ತ್ರಿವಳಿ ತಲಾಖ್ ಅಸಿಂಧು: ಇಸ್ರತ್ ಜಹಾನ್‌ಗೆ ಹಿಂಸೆ
Posted On September 6, 2017
ದೆಹಲಿ: ಮುಸ್ಲಿಿಂ ಮಹಿಳೆಯರಿಗೆ ಮಾರಕವಾಗಿದ್ದ ತ್ರಿವಳಿ ತಲಾಖ್ ಅಸಿಂಧುಗೊಳಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡುವಲ್ಲಿ ಪಮುಖ ಪಾತ್ರ ವಹಿಸಿದ, ತಲಾಖ್ ವಿರುದ್ಧ ಹೋರಾಡಿದ್ದ ಇಶ್ರತ್ ಜಹಾನ್‌ಗೆ ಈಗ ತೀರ್ಪೇ ಶಾಪವಾಗಿ ಪರಣಿಸಿದೆ.
ಪಶ್ಚಿಮ ಬಂಗಾಳ ಮೂಲದ ಇಶ್ರತ್ ಜಹಾನ್‌ಗೆ ಜೀವನ ಕಷ್ಟಕರವಾಗಿದ್ದು, ಸಮುದಾಯದವರು ಕಡೆಗಣಿಸಿದ್ದಾರೆ ಎಂದು ತಿಳಿದುಬಂದಿದೆ.
ಬಕ್ರಿಿದ್ ಹಬ್ಬ ನನ್ನಲ್ಲಿ ಏಕಾಂಗಿ ಭಾವ ತಂದಿದೆ. ಯಾರೂ ಹಬ್ಬದ ಶುಭ ಕೋರಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನನ್ನ ಸಂಬಂಧಿಕರು ದೂರು ಹಿಂಪಡೆಯುವಂತೆ ಆಗ್ರಹಿಸಿದ್ದು, ಮುಸ್ಲಿಿಂ ಧರ್ಮದ ಸಂಪ್ರದಾಯವನ್ನು ವಿರೋಧಿಸುತ್ತಿಿದ್ದಾಾಳೆ ಎಂದು ಆರೋಪಿಸುತ್ತಿಿದ್ದಾಾರೆ ಎಂದು ದೂರಿದ್ದಾರೆ.
ಅದರಲ್ಲೂ ನನ್ನ ಕುರಿತು ಮಾಧ್ಯಮದಲ್ಲಿ ವರದಿಯಾಗುವುದರಿಂದ ಇದು ಮತ್ತಷ್ಟು ಸಮಸ್ಯೆಯಾಗಿದೆ. ಸಾರ್ವಜನಿಕವಾಗಿ ಓಡಾಡುವುದೇ ಸಾಧ್ಯವಾಗುತ್ತಿಲ್ಲ. ನನ್ನ ಪತಿಯೂ ಕಿರುಕುಳ ನೀಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
- Advertisement -
Leave A Reply