• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಅಯೋಧ್ಯೆಯಲ್ಲಿ ಇನ್ನು ಮಾಂಸಹಾರ, ಮದ್ಯ ಸಂಪೂರ್ಣ ನಿಷೇಧ!

Tulunadu News Posted On May 30, 2025
0


0
Shares
  • Share On Facebook
  • Tweet It

ರಾಮನಗರಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇನ್ನು ಮಾಂಸಾಹಾರ, ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಅಯೋಧ್ಯೆ ನಗರ ನಿಗಮ ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ಮೂಲಕ ಸಂಪೂರ್ಣವಾಗಿ ಇಡೀ ಅಯೋಧ್ಯೆಯಲ್ಲಿ ಪಾವಿತ್ರತೆಯನ್ನು ಕಾಪಾಡಲು ಸ್ಥಳಿಯಾಡಳಿತ ತೀರ್ಮಾನ ಮಾಡಿದೆ. ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲು ಅಯೋಧ್ಯಾ ನಗರ ನಿಗಮ ಈ ಮೊದಲೇ ನಿರ್ಧಾರ ಮಾಡಿತ್ತು. ಆದರೆ ಈಗ ಅದು ಅನುಷ್ಟಾನಕ್ಕೆ ಬರಲು ಸಿದ್ಧತೆ ನಡೆಸಲಾಗಿದೆ. ಈಗಾಗಲೇ ಮಾಂಸಹಾರ ಮತ್ತು ಮದ್ಯ ಮಾರಾಟ ಮಾಡುತ್ತಿದ್ದ ಮಳಿಗೆಗಳಿಗೆ ನೋಟಿಸು ಜಾರಿ ಮಾಡಲಾಗಿದೆ. ಆ ನೋಟಿಸಿನಲ್ಲಿ ಮುಂದಿನ ಏಳು ದಿನಗಳ ಒಳಗೆ ಮಾಂಸದ ಖಾದ್ಯಗಳನ್ನು ಮತ್ತು ಮದ್ಯವನ್ನು ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ಖಡಕ್ ಸೂಚನೆ ನೀಡಲಾಗಿದೆ. ಇದು ಅಯೋಧ್ಯೆಯ ರಾಮ ಮಂದಿರದ 15 ಕಿ.ಮೀ ಸುತ್ತಮುತ್ತಲು ಜಾರಿಗೆ ಬರಲಿದೆ. ಇದರೊಂದಿಗೆ ರಾಮಪಥದಲ್ಲಿ ತಂಬಾಕು, ಗುಟ್ಕಾ, ಒಳವಸ್ತುಗಳ ಜಾಹೀರಾತುಗಳನ್ನು ಕೂಡ ಹಾಕುವಂತಿಲ್ಲ ಎನ್ನುವ ನಿಯಮ ಜಾರಿಗೆ ತರಲಾಗಿದೆ. ರಾಮಪಥ ಅಯೋಧ್ಯೆಯ ರಾಮ ಮಂದಿರದಿಂದ ಫೈಜಾಬಾದ್ ಸೇರಿಸಿಕೊಂಡು 15 ಕಿಲೋ ಮೀಟರ್ ವ್ಯಾಪ್ತಿಯಲ್ಲಿದೆ.

ಇನ್ನು ಅಧಿಕಾರಿಗಳ ಪ್ರಕಾರ ರಾಮಪಥದ ಅರ್ಧ ಕಿಲೋ ಮೀಟರ್ ನಂತರವೇ ಮಾಂಸಾಹಾರ, ಮದ್ಯ ಮಾರಬಹುದು. ಇಲ್ಲಿಯ ತನಕ ರಾಮಪಥ ಬರುವ ಫೈಜಾಬಾದ್ ನಲ್ಲಿ ಇದನ್ನೆಲ್ಲಾ ಮಾರಲಾಗುತ್ತಿತ್ತು. ಇನ್ನು ಹಾಗೆ ಮಾರುವಂತಿಲ್ಲ. ಒಂದೋ ಈ ಹೋಟೇಲುಗಳು ಮಾಂಸಹಾರ ವ್ಯಾಪಾರ ನಿಲ್ಲಿಸಬೇಕು ಅಥವಾ ತಮ್ಮ ಹೋಟೇಲನ್ನು ರಾಮಪಥದ ನಂತರದ ಅರ್ಧ ಕಿಲೋ ಮೀಟರ್ ದೂರದಲ್ಲಿ ತೆರೆಯಬೇಕು.

