ಭಯೋತ್ಪಾದನೆಗಾಗಿ ಹಣ: ಜಮ್ಮು, ದೆಹಲಿಯ 11 ಕಡೆ ಎನ್‌ಐಎ ದಾಳಿ
Posted On September 6, 2017
ದೆಹಲಿ: ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಮತ್ತೆ ಎನ್‌ಐಎ ಭೂತವಾಗಿ ಪರಿಣಮಿಸಿದ್ದು, ಭಯೋತ್ಪಾದನೆಗೆ ಹಣ ನೆರವು ನೀಡುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಮತ್ತು ಜಮ್ಮು ಕಾಶ್ಮೀರದ 11 ಕಡೆ ಬುಧವಾರ ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ದಾಳಿ ನಡೆಸಿದೆ. ಶ್ರೀನಗರದಲ್ಲಿ ಆರು ಕಡೆ ಹಾಗೂ ದೆಹಲಿಯ ಐದು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ದೇಶದ್ರೋಹಿ ಚಟುವಟಿಕೆಗಳಿಗೆ ಇಂಬು ನೀಡಲು, ಹಲವು ಅಪರಾಧಗಳಲ್ಲಿ ಪ್ರತ್ಯೇಕತಾವಾದಿಗಳು ಭಾಗಿಯಾಗಿದ್ದರು ಎಂಬ ಆರೋಪದಲ್ಲಿ ದಾಳಿ ಮಾಡಲಾಗಿದೆ ಎಂದು ಎನ್‌ಐಎ ಹಿರಿಯ ಅಧಿಕಾರಿಗಳು ತಿಳಿಸಿದ್ದಾಾರೆ.
ಕಳೆದ ತಿಂಗಳಷ್ಟೇ, ಭಯೋತ್ಪಾದನೆ ಚಟುವಟಿಕೆಗಳಿಗೆ ಪಾಕಿಸ್ತಾನದಿಂದ ಹಣದ ನೆರವು ಪಡೆಯುತ್ತಿದ್ದ ಆರೋಪದ ಮೇಲೆ ಏಳು ಮಂದಿ ಪ್ರತ್ಯೇಕತಾವಾದಿಗಳನ್ನು ಬಂಧಿಸಿತ್ತು.
ಪ್ರತ್ಯೇಕತಾವಾದಿ ಮುಖಂಡ ಸೈಯದ್ ಅಲಿ ಶಾಹ ಗಿಲಾನಿ ಅಳಿಯ ಅಲ್ತಾಾಫ್ ಶಾರನ್ನು ಇದುವರೆಗೆ ಪ್ರಕರಣದಲ್ಲಿ ಬಂಧಿಸಲಾಗಿದೆ.
- Advertisement -
Leave A Reply