• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ – ಲಾರೆನ್ಸ್ ಬಿಷ್ಣೋಯಿ

Tulunadu News Posted On April 30, 2025
0


0
Shares
  • Share On Facebook
  • Tweet It

ಈಗ ಭಾರತ ಮತ್ತು ಪಾಕಿಸ್ತಾನ ನಡುವೆ ಯಾವಾಗ ಯುದ್ಧ ಆರಂಭವಾಗುತ್ತದೆ ಎನ್ನುವ ಕುತೂಹಲದ ನಡುವೆ ಈ ಒಟ್ಟು ಸಂಘರ್ಷಕ್ಕೆ ಕುಖ್ಯಾತ ಡಾನ್ ಲಾರೆನ್ಸ್ ಬಿಷ್ಣೋಯಿ ಎಂಟ್ರಿ ಹೊಡೆದಿದ್ದಾನೆ. ಅವನ ಗ್ಯಾಂಗಿನಿಂದ ಬಂದಿರುವ ಸುದ್ದಿಯ ಪ್ರಕಾರ ಭಾರತದ ಅಮಾಯಕ ಹಿಂದೂಗಳನ್ನು ಹತ್ಯೆ ಮಾಡಿರುವ ಭಯೋತ್ಪಾದಕರಿಗೆ ತಕ್ಕ ಉತ್ತರ ನೀಡಲಿದ್ದೇವೆ. ಅವರ ದೇಶಕ್ಕೆ ನುಗ್ಗಿ ಒಬ್ಬನನ್ನಾದರೂ ಮುಗಿಸಿ ಬರಲಿದ್ದೇವೆ. ಇನ್ನು ನಾವು ಹತ್ಯೆ ಮಾಡುವ ಒಬ್ಬ ಪಾಕಿಸ್ತಾನದ ಒಂದು ಲಕ್ಷ ಜನರಿಗೆ ಸಮನಾಗಿರಲಿದ್ದಾನೆ ಎಂದು ಹೇಳಲಾಗಿದೆ.

 

ಬಿಷ್ಣೋಯಿ ಗ್ಯಾಂಗ್ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ತಿಳಿಸಿದೆ. ಬಿಷ್ಣೋಯಿ ಗ್ಯಾಂಗ್ ಬಿಡುಗಡೆಗೊಳಿಸಿದ ಫೋಟೋದಲ್ಲಿ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಲಷ್ಕರ್ ಈ ತೋಯಿಬಾ ಮುಖ್ಯಸ್ಥ ಹಫೀಜ್ ಸಯಿದ್ ಫೋಟೋಗೆ ತಪ್ಪು ಸಮಾನಾರ್ಥಕ ಚಿನ್ನೆಯನ್ನು ಬಳಸಲಾಗಿದೆ.

ಅದರೊಂದಿಗೆ ಸಂದೇಶ ಬರೆಯಲಾಗಿದ್ದು ” ಜೈ ಶ್ರೀರಾಮ್ ರಾಮ್ ರಾಮ್, ಕಾಶ್ಮೀರದ ಪೆಹಲ್ಗಾಂನಲ್ಲಿ ಉಗ್ರಗಾಮಿಗಳಿಂದ ಅಮಾಯಕರ ಹತ್ಯಾಕಾಂಡ ನಡೆದು ಯಾವುದೇ ತಪ್ಪು ಮಾಡದ ಅಮಾಯಕರ ಅಂತ್ಯವಾಗಿದೆ. ಆದಷ್ಟು ಶೀಘ್ರದಲ್ಲಿ ಇದಕ್ಕೆ ಪ್ರತೀಕಾರ ನಾವು ತೆಗೆದುಕೊಳ್ಳಲಿದ್ದೇವೆ. ನಮ್ಮ ನಾಗರಿಕರ ಹತ್ಯೆಗೆ ಸಮನಾಗಿ ನಾವು ಪಾಕಿಸ್ತಾನದ ಒಳಗೆ ನುಗ್ಗಿ ಒಬ್ಬನನ್ನಾದರೂ ಮುಗಿಸಿ ಬರಲಿದ್ದೇವೆ. ಇನ್ನು ಆ ಒಬ್ಬ ಪಾಕಿಸ್ತಾನದ ಒಂದು ಲಕ್ಷ ಜನರಿಗೆ ಸಮನಾಗಿರುತ್ತಾನೆ” ಎಂದು ಬರೆಯಲಾಗಿದೆ. ಬಿಷ್ಣೋಯಿ ಗ್ಯಾಂಗಿನ ಬರವಣಿಗೆಯ ಒಟ್ಟು ತಾತ್ಪರ್ಯ ಇಷ್ಟೇ, ನಾವು ಪಾಕಿಸ್ತಾನದ ದೊಡ್ಡ ಮಿಕವೊಂದನ್ನು ಉರುಳಿಸಲಿದ್ದೇವೆ.

ಹಾಗಾದರೆ ಬಿಷ್ಣೋಯಿ ಗ್ಯಾಂಗ್ ಮೋಸ್ಟ್ ವಾಟೆಂಡ್ ಉಗ್ರ ಹಫೀಜ್ ಸೈಯಿದ್ ನನ್ನು ಮುಗಿಸಲಿದೆಯಾ? ಹಫೀಜ್ ಉಗ್ರ ಸಂಘಟನೆ ಲಷ್ಕರೆ ಈ ತೊಯಿಬಾದ ಮುಖ್ಯಸ್ಥನಾಗಿದ್ದಾನೆ. ಅವನು ಮುಂಬೈಯಲ್ಲಿ ನಡೆದ ಉಗ್ರರ ದಾಳಿಯ ಮಾಸ್ಟರ್ ಮೈಂಡ್ ಕೂಡ ಆಗಿದ್ದಾನೆ. ಹಫೀಜ್ ಭಾರತದ ವಿವಿದೆಡೆ ನಡೆದ ಉಗ್ರರ ದಾಳಿಗಳ ಪ್ರಮುಖ ಸೂತ್ರಧಾರನೂ ಆಗಿದ್ದಾನೆ. ಭಾರತ ಮಾತ್ರವಲ್ಲದೇ ಜಗತ್ತಿನ ಅನೇಕ ರಾಷ್ಟ್ರಗಳು ಅವನನ್ನು ಮೋಸ್ಟ್ ವಾಟೆಂಡ್ ಉಗ್ರರ ಪಟ್ಟಿಯಲ್ಲಿ ಸ್ಥಾನ ನೀಡಿವೆ. ಅವನನ್ನು ನಮಗೆ ಹಸ್ತಾಂತರಿಸಿ ಎಂದು ಭಾರತ ಅನೇಕ ಸಲ ಪಾಕಿಸ್ತಾನಕ್ಕೆ ಹೇಳಿದರೂ ಪಾಕಿಸ್ತಾನ ಇನ್ನು ಅವನನ್ನು ಸುರಕ್ಷಿತ ಸ್ಥಾನದಲ್ಲಿಟ್ಟು ಕಾಪಾಡುತ್ತಿದೆ.

0
Shares
  • Share On Facebook
  • Tweet It




Trending Now
ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
Tulunadu News June 29, 2026
ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
Tulunadu News June 26, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
  • Popular Posts

    • 1
      ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • 2
      ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!

  • Privacy Policy
  • Contact
© Tulunadu Infomedia.

Press enter/return to begin your search