ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!

ಕೇಂದ್ರ ಗೃಹ ಇಲಾಖೆ ಮೇ 7 ರಂದು ಅಣಕು ದಾಳಿ ರಕ್ಷಣಾ ಸಿದ್ಧತೆಯನ್ನು ಮಾಡಿಕೊಳ್ಳುವಂತೆ ರಾಜ್ಯಗಳಿಗೆ ಸೂಚಿಸಿದೆ. ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಭಯೋತ್ಪಾದಕರಿಂದ ಪ್ರವಾಸಿಗರ ಹತ್ಯಾಕಾಂಡದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಸಂಘರ್ಷ ಏರ್ಪಡುವ ಸಾಧ್ಯತೆ ಇದ್ದು, ಅದಕ್ಕಾಗಿ ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆ ನಡೆಸಲು ಕೇಂದ್ರ ಗೃಹ ಇಲಾಖೆಯಿಂದ ಸೂಚನೆ ಬಂದಿದೆ.
ಒಂದು ವೇಳೆ ದೇಶದ ಹೊರಗಿನಿಂದ ವಾಯುದಾಳಿ ನಡೆದಲ್ಲಿ ಅದನ್ನು ಎದುರಿಸಲು ನಾಗರಿಕರು ಯಾವ ರೀತಿ ಮಾನಸಿಕವಾಗಿ, ದೈಹಿಕವಾಗಿ ಸಿದ್ಧರಿರಬೇಕು ಎನ್ನುವ ಕಾರಣಕ್ಕೆ ಈ ಅಣಕು ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಗಿದೆ. ಇಂತಹ ಒಂದು ಅಣಕು ಕಾರ್ಯಾಚರಣೆ 1971 ರಲ್ಲಿಯೂ ನಡೆದಿತ್ತು. ಅದರ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಆರಂಭವಾಗಿತ್ತು.
ಹಾಗಾದರೆ ಕೇಂದ್ರ ಗೃಹ ಇಲಾಖೆ ಯಾವ ರೀತಿಯ ತಯಾರಿ ಮಾಡಬೇಕೆಂದು ರಾಜ್ಯಗಳಲ್ಲಿ ಸೂಚಿಸಿದೆ ಎನ್ನುವುದನ್ನು ಈ ಕೆಳಗೆ ವಿವರಿಸಲಾಗಿದೆ.
1. ವಾಯು ದಾಳಿಯ ಮುನ್ಸೂಚನೆ ಬಂದಲ್ಲಿ ಏನು ಮಾಡಬೇಕು.
2. ದೇಶದ ಹೊರಭಾಗದಿಂದ ಪ್ರತಿಕೂಲ ದಾಳಿ ನಡೆದ್ದಲ್ಲಿ ನಾಗರಿಕರು, ವಿದ್ಯಾರ್ಥಿಗಳು ನಾಗರಿಕ ಯೋಧರಾಗಿ ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬಹುದು.
3. ದಾಳಿ ಸಂಭವಿಸಿದಲ್ಲಿ ಬೆಳಕನ್ನು ಹೇಗೆ ನಂದಿಸಿ ಕ್ರಮ ಕೈಗೊಳ್ಳುವುದು.
4. ದೇಶದ ಪ್ರಮುಖ ಸ್ಥಾವರಗಳನ್ನು ದಾಳಿಯಿಂದ ರಕ್ಷಿಸಿಕೊಳ್ಳುವುದು ಅಥವಾ ರಕ್ಷಣೆಗಾಗಿ ಸ್ಥಾಪಿಸುವುದು.
5. ಪರಿಸ್ಥಿತಿಯನ್ನು ಅರಿತು ನಾಗರಿಕರ ಸ್ಥಳಾಂತರ ಪ್ರಕ್ರಿಯೆ ಹೇಗೆ ನಡೆಸುವುದು.
ಪಾಕಿಸ್ತಾನ ಸತತ 11 ರಾತ್ರಿ ಭಾರತದ ಗಡಿಯಲ್ಲಿ ಅಪ್ರಚೋದಿತ ದಾಳಿಗಳನ್ನು ನಡೆಸುತ್ತಾ ಬಂದಿದೆ. ಇದಕ್ಕೆ ಭಾರತ ತೀಕ್ಣವಾಗಿ ಉತ್ತರ ನೀಡಿದ್ದು, ಈಗ ಅಣಕು ದಾಳಿ ರಕ್ಷಣಾ ಕಾರ್ಯಾಚರಣೆ ಈ ಹಂತದಲ್ಲಿ ಬಹಳ ಮುಖ್ಯವಾದ ಅಂಗವಾಗಿದೆ.
Leave A Reply