ಭಾರತ ನಿಲುವಿಗೆ ಬಗ್ಗಿದ ಚೀನಾ, ವಿವಾದ ಮರುಕಳಿಸದಂತೆ ಒಪ್ಪಿಗೆ
ಬೀಜಿಂಗ್: ಡೋಕ್ಲಾ0 ವಿವಾದ ತಾರಕಕ್ಕೆೆ ಏರಿದ ನಂತರ ಮೊದಲ ಬಾರಿಗೆ ಭೇಟಿಯಾಗಿರುವ ಚೀನಾ ಅಧ್ಯಕ್ಷ ಕ್ಸಿನ್‌ಪಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದು, ಮತ್ತೊಮ್ಮೆ ಡೋಕ್ಲಾOನಂತಹ ವಿವಾದಗಳು ನಡೆಯದಂತೆ ಕಾರ್ಯ ನಿರ್ವಹಿಸುವುದಾಗಿ ಚೀನಾ ಭರವಸೆ ನೀಡಿದೆ. ಗಡಿಯಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಉಭಯ ಸರಕಾರಗಳು ಒಪ್ಪಿಗೆ ನೀಡಿವೆ ಎಂದು ಭಾರತೀಯ ವಿದೇಶಾಂಗ ಕಾರ್ಯದರ್ಶಿ ತಿಳಿಸಿದ್ದಾರೆ.
ಚೀನಾ ಈ ಮೂಲಕ ಭಾರತದ ಪರ ಮೃದು ಧೋರಣೆ ತಳೆದಿದ್ದು, ಭಾರತಕ್ಕೆೆ ಮತ್ತೊOದು ರಾಜತಾಂತ್ರಿಕ ಗೆಲವು ದೊರೆತಿದೆ. ಅಲ್ಲದೇ ಚೀನಾ ಭಾರತದ ನಿಲುವಿಗೆ ಬದ್ಧ ಎಂಬುದನ್ನು ಈ ಮೂಲಕ ಸಾರಿದೆ. ಈ ಒಪ್ಪಂದದಿದ್ದ ಪಾಕಿಸ್ತಾನಕ್ಕೂ ಸ್ಪಷ್ಟ ಸಂದೇಶ ಕಳುಹಿಸಿದಂತಾಗಿದ್ದು, ಭಾರತದ ಭಯೋತ್ಪಾದನೆ ವಿರುದ್ಧದ ನಿಲುವಿಗೆ ಮತ್ತಷ್ಟು ಬಲ ಬಂದಂತಾಗಿದೆ.
ಎರಡು ರಾಷ್ಟ್ರಗಳು ಪರಸ್ಪರ ಸಹಕಾರದೊಂದಿಗೆ ಕಾರ್ಯ ನಿರ್ವಹಿಸಬೇಕು, ಗಡಿಯಲ್ಲಿ ಚೀನಾ ನಿರ್ಮಿಸುತ್ತಿರುವ ರಸ್ತೆೆ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದು ಚೀನಾಕ್ಕೆೆ ಮನವಿ ಮಾಡಲಾಗಿದೆ. ಇದಕ್ಕೂ ಚೀನಾ ಒಪ್ಪಿಗೆ ನೀಡುವ ನಿರೀಕ್ಷೆ ಇದೆ. ಪಂಚಶೀಲ ಒಪ್ಪಂದಂತೆ ಕಾರ್ಯ ನಿರ್ವಹಿಸಲು ಚೀನಾ ಒಪ್ಪಿಗೆ ನೀಡಲು ನಿರ್ಧರಿಸಿದೆ.
Leave A Reply