ಭಾರತದಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿದ ಕೇಂದ್ರ ಗೃಹ ಸಚಿವರಾಗಿ ಅಮಿತ್ ಶಾ ದಾಖಲೆ!

ನ್ಯಾಶನಲ್ ಡೆಮೊಕ್ರೆಟಿಕ್ ಅಲಾಯೆನ್ಸ್ (ಎನ್ ಡಿಎ) ಅಧಿಕಾರಕ್ಕೆ ಬಂದು 11 ವರ್ಷಗಳಾಗುತ್ತಿವೆ. ಈ ಹಂತದಲ್ಲಿ ಭಾರತೀಯ ಜನತಾ ಪಾರ್ಟಿಯ ಚಾಣಕ್ಯ ಎಂದೇ ಖ್ಯಾತರಾಗಿರುವ ಅಮಿತ್ ಶಾ ಅವರು ಹೊಸ ದಾಖಲೆಯೊಂದನ್ನು ಸದ್ದಿಲ್ಲದೇ ತಮ್ಮ ಹೆಸರಿನಲ್ಲಿ ಬರೆಸಿಕೊಂಡಿದ್ದಾರೆ. ಅದು ಯಾವುದೆಂದರೆ ಕೇಂದ್ರ ಗೃಹಸಚಿವರಾಗಿ ಅತೀ ದೀರ್ಘ ಅವಧಿಗೆ ಜವಾಬ್ದಾರಿಯನ್ನು ನಿರ್ವಹಿಸಿರುವುದು. ಅಮಿತ್ ಶಾ ಈಗಾಗಲೇ ದೇಶದ ಪ್ರಮುಖ ಹುದ್ದೆಯಲ್ಲಿ ಒಟ್ಟು 2258 ದಿನಗಳನ್ನು ಕಳೆದಿದ್ದು, ಇದು ಐತಿಹಾಸಿಕ ದಾಖಲೆಯಾಗಿ ಉಳಿಯಲಿದೆ. ಈ ಮೂಲಕ ಅವರು ತಮ್ಮದೇ ಪಕ್ಷದ ಹಳೆಹುಲಿ ಲಾಲ್ ಕೃಷ್ಣ ಅಡ್ವಾಣಿಯವರ ಅಧಿಕಾರಾವಧಿಯನ್ನು ಮೀರಿಸಿದ್ದಂತೆ ಆಗಿದೆ. ಅಮಿತ್ ಶಾ ಅವರು ಮೋದಿಯವರ ಎರಡನೇ ಇನ್ಸಿಂಗ್ಸ್ ಆರಂಭವಾದ 2019, ಮೇ 30 ರಂದು ಗೃಹ ಸಚಿವರಾಗಿ ಮೊದಲ ಬಾರಿ ಅಧಿಕಾರ ಸ್ವೀಕರಿಸಿದರು.
ಸಂಸತ್ತಿನ ಲೈಬ್ರರಿ ಕಟ್ಟಡದಲ್ಲಿ ನಡೆದ ಎನ್ ಡಿಎ ಸಭೆಯಲ್ಲಿ ಮುಂಗಾರು ಅಧಿವೇಶನದ ಬಗ್ಗೆ ರೂಪುರೇಶೆಗಳ ಚರ್ಚೆಯ ಸಂದರ್ಭದಲ್ಲಿ ಮೋದಿಯವರು ಅಮಿತ್ ಶಾ ಅವರನ್ನು ಅಭಿನಂದಿಸಿದರು. ಈ ಸಾಧನೆಯಲ್ಲಿ ಜಮ್ಮು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವ ವಿಶೇಷ ಮೈಲಿಗಲ್ಲುಗಳು ಕೂಡ ಸೇರಿದೆ. ಕಾಂಗ್ರೆಸ್ಸಿನ ಗೋವಿಂದ ವಲ್ಲಭಬಾಯ್ ಪಂತ್ ಹಾಗೂ ಲಾಲ್ ಕೃಷ್ಣ ಅಡ್ವಾಣಿಯವರು ಅತ್ಯಧಿಕ ದಿನಗಳು ಗೃಹ ಸಚಿವರಾಗಿ ನಂತರದ ಸ್ಥಾನದಲ್ಲಿದ್ದಾರೆ. ಅಡ್ವಾಣಿಯವರು 2,256 ದಿನ ( ಮಾರ್ಚ್ 19, 1998 ರಿಂದ ಮೇ 22, 2004) ಹಾಗೂ ಗೋವಿಂದ ಭಲ್ಲಭ್ ಪಂಥ್ ಜನವರಿ 10 ರಿಂದ ಮಾರ್ಚ್ 7, 1961 ಒಟ್ಟು ಆರು ವರ್ಷ 56 ದಿನಗಳು ಅಧಿಕಾರದಲ್ಲಿದ್ದರು.
ಅಮಿತ್ ಶಾ ಅವರು ಮೇ 30, 2019 ರಿಂದ ಅಗಸ್ಟ್ 4, 2025 ರ ತನಕ ಒಟ್ಟು 2258 ದಿನಗಳನ್ನು ಪೂರೈಸಿ ಅದೇ ಸ್ಥಾನದಲ್ಲಿ ಮುಂದುವರೆಯುತ್ತಿದ್ದಾರೆ.