ಅಗಸ್ಟ್ 16 ರಂದು ಧರ್ಮಸ್ಥಳ ಚಲೋ ಅಭಿಯಾನ – ಶಾಸಕ ವಿಶ್ವನಾಥ!

ಅಗಸ್ಟ್ 16 ರಂದು ಯಲಹಂಕದಿಂದ ಧರ್ಮಸ್ಥಳಕ್ಕೆ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎಸ್. ಆರ್. ವಿಶ್ವನಾಥ್ ಅವರು ಹೇಳಿದ್ದಾರೆ. ಧರ್ಮಸ್ಥಳ ಮಂಜುನಾಥ ಸ್ವಾಮಿ ತುಂಬಾ ಪವರ್ ಫುಲ್, ಮಂಜುನಾಥ ಸ್ವಾಮಿಯ ಮೇಲೆ ಆಣೆ ಮಾಡಲು ಹೆದರುತ್ತಾರೆ. ಅಂತಹ ಮಂಜುನಾಥನ ಸನ್ನಿಧಿ ಧರ್ಮಸ್ಥಳದ ಮೇಲೆ ವಿನಾಕಾರಣ ಅಪಪ್ರಚಾರ ಮಾಡಲಾಗುತ್ತಿದೆ. ಹಾಗಾಗಿ 200 ಕ್ಕೂ ಹೆಚ್ಚು ಕಾರುಗಳ ಮೂಲಕ ಧರ್ಮಸ್ಥಳದೊಂದಿಗೆ ನಾವಿದ್ದೇವೆ ಎಂಬ ಘೋಷವಾಕ್ಯದೊಂದಿಗೆ ಕಾರುಗಳಿಗೆ ಕೇಸರಿ ಧ್ವಜ ಕಟ್ಟಿಕೊಂಡು ಧರ್ಮಸ್ಥಳಕ್ಕೆ ತೆರಳಲಿದ್ದೇವೆ. ಅಲ್ಲಿ ದೇವರ ದರ್ಶನ ಪಡೆದು ವಾಪಾಸು ಬರಲಿದ್ದೇವೆ. ನಮ್ಮ ನಂತರ ರಾಜ್ಯದ ಇತರೆ ಕ್ಷೇತ್ರಗಳಿಂದಲೂ ಈ ಅಭಿಯಾನ ಆರಂಭವಾಗಲಿದೆ ಎಂದು ಅವರು ಹೇಳಿದರು.
ಧರ್ಮಸ್ಥಳದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳು ಬೇಸರ ತರಿಸಿವೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಧರ್ಮಸ್ಥಳ ಶ್ರೇಷ್ಟ ಹಾಗೂ ಪವಿತ್ರವಾದ ಕ್ಷೇತ್ರ. ಹೀಗಾಗಿ ಧರ್ಮಸ್ಥಳದ ಜೊತೆ ನಾವಿದ್ದೇವೆ ಎಂದು ಬಿಜೆಪಿ ಮುಖಂಡ, ಶಾಸಕ ಎಸ್ ಆರ್ ವಿಶ್ವನಾಥ ಹೇಳಿದರು. ಇನ್ನೂ ಪ್ರಕರಣದಲ್ಲಿ ಅತ್ಯಾಚಾರ ಹಾಗೂ ಕೊಲೆಯಾದವರನ್ನು ನಾನು ಹೂತು ಹಾಕಿದ್ದೇನೆ ಎಂಬ ಅನಾಮಿಕನ ಹೇಳಿಕೆ ನೋಡಿದ್ರೆ, ಅವನನ್ನೇ ಮೊದಲು ಗಲ್ಲಿಗೇರಿಸಬೇಕು. ಅತ್ಯಾಚಾರ ಕೊಲೆ ಆಗಿರೋದು ಗೊತ್ತಿದ್ದೂ ಹೂತು ಹಾಕಿದ್ರೆ ಆತ ಕೂಡ ಆರೋಪಿಯೇ. ಹಾಗಾಗಿ ಮೊದಲು ಆತನನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು. ಈತ ಅನಾಥ ಶವಗಳನ್ನು ಊಳುವವನಾಗಿದ್ದು, ಅನಾಥ ಶವಗಳ ಮೇಲಿನ ಚಿನ್ನಾಭರಣ ಕದ್ದು ಅಂತ ಕೆಲಸದಿಂದ ತೆಗೆದು ಹಾಕಿದ್ರು ಅಂತ ಗೊತ್ತಾಗಿದೆ. ಈಗ ಬಂದು ಮಂಜುನಾಥ ಸ್ವಾಮಿಯ ಮೇಲೆಯೇ ಅಪಪ್ರಚಾರ ಮಾಡುತ್ತಿದ್ದಾನೆ ಅಂತ ವಾಗ್ದಾಳಿ ನಡೆಸಿದರು.