ಬ್ರಿಕ್ಸ್ ನಿರ್ಣಯದಿಂದ ಪಾಕ್‌ಗೆ ನಡುಕ, ಚೀನಾಗೆ ಭೇಟಿ ನೀಡಲಿರುವ ಪಾಕ್ ಸಚಿವ
Posted On September 7, 2017

ಬೀಜಿಂಗ್: ಬೀಜಿಂಗ್‌ನಲ್ಲಿ ಇತ್ತೀಚೆಗೆ ನಡೆದ ಬ್ರಿಕ್ಸ್ ಸಮ್ಮೇಳನದಲ್ಲಿ ಪಾಕ್ ಮೂಲದ ಭಯೋತ್ಪಾದನೆ ಸಂಘಟನೆಗಳ ವಿರುದ್ಧ ನಿರ್ಣಯ ಕೈಗೊಂಡಿದ್ದರಿಂದ ಭೀತಿಗೆ ಒಳಗಾಗಿರುವ ಪಾಕ್, ಚೀನಾ ಕಾಲು ಹಿಡಿಯಲು ಗುರುವಾರ ಪಾಕ್ ವಿದೇಶಾಂಗ ಸಚಿವ ಮಹಮ್ಮದ್ ಆಸೀಫ್ ಭೇಟಿ ನೀಡಿದ್ದು, ಬ್ರಿಕ್ಸ್ ನಿರ್ಣಯದ ಕುರಿತು ಚರ್ಚಿಸಲಿದ್ದಾರೆ.
ಬ್ರಿಕ್ಸ್‌ನಲ್ಲಿ ಚೀನಾ ಪಾಕ್ ಮೂಲದ ಭಯೋತ್ಪಾದನೆ ಸಂಘಟನೆಗಳಾದ ಲಷ್ಕರ್ ಈ ತಯ್ಯಬಾ, ಜೈಷ್ ಈ ಮಹಮ್ಮದ್‌ನ ಭಯೋತ್ಪಾದನೆ ಚಟುವಟಿಕೆಗಳನ್ನು ಖಂಡಿಸಿದಲ್ಲದೇ, ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಭಾರತದ ವಾದಕ್ಕೆ ಬೆಂಬಲ ನೀಡಿತ್ತು. ಇದರಿಂದ ಪಾಕಿಸ್ತಾನಕ್ಕೆ ನಡುಕ ಉಂಟಾಗಿದ್ದು, ಚೀನಾ ನಿರ್ಧಾರದ ಕುರಿತು ಚರ್ಚಿಸಲು ನಿರ್ಧರಿಸಿದೆ.
ಬ್ರಿಕ್ಸ್ ನಿರ್ಣಯವನ್ನು ನಿರಾಕರಿಸಿರುವ ಪಾಕ್ ಭಯೋತ್ಪಾದನೆ ಕುರಿತು ತನ್ನ ಆತ್ಮಿಯ ಗೆಳೆಯ ಚೀನಾಕ್ಕೆ ಮನವರಿಕೆ ಮಾಡಿಕೊಡಲು ನಿರ್ಧರಿಸಿದೆ. ಪಾಕ್ ವಿದೇಶಾಂಗ ಸಚಿವ ಆಸೀಫ್ ಬ್ರಿಕ್‌ಸ್ ನಿರ್ಣಯದ ಕುರಿತು ಆಲೋಚಿಸುವಂತೆ ಮನವರಿಕೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
- Advertisement -
Trending Now
ಮಲ್ಟಿಪ್ಲೆಕ್ಸ್ ಟಿಕೆಟ್ ದರ ಗರಿಷ್ಟ 200 ರೂಗೆ ಫಿಕ್ಸ್ ಯಾವಾಗ?
March 14, 2025
ಬೇಸಿಗೆಯಲ್ಲಿ ವಕೀಲರು ಕೋಟ್ ಧರಿಸಬೇಕಿಲ್ಲ!
March 14, 2025
Leave A Reply