಳಿ ಔಷಧಕ್ಕಾಗಿ ಪಾಕಿಸ್ತಾನ ಅಂಗಲಾಚುತ್ತಿದೆ. ಆದರೆ ನಮ್ಮಲ್ಲಿ ಸಿಗುವಷ್ಟು ಕಡಿಮೆ ದರಕ್ಕೆ ಬೇರೆ ದೇಶಗಳಿಂದ ಪಾಕ್ ಔಷಧ ಸಿಗುವುದಿಲ್ಲ. ಇದರ ನಡುವೆ ಪಾಕಿಸ್ತಾನದ ನಾಯಕರು ಔಷಧ ವ್ಯಾಪಾರ ನಿಷೇಧದಿಂದ ವಿನಾಯಿತಿ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ್ದರು.
Leave A Reply