ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!

ನನ್ನ ಮಗ ಹಿಂದೂತ್ವವನ್ನೇ ಉಸಿರಾಗಿಸಿಕೊಂಡಿದ್ದ. ಹಿಂದೂಗಳ ಒಗ್ಗೂಡುವಿಕೆಗಾಗಿ ಕೆಲಸ ಮಾಡಿದ್ದ. ಸದಾ ಹಿಂದೂತ್ವದ ಜಪ ಮಾಡುತ್ತಿದ್ದ. ಹಿಂದೂತ್ವಕ್ಕಾಗಿ ಉಸಿರು ಅನ್ನುತ್ತಿದ್ದವನ ಉಸಿರನ್ನೇ ಕಸಿದರು ಎಂದು ಸುಹಾಸ್ ಶೆಟ್ಟಿ ತಾಯಿ ಸಲೋಚನಾ ಶೆಟ್ಟಿ ಹೇಳಿದ್ದಾರೆ. ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕು. ತಾಯಿಯ ನೋವು ಯಾರಿಗೂ ಅರ್ಥವಾಗುವುದಿಲ್ಲ. ಹಿಂದೂತ್ವಕ್ಕಾಗಿ ಬದುಕು ಮೀಸಲಾಗಿಟ್ಟ ಮಗ ಈಗ ನಮ್ಮನ್ನು ಬಿಟ್ಟು ಅಗಲಿದ್ದಾನೆ ಎಂದು ಸುಹಾಸ್ ಶೆಟ್ಟಿ ಹೇಳಿದ್ದಾರೆ. ಸುಹಾಸ್ ಶೆಟ್ಟಿ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ತೀವ್ರ ಅನಾರೋಗ್ಯ ಪೀಡಿತರಾಗಿರುವ ಸುಹಾಸ್ ಶೆಟ್ಟಿ ತಾಯಿಗೆ ಮಗನ ಹತ್ಯೆ ಕುರಿತು ಮಾಹಿತಿ ನೀಡಲಾಗಿತ್ತು. ಮೊದಲೇ ಅಸ್ವಸ್ಥರಾಗಿದ್ದು, ಕ್ಯಾನ್ಸರ್ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದ ಸುಲೋಚನಾ ಶೆಟ್ಟಿಯವರು ಮಗನ ಸಾವಿನ ಸುದ್ದಿ ತಿಳಿದು ಇನ್ನಷ್ಟು ಅಸ್ವಸ್ಥರಾಗಿದ್ದಾರೆ. ಕ್ಯಾನ್ಸರ್ ಚಿಕಿತ್ಸೆ ಪಡೆದು ಗುಣಮುಖರಾಗಿದ್ದ ಸುಲೋಚನಾ ಶೆಟ್ಟಿಯವರು ಈಗ ಪುತ್ರಶೋಕದಿಂದ ಮತ್ತಷ್ಟು ನೋವಿಗೆ ತುತ್ತಾಗಿದ್ದಾರೆ. ವಿಚಾರ ತಿಳಿದು ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಕುಟುಂಬಸ್ಥರು ಸುಹಾಸ್ ಶೆಟ್ಟಿ ಪೋಷಕರನ್ನು ಸಮಾಧಾನಪಡಿಸುತ್ತಿದ್ದಾರೆ. ಸುಹಾಸ್ ಶೆಟ್ಟಿ ಮನೆಯ ಬಳಿ ಇಡೀ ದಿನ ಹಿಂದೂ ಕಾರ್ಯಕರ್ತರು ಜಮಾಯಿಸಿದ್ದರು.
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮೇ 2 ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ತನಕ ದಕ್ಷಿಣ ಕನ್ನಡ ಜಿಲ್ಲಾ ಬಂದ್ ಗೆ ವಿಶ್ವ ಹಿಂದೂ ಪರಿಷತ್ ಕರೆ ನೀಡಿತ್ತು.
Leave A Reply