• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ – ಒಬ್ಬನ ಬಂಧನ!

TULUNADU NEWS Posted On June 18, 2025
0


0
Shares
  • Share On Facebook
  • Tweet It

ಮಂಗಳೂರಿನಲ್ಲಿ ಪುಟ್ಟ ಮಕ್ಕಳನ್ನು ಕದ್ದು ಮಾರಾಟ ಮಾಡುವ ಜಾಲ ಈಗ ಬೆಳಕಿಗೆ ಬಂದಿದೆ. ಕಳ್ಳರು ನೇರವಾಗಿ ಮಂಗಳೂರಿನ ಜನನಿಬಿಡ ಪ್ರದೇಶಕ್ಕೆ ದಾಂಗುಡಿ ಇಡುತ್ತಿರುವುದು ನಿಜಕ್ಕೂ ಆತಂಕಕಾರಿ ವಿಷಯ. ಜೂನ್ 18 ರಂದು ಮಗುವಿನ ಅಪಹರಣ, ಮಾರಾಟಕ್ಕೆ ಯತ್ನದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಇದು ಪೋಷಕರಿಗೆ ನಿಜಕ್ಕೂ ಎಚ್ಚರಿಕೆಯ ಗಂಟೆಯಾಗಲಿ ಎನ್ನುವುದು ತುಳುನಾಡು ನ್ಯೂಸ್ ಆಶಯ.
ಅಷ್ಟಕ್ಕೂ ಆದದ್ದೇನು?

ಒಂದರಿಂದ ಒಂದೂವರೆ ವರ್ಷ ಪ್ರಾಯದ ಒಳಗಿನ ಗಂಡು ಮಗುವೊಂದನ್ನು ಮೂವರು ಅತ್ತಾವರ ಪರಿಸರದಿಂದ ಅಪಹರಣ ಮಾಡಿದ್ದಾರೆ. ಅಲ್ಲಿಂದ ಮಗುವನ್ನು ಎತ್ತಿಕೊಂಡು ಅಪಹರಣಕಾರರು ಕೆಳರಥಬೀದಿಯಿಂದ ಬಂದರು ಪ್ರದೇಶಕ್ಕೆ ಹೋಗುವ ರಸ್ತೆಗೆ ಬಂದಿದ್ದಾರೆ. ಅಲ್ಲಿ ರಸ್ತೆಬದಿಯಲ್ಲಿ ಮಗುವನ್ನು ಬಿಟ್ಟು ಹೋಗಿದ್ದಾರೆ. ಅವರು ಅಲ್ಲಿ ಮಗುವನ್ನು ಯಾಕೆ ಬಿಟ್ಟು ಹೋದರು, ಯಾರಾದರೂ ಅದನ್ನು ಅಲ್ಲಿಂದ ಎತ್ತಿಕೊಂಡು ಹೋಗುವ ಪ್ಲಾನ್ ಇತ್ತಾ? ಅಥವಾ ಅಪಹರಣಕಾರರಿಗೆ ಎಲ್ಲಿಯಾದರೂ ಮುಂದೆ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಏನು ಗತಿ ಎನ್ನುವ ಹೆದರಿಕೆ ಉಂಟಾಯಿತಾ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಅಪಹರಣಕಾರರು ಒಟ್ಟು ಮೂರು ಜನ ಇದ್ದರು. ಅವರು ಮಗುವನ್ನು ಹಿಡಿದುಕೊಂಡು ಕೆಳರಥಬೀದಿಯಲ್ಲಿ ಒಂದು ನಿರ್ಮಾಣ ಹಂತದ ಕಟ್ಟಡದ ಒಳಗೆ ಹೋಗಿ ಅಲ್ಲಿ ಒಬ್ಬನನ್ನು ಕುಳ್ಳಿರಿಸಿ, ಉಳಿದ ಇಬ್ಬರು ಅಲ್ಲಿಂದ ಹೊರಗೆ ಬಂದು ಬಂದರು ಪ್ರದೇಶಕ್ಕೆ ಹೋಗುವ ರಸ್ತೆಯಲ್ಲಿ ನಡೆದುಕೊಂಡು ಹೋಗಿದ್ದಾರೆ. ಇದೆಲ್ಲವೂ ನಿರ್ಮಾಣ ಹಂತದ ಕಟ್ಟಡದ ಎದುರಿನ ಮಳಿಗೆಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಮಗುವಿನ ನಾಪತ್ತೆ ಪ್ರಕರಣದ ಕುರಿತು ಆ ಮಗುವಿನ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರಿಂದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ವಿಚಾರಿಸುವಾಗ ಅಪಹರಣಕಾರರ ಸುಳಿವು ದೊರಕಿದೆ. ಸದ್ಯ ಅಡಗಿ ಕುಳಿತು ತನ್ನ ಸಹಚರರನ್ನು ಕಾಯುತ್ತಾ ಇದ್ದವನನ್ನು ಪೊಲೀಸರು ಹಿಡಿದು ವಿಚಾರಣೆ ನಡೆಸುತ್ತಿದ್ದಾರೆ. ಅಪಹರಣಕಾರರು ಕೇರಳದಿಂದ ಮಂಗಳೂರಿಗೆ ಬಂದು ಮಕ್ಕಳನ್ನು ಅಪಹರಿಸಿ ಮಾರಾಟ ಮಾಡುವ ಯೋಜನೆ ಹಾಕಿಕೊಂಡಿದ್ದರು ಎಂದು ತಿಳಿದುಬಂದಿದೆ. ಪೊಲೀಸರು ಒಬ್ಬ ಆರೋಪಿ ಕೊಟ್ಟ ಮಾಹಿತಿಯನ್ನು ಆಧರಿಸಿ ಉಳಿದ ಇಬ್ಬರನ್ನು ಬಂಧಿಸುವ ತಯಾರಿಯಲ್ಲಿದ್ದಾರೆ. ಮಗು ಸದ್ಯ ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದೆ. ಈ ಪ್ರಕರಣದಲ್ಲಿ ಮಗುವಿನ ಹೆತ್ತವರ ಅದೃಷ್ಟ ಚೆನ್ನಾಗಿತ್ತು. ಅದಕ್ಕಾಗಿ ಮಗುವಿಗೆ ಏನೂ ಪ್ರಾಣಾಪಾಯವಾಗಲಿಲ್ಲ.

