• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!

TULUNADU NEWS Posted On June 18, 2025
0


0
Shares
  • Share On Facebook
  • Tweet It

ಸುಮಾರು 70 ತೊಲ ಬಂಗಾರದ ಆಭರಣಗಳು, 80 ಸಾವಿರ ರೂಪಾಯಿ ನಗದು, ಭಗವದ್ಗೀತೆ ಪುಸ್ತಕ, ಪಾಸ್ ಪೋರ್ಟ್ ಪುಸ್ತಕಗಳು ಇದು ಮೊದಲು ಯಾರು ಅಲ್ಲಿ ಹೋಗಿದ್ದರೋ ಅವರಿಗೆ ಸಿಕ್ಕಿರುವ ವಸ್ತುಗಳು. ಜೂನ್ 12 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಹಮದಾಬಾದ್ ನಿಂದ ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಟೆಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ದುರಂತ ಅಂತ್ಯ ಕಂಡಿತ್ತು.

ಬೋಯಿಂಗ್ 787 -8 ಡ್ರೀಮ್ ಲೈನರ್ ವಿಮಾನ ಮೊದಲು ಟೆಕ್ ಆಫ್ ಆದ ಕೆಲವೇ ಸೆಕೆಂಡ್ ಗಳಲ್ಲಿ ಬಿಜೆ ಮೆಡಿಕಲ್ ಕಾಲೇಜಿನ ಸಿವಿಲ್ ಆಸ್ಪತ್ರೆಯ ಭೋಜನಾಲಯ ಇರುವ ಕಟ್ಟಡಕ್ಕೆ ಹೊಡೆದು ನಂತರ ಹಿರಿಯ ವೈದ್ಯರು ತಂಗುವ ಅಲ್ಲಿನ ಹಾಸ್ಟೆಲ್ ನಲ್ಲಿ ಸಿಲುಕಿಕೊಂಡಿತು. ಇದರಿಂದ ಎರಡೂ ಕಟ್ಟಡಗಳಿಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಇದೇ ಸಂದರ್ಭದಲ್ಲಿ ಅಲ್ಲಿಯೇ ಸನಿಹದಲ್ಲಿದ್ದ ರಾಜು ಪಟೇಲ್, 56 ವರ್ಷ ಪ್ರಾಯದ ಕಟ್ಟಡ ನಿರ್ಮಾಣಕಾರ ತಕ್ಷಣ ಅಲ್ಲಿಗೆ ಹೋಗಿದ್ದು, ಮೊದಲ 15 – 20 ನಿಮಿಷ ಅವರು ಅಲ್ಲಿ ಹತ್ತಿರಕ್ಕೂ ಹೋಗಲು ಸಾಧ್ಯವಿರಲಿಲ್ಲವಂತೆ. ಈ ಬಗ್ಗೆ ಮಾಹಿತಿ ನೀಡಿದ ಅವರು ” ನಮ್ಮ ತಂಡದ ಬಳಿ ಸ್ಟೇಚರ್ ಇರಲಿಲ್ಲ, ಆದರೆ ನಾವು ಎದೆಗುಂದಲಿಲ್ಲ. ಸಾರಿ ಮತ್ತು ಶೀಟ್ಸ್ ಬಳಸಿ ಗಾಯಾಳುಗಳನ್ನು ಎತ್ತುವ ಪ್ರಯತ್ನ ಮಾಡಿದೆವು. ಮೊದಲ ಅಗ್ನಿಶಾಮಕ ದಳ ಹಾಗೂ 108 ಅಂಬ್ಯುಲೆನ್ಸ್ ಬಂದ ಕೂಡಲೇ ನಾವು ರಕ್ಷಣಾ ಕಾರ್ಯಾಚರಣೆಗೆ ಧುಮುಕಿದೆವು” ಎಂದು ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.

“ಅಲ್ಲಿ ಬಿದ್ದಿದ್ದ ಹೆಚ್ಚಿನ ಸಾಮಾಗ್ರಿಗಳು ಸುಟ್ಟ ಸ್ಥಿತಿಯಲ್ಲಿ ಮತ್ತು ಮುರಿದ ಪರಿಸ್ಥಿತಿಯಲ್ಲಿತ್ತು. ಮೊದಲ ಆದ್ಯತೆಯಾಗಿ ಗಾಯಾಳುಗಳನ್ನು ರಕ್ಷಿಸುವ ಕೆಲಸ ನಡೆಸಲಾಯಿತು. ನಂತರ ಅಲ್ಲಿ ಪರಿಶೀಲಿಸಿದಾಗ 70 ತೊಲ ಬಂಗಾರದ ಆಭರಣಗಳು, 80 ಸಾವಿರ ನಗದು, ಅನೇಕ ಪಾಸ್ ಪೋರ್ಟ್ ಗಳು, ಭಗವದ್ಗೀತೆ ಸಿಕ್ಕಿದೆ. ಇದೆಲ್ಲವನ್ನು ನಾವು ಪೊಲೀಸ್ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದೇವೆ” ಎಂದು ಪಟೇಲ್ ತಿಳಿಸಿದರು. ಪಟೇಲ್ ಹಾಗೂ ಅವರ ತಂಡಕ್ಕೆ ರಾತ್ರಿ 9 ಗಂಟೆಯ ತನಕ ಅಲ್ಲಿ ರಕ್ಷಣಾ ಕಾರ್ಯಗಳಿಗೆ ಕೈಜೋಡಿಸಲು ಅನುಮತಿ ನೀಡಲಾಗಿತ್ತು.

0
Shares
  • Share On Facebook
  • Tweet It




Trending Now
ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
TULUNADU NEWS June 29, 2026
ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
TULUNADU NEWS June 26, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
  • Popular Posts

    • 1
      ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • 2
      ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!

  • Privacy Policy
  • Contact
© Tulunadu Infomedia.

Press enter/return to begin your search