• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!

TULUNADU NEWS Posted On June 16, 2025
0


0
Shares
  • Share On Facebook
  • Tweet It

ಭಾರತ ಇಡೀ ವಿಶ್ವಕ್ಕೆ ಯುಪಿಐ ವ್ಯವಹಾರದ ವಿಷಯದಲ್ಲಿ ನಾಯಕ ಎಂದು ಹೇಳಿದರೆ ಅತಿಶಯೋಕ್ತಿ ಅಲ್ಲ. ಯಾಕೆಂದರೆ ಭಾರತದಲ್ಲಿ ಬೀಡಾ ಸ್ಟಾಲ್ ನಿಂದ ಮಾಲ್ ಗಳ ತನಕ ಯುಪಿಐ ಪೇಮೆಂಟ್ ಚಾಲ್ತಿಯಲ್ಲಿದೆ. ಯುಪಿಐ ಎಂದರೆ ಯುನಿಫೈಡ್ ಪೇಮೆಂಟ್ ಇಂಟರಫೇಸ್ ಎನ್ನುವುದು ಅದರ ಪೂರ್ಣ ರೂಪ. ಒಂದು ಬ್ಯಾಂಕಿನಿಂದ ಮತ್ತೊಂದು ಬ್ಯಾಂಕಿನ ಶಾಖೆಗೆ ಹಣವನ್ನು ಮೊಬೈಲ್ ಆಪ್ ಮೂಲಕ ಹಸ್ತಾಂತರಿಸುವುದೇ ಇದರ ನಿಜವಾದ ಕೆಲಸ. ಬೇರೆ ಬೇರೆ ಕಂಪೆನಿಗಳ ಆಪ್ ಗಳ ಮೂಲಕ ಇಲ್ಲಿ ಹಣವನ್ನು ವರ್ಗಾಯಿಸಬಹುದು. ವಿಶ್ವದ 50% ಯುಪಿಐ ಟ್ರಾನ್ಸಫರ್ ಭಾರತದ ಒಂದರಲ್ಲಿಯೇ ನಡೆಯುತ್ತದೆ. ಅಷ್ಟು ದೊಡ್ಡದಾಗಿ ಆಧುನಿಕತೆಗೆ ಭಾರತ ತೆರೆದುಕೊಂಡಿದೆ. ಇಲ್ಲಿ ಸೊಪ್ಪು ಮಾರುವವ ಕೂಡ ಕ್ಯೂ ಆರ್ ಕೋಡ್ ಹೊಂದಿದ್ದಾನೆ. ಜಾತ್ರೆಯಲ್ಲಿಯೂ ಬೊಂಬೆ ಮಾರುವವರ ಬಳಿ ಕ್ಯೂ ಆರ್ ಕೋಡ್ ಇದೆ. ಆದ್ದರಿಂದ ಆರ್ಥಿಕ ಪಾರದರ್ಶಕತೆಗೆ ಭಾರತ ಹಣಕಾಸು ವ್ಯವಸ್ಥೆ ಹೊಂದಿಕೊಂಡಿದೆ.

ಒಂದು ಯುಪಿಐ ಪೇಮೆಂಟ್ ಆಗಲು ಇಲ್ಲಿಯ ತನಕ ತಗಲುತ್ತಿದ್ದ ವೇಳೆಗಿಂತ ಇನ್ನು ಮುಂದೆ ಬಹಳ ವೇಗವಾಗಿ ಈ ಹಣ ವರ್ಗಾವಣೆ ಆಗುತ್ತದೆ ಎನ್ನುವ ಮಾಹಿತಿ ಸಿಕ್ಕಿದೆ. ನ್ಯಾಶನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ ಎನ್ನುವ ಸಂಸ್ಥೆ ಈ ವ್ಯವಹಾರವನ್ನು ನೋಡಿಕೊಳ್ಳುತ್ತದೆ. ಇದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಶನ್ ಜಂಟಿಯಾಗಿ ನಿರ್ವಹಿಸುತ್ತವೆ.
ಇಂದಿನಿಂದ ಯುಪಿಐ ಪೇಮೆಂಟ್ ವೇಗ ಪಡೆದುಕೊಳ್ಳುತ್ತಿರುವ ಬಗ್ಗೆ ಎನ್ ಪಿಸಿಐ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಇಲ್ಲಿಯ ತನಕ ಯಾವುದೇ ಯುಪಿಐ ಟ್ರಾನ್ಸೆಕ್ಷನ್, ಅದು ಹಣ ಪಡೆದುಕೊಳ್ಳುವುದು ಅಥವಾ ಕಳುಹಿಸಿಕೊಡುವುದು ಯಾವುದೂ ಇರಲಿ, ಹೆಚ್ಚು ಕಡಿಮೆ 30 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತಿತ್ತು. ಇನ್ನು ಹೊಸ ನಿಯಮಗಳ ಪ್ರಕಾರ ಇನ್ನು 15 ಸೆಕೆಂಡುಗಳ ಒಳಗೆ ಈ ವರ್ಗಾವಣೆ ನಡೆದುಹೋಗಲಿದೆ. ಇದು ಫೋನ್ ಪೇ, ಗೂಗಲ್ ಪೇ, ಪೆಟಿಎಂ ಸಹಿತ ಎಲ್ಲಾ ರೀತಿಯ ಆಪ್ ಗಳಿಗೂ ಅನ್ವಯವಾಗುತ್ತದೆ.