ಇನ್ನು ಕೆಲವು ಸಂದರ್ಭದಲ್ಲಿ ಮಗುವನ್ನು ಅಪಹರಿಸಿಕೊಂಡು ಹೋಗುವಾಗ ಅತ್ತರೆ, ತಮಗೆ ಸಂಕಷ್ಟ ಬರುತ್ತದೆ ಎನ್ನುವ ಕಾರಣಕ್ಕೆ ಅಪಹರಣಕಾರರೇ ಮಗುವಿನ ಕತ್ತು ಹಿಸುಕಿ ಮಗುವನ್ನು ಸಾಯಿಸಿದ ಘಟನೆಗಳು ದೇಶದ ಬೇರೆಡೆ ನಡೆದಿದೆ. ಒಟ್ಟಿನಲ್ಲಿ ಪುಟ್ಟ ಮಕ್ಕಳ ಪೋಷಕರು ಮಕ್ಕಳನ್ನು ಒಂಟಿಯಾಗಿ ಬಿಟ್ಟು ಹೋಗುವುದು ನಿಜಕ್ಕೂ ಅಪಾಯಕ್ಕೆ ಆಹ್ವಾನ ನೀಡಿದಂತೆ. ಆದ್ದರಿಂದ ಈಗ ಈ ಆರೋಪಿಗಳು ಬಂಧನಕ್ಕೆ ಒಳಗಾದರೂ ಇಂತವರ ಸಂಖ್ಯೆ ಇನ್ನಷ್ಟು ಇರುವ ಸಾಧ್ಯತೆ ಇದೆ. ಈ ಬಗ್ಗೆ ನೂತನ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿಯವರು ಸೂಕ್ತ ಕ್ರಮ ಕೈಗೊಳ್ಳಲಿ ಎನ್ನುವುದು ನಮ್ಮ ಆಶಯ.

0
Shares
  • Share On Facebook
  • Tweet It




Trending Now
ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
TULUNADU NEWS February 4, 2026
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
TULUNADU NEWS January 30, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
  • Popular Posts

    • 1
      ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!

  • Privacy Policy
  • Contact
© Tulunadu Infomedia.

Press enter/return to begin your search