ಗುಂಡಿಟ್ಟು ಪತ್ರಕರ್ತೆ ಗೌರಿ ಲಂಕೇಶ ಹತ್ಯೆ
ಬೆಂಗಳೂರು: ಹಿರಿಯ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ ಅವರನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಅವರ ಮನೆಯಲ್ಲಿ ಗುಂಡಿಟ್ಟು ಕೊಲೆ ಮಾಡಲಾಗಿದೆ. 6 ಸುತ್ತು ಗುಂಡು ಹಾರಿಸಿರುವ ದುಷ್ಕರ್ಮಿಗಳು ಎದೆ ಮತ್ತು ತಲೆ ಭಾಗಕ್ಕೆೆ ಗುಂಡಿಟ್ಟು ಕೊಲೆ ಮಾಡಿದ್ದಾರೆ. ಮಂಗಳವಾರ ರಾತ್ರಿ ಸುಮಾರು 7ಗಂಟೆಗೆ ಬೈಕ ಮೇಲೆ ಬಂದಿರುವ ಗುಂಡಿಟ್ಟಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ.
ವಿಚಾರವಾದಿ ಎಂ.ಎಂ.ಕಲಬುರಗಿ ಹತ್ಯೆೆ ನಂತರ ರಾಜ್ಯದಲ್ಲಿ ಇದು ಎರಡನೇ ಕೊಲೆಯಾಗಿದ್ದು, ಲಂಕೇಶ ಕೊಲೆಯಲ್ಲೂ ಸೈದ್ದಾOತಿಕ ವಿರೋಧಿಗಳು ಹತ್ಯೆೆ ಮಾಡಿರಬಹುದು ಎಂದು ಚಿಂತಕರು ಶಂಕೆ ವ್ಯಕ್ತಪಡಿಸಿದ್ದಾರೆ. ಕೊಲೆ ತನಿಖೆ ನಡೆಸಲು ಸರಕಾರ ವಿಶೇಷ ತನಿಖಾ ದಳ ನೇಮಿಸಿದ್ದು, ಸೂಕ್ತ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆೆ ಕುರಿತು ಆಕ್ರೋಶ
ರಾಜ್ಯದಲ್ಲಿ ಬಲ ಮತ್ತು ಎಡ ಪಂಥದ ಯಾರಿಗೂ ಭದ್ರತೆ ಇಲ್ಲ. ಸಿದ್ದರಾಮಯ್ಯ ಸರಕಾರ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆೆ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಪ್ರತಿ ಪಕ್ಷಗಳು ಆರೋಪಿಸಿವೆ. ಸಿದ್ದರಾಮಯ್ಯ ಸರಕಾರದಲ್ಲಿ ಬಲಪಂಥಿಯ 12 ಕೊಲೆಗಳು ನಡೆದಿದ್ದು ಸೇರಿ ಎಲ್ಲ ವಿಚಾರಧಾರೆಗಳವರ ಕೊಲೆಗಳು ನಡೆದಿವೆ. ಆದರೆ ಸರಕಾರ ತಡೆಯುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
Leave A Reply