ಮುಂಬೈ ಸ್ಫೋಟ ಪಾತಕಿಗಳಿಗೆ ಗಲ್ಲು, ಜೀವಾವಧಿ ಶಿಕ್ಷೆ
ಮುಂಬೈ: ಮುಂಬೈ ಬಾಂಬ್ ಸ್ಫೋಟದಲ್ಲಿ 257 ಜನರ ಮಾರಣ ಹೋಮ ಮಾಡಿ, 700 ಜನರಿಗೆ ಗಂಭೀರ ಗಾಯಗೊಳಿಸಿದ್ದ ಅಪರಾಧಿಗಳಿಗೆ ವಿಶೇಷ ಟಾಡಾ ನ್ಯಾಯಾಲಯ ಗುರುವಾರ ಶಿಕ್ಷೆ ಪ್ರಮಾಣ ಘೋಷಿಸಿದೆ.
ಶಿಕ್ಷೆ ಪ್ರಮಾಣ
- ಮೊಹಮ್ಮದ ತಾಹೀರ್ ಮರ್ಚ್‌ಂಟ್‌ಗೆ ಗಲ್ಲು ಶಿಕ್ಷೆ
- ಫೀರೋಜ್ ಖಾನ್‌ಗೆ ಗಲ್ಲು ಶಿಕ್ಷೆ
- ಅಬುಸಲೇಂಗೆ ಜೀವಾವಧಿ ಶಿಕ್ಷೆ
- ರೀಯಾಜ್ ಸಿದ್ಧಿಕಿಗೆ 10ವರ್ಷ ಜೀವಾವಧಿ ಶಿಕ್ಷೆ
- ಪಾತಕಿ ಕರೀಮುಲ್ಲಾ ಖಾನ್‌ಗೆ ಜೀವಾವಧಿ ಶಿಕ್ಷೆ, ಎರಡು ಲಕ್ಷ ದಂಡ
- ಮುಸ್ತಫಾ ದೂಸಾ ಮೃತಪಟ್ಟಿದ್ದಾನೆ
ನ್ಯಾಯಮೂರ್ತಿ ಜಿ.ಎ.ಸನಾಪ್ ಅವರ ಪೀಠವು ಪ್ರಕರಣ ಸಂಬಂಧಿಸಿ ವಿಚಾರಣೆ ನಡೆಸಿದ್ದು ಜೂನ್ 28ರಂದು ಸ್ಪೋಟದ ರೂವಾರಿ ಮುಸ್ತಫಾ ದೊಸಾ ಮತ್ತು ಅಬು ಸಲೇಂ ಸೇರಿ ಆರು ಆರೋಪಿಗಳಾದ ಫಿರೋಜ್ ಖಾನ್, ಮೊಹಮ್ಮದ್ ತಾಹೀರ್ ಮರ್ಚಂಟ್, ಕರಿಮುಲ್ಲಾ ಖಾನ್ ಮತ್ತು ರಿಯಾಜ್ ಅಹ್ಮದ್ ಸಿದ್ದಿಕಿ ಮುಂತಾದವರನ್ನು ದೋಷಿಗಳೆಂದು ತೀರ್ಪು ನೀಡಿತ್ತು.
2015ರಲ್ಲಿ ಯಾಕೂಬ್ ಮೆನನ್‌ನನ್ನು ಗಲ್ಲಿಗೇರಿಸಲಾಗಿತ್ತು. 2005ರಲ್ಲಿ ಸಿಬಿಐ ಅಬು ಸಲೇಂ, ತಾಹೀರ್ ಮರ್ಚಂಟ್ ಮತ್ತು ಕರಿಮ್ಲುಲಾ ಖಾನ್ ವಿರುದ್ದ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದರು. ಸಲೇಂ ನನ್ನು 2005ರಲ್ಲಿ ಪೋರ್ಚುಗಲ್‌ನಿಂದ ಗಡೀಪಾರು ಮಾಡಲಾಗಿತ್ತು. ಗುಜರಾತ್‌ನಿಂದ ಮುಂಬೈಗೆ ಶಸ್ತ್ರಾಸ್ತ್ರ ಸಾಗಿಸಿದ ಆರೋಪ ಸಲೀಂ ಮೇಲಿದೆ. ಮಾರ್ಚ್ 12, 1993ರಲ್ಲಿ ನಡೆದ ಸ್ಫೋಟದಲ್ಲಿ 257 ಜನ ಮೃತಪಟ್ಟು, 700 ಜನ ಗಂಭೀರವಾಗಿ ಗಾಯಗೊಂಡಿದ್ದರು. ಸ್ಫೋಟದ ಹಿಂದೆ ಭಯೋತ್ಪಾಾದಕ ದಾವೂದ್ ಇಬ್ರಾಹಿಂ ಮತ್ತು ಚೋಟಾ ರಾಜನ್ ಇದ್ದಿದ್ದರೂ ಎಂಬುದು ಸಾಬೀತಾಗಿತ್ತು.
Leave A Reply