ಬಿಜೆಪಿ ರ್ಯಾಲಿ ಸರಕಾರಕ್ಕೆೆ ಭೀತಿ, ಕಾರ್ಯಕರ್ತರ ಬಂಧನ

ಬೆಂಗಳೂರು: ಹಿಂದೂ ಸಂಘಟನೆಗಳ ಕಾರ್ಯಕರ್ತರ ಕೊಲೆ ಖಂಡಿಸಿ, ಸಚಿವ ರಮಾನಾಥ್ ರೈ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ಮಂಗಳೂರು ಚಲೋ ಬೈಕ್ ರ್ಯಾಲಿಗೆ ರಾಜ್ಯಾದ್ಯಂತ ಸರಕಾರ ನಿರಾಕಣೆ ಮಾಡಿದ್ದು, ಅಲ್ಲಲ್ಲಿ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಮಂಗಳೂರು ಚಲೋ ರ್ಯಾಲಿಯಿಂದ ಸರಕಾರಕ್ಕೆೆ ಭೀತಿ ಉಂಟಾಗಿದ್ದು, ಆದ್ದರಿಂದಲೇ ಈ ರೀತಿ ರ್ಯಾಲಿ ಹತ್ತಿಕುವ ಕಾರ್ಯ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದ್ದು, ಯಾವುದೇ ಕಾರಣಕ್ಕೂ ರ್ಯಾಲಿ ನಿಲ್ಲುವುದಿಲ್ಲ ಎಂದು ಹೇಳಿದೆ.
ರ್ಯಾಲಿ ಯಶಸ್ವಿಯಾಗುವ ಭೀತಿಯಲ್ಲಿ ರಾಜ್ಯ ಸರಕಾರ ಈ ನಿರ್ಧಾರ ಕೈಗೊಂಡಿದ್ದು, ಶಾಂತಿ ಸುವ್ಯವಸ್ಥೆೆಯ ನೆಪ ಹೇಳಿ ಮಂಗಳೂರು ಚಲೋಗೆ ಅಡ್ಡಿ ವ್ಯಕ್ತಪಡಿಸಿದೆ ಎಂದು ಬಿಜೆಪಿ ಆರೋಪಿಸಿದೆ.
‘ಮಂಗಳೂರು ಚಲೋ’ ಬೈಕ್ ಜಾಥಾ, ಹುಬ್ಬಳ್ಳಿ, ಶಿವಮೊಗ್ಗ, ಮೈಸೂರು, ಬೆಂಗಳೂರು, ಚಿಕ್ಕಮಗಳೂರಿನಿಂದ ಬೈಕ್ ಜಾಥಾ ಮಂಗಳವಾರ ಹೊರಡಲಿದ್ದು, ಸೆ.7ರಂದು ಮಂಗಳೂರು ತಲುಪಲಿದೆ. ಸೆ.7ರಂದು ಬೃಹತ್ ಸಮಾವೇಶ ನಡೆಸಲು ಯೋಜನೆ ರೂಪಿಸಿದೆ. ಆದರೆ ಜಾಥಾ ನಡೆಸಲು ಪೊಲೀಸರು ಅನುಮತಿ ನೀಡದೆ ಸರಕಾರದ ಅಣತಿಯಂತೆ ಕಾರ್ಯ ನಿರ್ವಹಿಸಿ ಹೋರಾಟಗಾರರನ್ನು ಹತ್ತಿಕುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಎಲ್ಲೆೆಲ್ಲಿ ರ್ಯಾಲಿಗೆ ನಿರಾಕರಣೆ
ಬೆಳಗಾವಿ, ಹುಬ್ಬಳಿ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜ ನಗರ, ಗದಗ ಸೇರಿ ಹಲವು ಜಿಲ್ಲೆೆಗಳಲ್ಲಿ ರ್ಯಾಲಿಗೆ ನಿರಾಕರಣೆ.
ರ್ಯಾಲಿಗೆ ಸರಕಾರದ ವಿರೋಧಕ್ಕೆೆ ನೀಡಿರುವ ಕಾರಣ
* ಸಂಚಾರ ಅಸ್ತವ್ಯಸ್ತ
* ಶಾಂತಿ ಭಂಗ ಉಂಟು ಮಾಡುವ ಸಾಧ್ಯತೆ
*ಕಾನೂನು ಸುವ್ಯವಸ್ಥೆೆಗೆ ಭಂಗ ತರುವ ಸಾಧ್ಯತೆ
*ಸಂಚಾರ ವಿಭಾಗದಿಂದ ಅನುಮತಿ ಪಡೆದಿಲ್ಲ
* ಪೊಲೀಸ್ ಬಂದೋಬ್ತ್ ಕಲ್ಪಿಸಲು ಅಸಾಧ್ಯ
* ಬೈಕ್ ರ್ಯಾಲಿಗೆ ಮಂಗಳೂರಿನ ಆಯುಕ್ತರ ಅನುಮತಿ ಪಡೆದಿಲ್ಲ
Leave A Reply