ಇನ್ನು ಹಣ ವರ್ಗಾವಣೆಯ ಸ್ಟೇಟಸ್ ಪರಿಶೀಲನೆ ಮತ್ತು ವಿಫಲವಾದ ವರ್ಗಾವಣೆಯನ್ನು ಮರುಚಾಲನೆಗೊಳಿಸುವ ಪ್ರಕ್ರಿಯೆ ಕೂಡ ಇಷ್ಟೇ ವೇಗದಲ್ಲಿ ನಡೆಯಲಿದೆ. ಈ ಹಿಂದೆ ನಮ್ಮ ಹಣ ವರ್ಗಾವಣೆ ಆಗುವಲ್ಲಿ ವಿಫಲವಾಗಿದ್ದರೆ ನಾವು ಮೂವತ್ತು ಸೆಕೆಂಡ್ಸ್ ತನಕ ಕಾದು ಹಣ ವರ್ಗಾವಣೆ ಆಗಿದೆಯಾ ಅಥವಾ ನಮ್ಮ ಖಾತೆಯಲ್ಲಿ ಉಳಿದಿದೆಯಾ ಎಂದು ಕಾಯಬೇಕಿತ್ತು. ಈಗ ಈ ಪ್ರಕ್ರಿಯೆ ಕೇವಲ 10 ಸೆಕೆಂಡ್ಸ್ ಒಳಗೆ ಮುಗಿಯಲಿದೆ. ಇದರಿಂದ ವರ್ಗಾವಣೆ ಪ್ರಕ್ರಿಯೆ ಯಶಸ್ವಿಯಾ ಅಥವಾ ವಿಫಲನಾ ಎಂದು ಗ್ರಾಹಕರಿಗೆ ತಕ್ಷಣ ಗೊತ್ತಾಗುತ್ತದೆ.

ಇಲ್ಲಿ ಒಂದು ಉದಾಹರಣೆಯೊಂದಿಗೆ ನಿಮಗೆ ವಿವರಿಸುತ್ತೇನೆ. ನೀವು ಒಂದು ಮಳಿಗೆಗೆ ಹೋಗುತ್ತೀರಿ. ಅಲ್ಲಿ 500 ರೂಪಾಯಿಯ ವಸ್ತುಗಳನ್ನು ಖರೀದಿ ಮಾಡುತ್ತೀರಿ ಎಂದು ಇಟ್ಟುಕೊಳ್ಳೋಣ. ಅಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಅಂಗಡಿಯವರ ಕ್ಯೂಆರ್ ಕೋಡ್ ಅನ್ನು ಬ್ಯಾಂಕ್ ಆಪ್ ಮೂಲಕ ಸ್ಕ್ಯಾನ್ ಮಾಡುತ್ತೀರಿ. ಆಗ ನಿಮ್ಮ ಮೊಬೈಲಿನ ಏಪ್ ಆ ಅಂಗಡಿಯ ಮಾಲೀಕನ ಆಪ್ ಖಾತೆಗೆ ಹಣ ವರ್ಗಾವಣೆ ಮಾಡಲು ಎನ್ ಪಿಸಿಐ ಮೂಲಕ ಯುಪಿಐಗೆ ಸಂದೇಶ ಕಳುಹಿಸಿಕೊಡುತ್ತದೆ. ನಂತರ ಹಣ ಪ್ರಕ್ರಿಯೆ ಆರಂಭವಾಗುತ್ತದೆ. ಅದರ ನಂತರ ಹಣ ವರ್ಗಾವಣೆ ಆಗಿದೆಯಾ ಇಲ್ವಾ ಎನ್ನುವ ಸಂದೇಶ ನಿಮ್ಮ ಆಪ್ ಮೂಲಕ ನಿಮಗೆ ಸಿಗುತ್ತದೆ. ಈ ಒಟ್ಟು ಪ್ರಕ್ರಿಯೆ ನಡೆಯಲು ಇಲ್ಲಿಯ ತನಕ 30 ಸೆಕೆಂಡ್ಸ್ ತಗಲುತ್ತಿತ್ತು. ಇನ್ನು ಅದು 15 ಸೆಕೆಂಡ್ಸ್ ಒಳಗೆ ಮುಗಿಯಲಿದೆ.

0
Shares
  • Share On Facebook
  • Tweet It




Trending Now
ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
TULUNADU NEWS May 21, 2026
ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
TULUNADU NEWS May 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ

  • Privacy Policy
  • Contact
© Tulunadu Infomedia.

Press enter/return to begin your search