ಅಯೋಧ್ಯೆಯ ನಗರದಲ್ಲಿ ಮಾಂಸಹಾರ, ಮದ್ಯ ಮಾರುವುದು ಹಲವು ಕಾಲದ ಹಿಂದೆಯೇ ನಿಲ್ಲಿಸಲಾಗಿದೆ. ಆದರೆ ಈಗ ರಾಮಪಥ ಫೈಜಾಬಾದನ್ನು ಸೇರಿಸಿಕೊಂಡು ಬೆಳೆದಿರುವುದರಿಂದ ಆ ಪ್ರದೇಶದಲ್ಲಿ ಇದನ್ನು ಜಾರಿಗೆ ತರುವ ಅವಶ್ಯಕತೆ ಇತ್ತು.

ಇಂತಹ ನಿಯಮ ಸ್ಥಳೀಯಾಡಳಿತದ ಸಭೆಯಲ್ಲಿ ಪಾಸಾಗುತ್ತಿದ್ದಂತೆ ಅಯೋಧ್ಯೆಯ ಆಹಾರ ಸುರಕ್ಷತಾ ವಿಭಾಗದ ಅಧಿಕಾರಿಗಳು ತಮ್ಮ ತಂಡದೊಂದಿಗೆ ರಾಮಪಥ ಸ್ಥಳಕ್ಕೆ ಬಂದು ಏಳು ದಿನಗಳ ಒಳಗೆ ತಮ್ಮ ಅಂಗಡಿಗಳಲ್ಲಿ ಮಾಂಸಹಾರ ಮಾರದಂತೆ ಸೂಚನೆ ನೀಡಿದರು. ಇನ್ನು ಒಂದು ವೇಳೆ ಈ ಸೂಚನೆ ಉಲ್ಲಂಘಿಸಿದ್ದಲ್ಲಿ ಸ್ಥಳೀಯಾಡಳಿತ ತೆಗೆದುಕೊಳ್ಳುವ ಮುಂದಿನ ಯಾವುದೇ ಕಾನೂನು ಕ್ರಮದ ಬಗ್ಗೆ ಎಚ್ಚರಿಕೆಯನ್ನು ಕೂಡ ನೀಡಿದರು. ಧರ್ಮಪಥ, ರಾಮಪಥ, 14 ಕೋಸಿ ಮತ್ತು ಪಂಚಕೋಸಿ ಮಾರ್ಗದಲ್ಲಿ ಇನ್ನು ಮಾಂಸಹಾರ ಮಾರಲಾಗುವುದಿಲ್ಲ.

ಅಯೋಧ್ಯೆ ನಗರ ನಿಗಮ ಈ ನಿಯಮವನ್ನು ತಮ್ಮ ಸಭೆಯಲ್ಲಿ ಅಂಗೀಕರಿಸಿದ ನಂತರ ಇದು ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ ಎಂದು ಗೊತ್ತಾದ ನಂತರ ಇಲ್ಲಿಯ ತನಕ ಮಾಂಸಾಹಾರ ಮಾರುತ್ತಿದ್ದ ವ್ಯಾಪಾರಿಗಳು ಕೂಡ ಇನ್ನು ಮುಂದೆ ತಮ್ಮ ಅಂಗಡಿಗಳಲ್ಲಿ ಸಸ್ಯಹಾರವನ್ನು ಮಾರಲು ನಿರ್ಧರಿಸಿದ್ದಾರೆ. ಸ್ಥಳಿಯಾಡಳಿತದ ಸೂಚನೆಯನ್ನು ಒಪ್ಪಿಕೊಂಡಿರುವ ವ್ಯಾಪಾರಿಗಳು ತಮ್ಮ ಅಂಗಡಿಗಳಲ್ಲಿ ಸಸ್ಯಹಾರ ಮಾರುವ ಬಗ್ಗೆ ಮಾಡಬೇಕಾದ ಬದಲಾವಣೆಗಳನ್ನು ಮಾಡಲು ಮುಂದಾಗಿದ್ದಾರೆ. ಅಯೋಧ್ಯೆಯ ಸ್ಥಳೀಯಾಡಳಿತದ ಈ ಕ್ರಮದಿಂದ ಭಾರತದ ಸನಾತನ ಪರಂಪರೆಯ ಶುದ್ಧತೆ ಮತ್ತು ಪಾವಿತ್ರತೆ ಮುಂಬರುವ ದಿನಗಳಲ್ಲಿ ಪೂರ್ಣವಾಗಿ ರಾಮನೂರಿನಲ್ಲಿ ಕಾಣಸಿಗಲಿದೆ ಎಂದು ಹೇಳಲಾಗುತ್ತಿದೆ.

0
Shares
  • Share On Facebook
  • Tweet It




Trending Now
ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
Tulunadu News May 21, 2026
ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
Tulunadu News May 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ

  • Privacy Policy
  • Contact
© Tulunadu Infomedia.

Press enter/return to begin your search